ಹಗರಿಬೊಮ್ಮನಹಳ್ಳಿ

ಅಧ್ಯಕ್ಷೆಯಾಗಿ ಚಲವಾದಿ ಶಾಂತ ನಾಗರಾಜ್ ಅವಿರೋಧ ಆಯ್ಕೆ

ಅಧ್ಯಕ್ಷೆಯಾಗಿ ಚಲವಾದಿ ಶಾಂತ ನಾಗರಾಜ್ ಅವಿರೋಧ ಆಯ್ಕೆ

ಹಗರಿಬೊಮ್ಮನಹಳ್ಳಿ .06: ತಾಲೂಕಿನ ಕಡಲಬಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ತಹಶಿಲ್ದಾರ್ ಶರಣಮ್ಮ ಅವರ ನೇತೃತ್ವದಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಲವಾದಿ ಶಾಂತ ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದು ಕಡಲಬಾಳು ಗ್ರಾಮ ಪಂಚಾಯತಿಯು ಕಮಲ ಪಾಳಯದ ಪಾಲಾಗಿದೆ.  

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಸಂತೋಷ್, ಎಚ್‌. ದೊಡ್ಡಬಸಪ್ಪ, ಚಲುವಾದಿ ರಮೇಶ್, ಒಂಟಿಗೋಡಿ ವಿರುಪಣ್ಣ. ಎಮ್‌.ಎಮ್‌. ಅನ್ನಪೂರ್ಣಮ್ಮ, ರಾಮಪ್ಪ ಬ್ಯಾಟಿ ರಾಮಪ್ಪ, ತಾಲೂಕು ಬಿ.ಜೆ.ಪಿ. ಮಂಡಲ ಕಾರ್ಯದರ್ಶಿ ಬ್ಯಾಟಿ ನಾಗರಾಜ್, ಮುಖಂಡರಾದ ಬಾರಿಕರ ಬಸವರಾಜ್, ಮಂಜುನಾಥ ಗೌಡ್ರು, ರಾಜಶೇಖರ್, ಏ.ಎಮ್‌. ನಾಗರಾಜ್, ಯುವ ಮುಖಂಡ ಎ.ಎಂ.ಶಾಂತವೀರಸ್ವಾಮಿ, ಬಸವರಾಜ, ರುದ್ರೇಶ್, ಒಂಟಿಗೋಡಿ ವಿಜಯಕುಮಾರ, ಅರುಣಕುಮಾರ್, ಕೊಟ್ರೇಶ್ ಇದ್ದರು. 


ಸುದ್ದಿ ಓದಿ