ರಾಘವೇಂದ್ರ ನೀಲನ್ನವರಗೆ ಚಕ್ರವರ್ತಿ ರನ್ನ ಪ್ರಶಸ್ತಿ
ಮಹಾಲಿಂಗಪುರ 28: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಗುರು ಪೂರ್ಣಿಮೆಯ ನಿಮಿತ್ಯವಾಗಿ ರವಿವಾರ ದಂದು ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ ಅವರ ಆಶ್ರಯದಲ್ಲಿ ಕವಿ ಚಕ್ರವರ್ತಿ ರನ್ನ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕವಿ ಗೋಷ್ಠಿ, ರನ್ನನ ಕುರಿತು ವಿಶೇಷ ಉಪನ್ಯಾಸ ಪುಸ್ತಕ ಬಿಡುಗಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿತು.
ರನ್ನ ಬೆಳಗಲಿಯ ಯೋಗ ಶಿಕ್ಷಕರು ಮತ್ತು ಉಪನ್ಯಾಸಕ ರಾಘವೇಂದ್ರ ನೀಲನ್ನವರ ಅವರ ಸೇವಾ ಕಾರ್ಯವನ್ನು ಗುರುತಿಸಿ ಕವಿ ಚಕ್ರವರ್ತಿ ರನ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ನಾಡಿನ ತುಂಬೆಲ್ಲ ಉಚಿತ ಯೋಗ ಶಿಕ್ಷಣ ಮತ್ತು ಉಪನ್ಯಾಸ ನೀಡುವುದರ ಜೊತೆಗೆ ತಮ್ಮದೇ ಆದ ಸಾರ್ಥಕ ಜೀವನವನ್ನು ನಡೆಸುತ್ತಿರುವದರೊಂದಿಗೆ ಸಾಹಿತಿಗಳಾಗಿ, ಪತ್ರಕರ್ತರಾಗಿ, ಸ್ಥಳೀಯ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜೊತೆಗೆ ಯೋಗ ಮತ್ತು ಜೀವನ ಯೋಗ ಮತ್ತು ಶಿಕ್ಷಣಗಳ ಕುರಿತು ವಸತಿ ಶಾಲೆಗಳಿಗೆ,ಆಶಾ ಕಾರ್ಯಕರ್ತರಿಗೆ,ಅನೇಕ ರೋಗಕ್ಕೆ ಪೀಡತರಾದ ರೋಗಿಗಳಿಗೆ,ವಿವಿಧ ಸಂಘ ಸಂಸ್ಥೆಗಳ ಯುವಕ, ಯುವತಿಯರ ಮಂಡಲಗಳಿಗೆ ಮತ್ತು ಎಲ್ಲಾ ಸ್ಥರಗಳ ವಿದ್ಯಾರ್ಥಿಗಳಿಗೆ ಯೋಗದ ಕುರಿತು ತರಬೇತಿ ಮತ್ತು ಉಪನ್ಯಾಸ ನೀಡುತ್ತಿದ್ದಾರೆ ಎಂದು ಹೇಳುವುದರ ಜೊತೆಗೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಬಸವಲಿಂಗ ಮಹಾಸ್ವಾಮಿಗಳು ವಿರಕ್ತಿಮಠ ಗವಿಮಠ ಮುಧೋಳ, ಸಾನಿಧ್ಯ ಅಲಂಕರಿಸಿದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕಮತಗಿ, ಅಧ್ಯಕ್ಷತೆ ವಹಿಸಿದ ಡಾ. ಶಿವಾನಂದ ಕುಬಸದ ಸಾಹಿತಿಗಳು, ಜಿಲ್ಲಾ ಕಸಾಪ ಅಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ, ಕಾರ್ಯಕ್ರಮದ ರೂವಾರಿಗಳು ಮತ್ತು ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ ರಮೇಶ ಕಮತಗಿ, ತಾಲೂಕ ಕಸಾಪ ಅಧ್ಯಕ್ಷರಾದ ಆನಂದ ಪೂಜಾರಿ, ಅರಳಿಕಟ್ಟಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ ತಿಮ್ಮಣ್ಣ ಅರಳಿಕಟ್ಟಿ, ಸಾಹಿತಿಗಳಾದ ಡಾ. ಮೈನುದ್ದಿನ್ ರೇವಾಡಿಗಾರ, ನಿಕಟಪೂರ್ವ ತಾಲೂಕ ಕಸಾಪ ಅಧ್ಯಕ್ಷರಾದ ಸಂಗಮೇಶ ನೀಲಗುಂದ, ಜನಪದ ವಿದ್ವಾಂಸರಾದ ಡಾ ಸಿದ್ದು ಆರ್ ದಿವಾನ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಂವಿ ದಾಸರಡ್ಡಿ, ವಿಶ್ರಾಂತ ಉಪನಿರ್ದೇಶಕಎಂ ಜಿ ದಾಸರ, ತಾಲೂಕ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ರಮೇಶ ಅರಕೇರಿ ಹಾಗೂ ಮುಂತಾದವರು ಜೊತೆ ಸೇರಿ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.