ಕರ್ನಾಟಕದಲ್ಲಿ 40 ಸ್ಥಾನದಿಂದ ಜನಹಿತ ಮರೆತು, ಸ್ವಾರ್ಥ ಮೆರೆಯುವ ಕಾಂಗ್ರೆಸ್, ಜೆಡಿಎಸ್ ಅಧಿಕಾರದಿಂದ ದೂರ ಇಟ್ಟು ಬಿಜೆಪಿ ಬೆಂಬಲಿಸಿ : ಅಮಿತ್ ಶಾ
ಬೆಳಗಾವಿ, ಜ, 28 : ಭಾರತ ದೇಶವನ್ನು ಜಗತ್ತಿಗೆ ಗುರುತಿಸುವ ಕಾರ್ಯವನ್ನು ನಮ್ಮ ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ. ಜಗತ್ತಿನ 5 ಸ್ಥಾನ ದಲ್ಲಿ ಭಾರತ ಆರ್ಥಿಕ ತಂತ್ರ ದೇಶವಾಗಿ ಹೊರಹೊಮ್ಮುವಲ್ಲಿ ನಮ್ಮ ಸರಕಾರ ಕಾರ್ಯ ನಿರ್ವಹಿಸಿದೆ. ಆದರೆ ಕರ್ನಾಟಕದಲ್ಲಿ 35ರಿಂದ 40 ಶಾಸಕ ಸ್ಥಾನ ಗೆದ್ದು ಜನಹಿತ ಮರೆತು ಸ್ವಾರ್ಥಕ್ಕಾಗಿ ಅಧಿಕಾರ ಅನುಭವಿಸುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ದೂರ ಇರಿಸಿ ಬಿಜೆಪಿ ಬೆಂಬಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿಲ್ಲಿ ಹೇಳಿದರು.

ಅವರು ಎಮ್.ಕೆ ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಜನ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಲ್ಲಿ ನೀವು ಜೆಡಿಎಸ್ ಗೆ ನೀಡುವ ಮತ ಕಾಂಗ್ರೆಸ್ ಗೆ ಲಾಭವಾಗಲಿದೆ ಎನ್ನುವನ್ನು ಮರೆಯದಿರಿ ಎಂದು ನುಡಿದರು. ಇದೇ ಸೋನಿಯಾ ಮೆಡಂ ಅವರು, ಮಹದಾಯಿ ನದಿಯ ಒಂದು ಹನಿ ನೀರು ಕರ್ನಾಟಕಕ್ಕೆ ನೀಡುವದಿಲ್ಲ ಎಂದು ಹೇಳಿದ್ದರು. ಆದರೆ ನಮ್ಮ ಮೋದಿ ನೇತೃತ್ವದ ಬಿಜೆಪಿ ಸರಕಾರ ಎರಡು ರಾಜ್ಯದವರನ್ನು ಸಮಾಧಾನದಿಂದ ಬಿಜೆಪಿ ಸರಕಾರ ಈ ಸಮಸ್ಯೆ ಬಗೆ ಹರಿಸುವಲ್ಲಿ ಯಶ ಕಂಡಿದೆ. ಧಾರವಾಡ ಬೆಳಗಾವಿ ರೈಲು ವ್ಯವಸ್ಥೆ ಮಾಡುವಲ್ಲಿ ಕಾರ್ಯ ಮಾಡಿದ್ದೇವೆ. ಆದರೆ 35 40 ಸ್ಥಾನ ಪಡೆದು ಅಧಿಕಾರ ನಡೆಸುವ ಜೆಡಿಎಸ್ ಹಾಗೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿವೆ. ಅವುಗಳನ್ನು ಕರ್ನಾಟಕದಲ್ಲಿ ಅಧಿಕಾರದಿಂದ ದೂರ ಇಡುವಂತೆ ಕರೆ ನೀಡಿದರು.

ದೇಶದಲ್ಲಿ ಬಡ ದಲಿತರ ಹಾಗೂ ಸ್ತ್ರೀ ಶಕ್ತಿಯನ್ನು ಉತ್ತೇಜನ ನಮ್ಮ ಸರಕಾರ ಮಾಡಿದೆ. ಜಗತ್ತಿನಲ್ಲಿ 5 ಆರ್ಥಿಕ ತಂತ್ರ ದೇಶವಾಗಲು ಪ್ರಧಾನಿ ಮೋದಿ ನೇತೃತ್ವದ ನಮ್ಮ ಬಿಜೆಪಿ ಸರಕಾರ ಶ್ರಮಿಸುತ್ತಿದೆ. ಬಡವರಿಗೆ ವಿದ್ಯುತ್, ಮನೆ ಶೌಚಾಲಯ, ಅಡುಗೆ ಅನಿಲ, 5 ಲಕ್ಷ ವರೆಗೆ ಆರೋಗ್ಯ ವಿಮೆ ನೀಡುವ ಕಾರ್ಯ ಬಿಜೆಪಿ ಸರಕಾರ ಮಾಡುತ್ತಿದೆ. ಕೊವೀಡ ಲಸಿಕೆ ಉಚಿತವಾಗಿ 130 ಕೋಟಿ ಜನರಿಗೆ ಕೊರೊನಾದಿಂದ ಸುರಕ್ಷಿತವಾಗಿ ಇರುವಂತೆ ನಮ್ಮ ಬಿಜೆಪಿ ಸರಕಾರ ಕಾರ್ಯ ಮಾಡಿದೆ. ದಲಿತ ಸಮುದಾಯದ ಕೋವಿಂದ ಅವರನ್ನು ಹಾಗೂ, ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡುವಲ್ಲಿ ಬಿಜೆಪಿ ಅಭಿನಂದನೆನಿಯ ಕಾರ್ಯ ಮಾಡಿದೆ.
ದೇಶದಲ್ಲಿ 70 ವರ್ಷ ಕಾಂಗ್ರೆಸ್ ಅಧಿಕಾರ ಮಾಡಿದೆ. ಆದರೆ ಜಮ್ಮು ಕಾಶ್ಮೀರದಲ್ಲಿ ಆರ್ ಟಿಕಲ್ 370 ತೆಗೆದು ಹಾಕುವ ಮೂಲಕ ನಮ್ಮ ಸರಕಾರ ಕಾಶ್ಮೀರ ನಮ್ಮದು ಎಂದು ಸಾಬೀತು ಮಾಡಿದೆ. ಭಾರತ ಜಿ. 20 ಯಲ್ಲಿ ಸಮ್ಮಾನ ಆಗುತ್ತಿರುವದಕ್ಕೆ ಬಿಜೆಪಿ ಸರಕಾರ ಮತ್ತು ನಿಮ್ಮಲ್ಲರ ಸಹಕಾರ ಕಾರಣ ಎಂದರು. ಮೋದಿ ಅವರು 5 ಟ್ರಿಲಿಯನ್ ಲಕ್ಷ ಯೋಜನೆ ಮಾಡುವ ಗುರಿ ಇದೆ. ಇನ್ನೊಮ್ಮೆ ಮೋದಿ ಅವರನ್ನು ನಂಬಿ ಅವರನ್ನು ಆಯ್ಕೆ ಮಾಡಿ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.
ಕಿತ್ತೂರು ಚನ್ನಮ್ಮ ಸೇರಿ ಕರ್ನಾಟಕದಲ್ಲಿ ಹಲವಾರು ಮಹನಿಯರು ಬಲಿದಾನ ಮಾಡಿದ್ದಾರೆ. ವೀರಸಾವರ್ಕರ್ ಜೋತೆ ಆಲೂರು ವೆಂಕಟಾಕರ್ ಅವರನ್ನು ಸ್ಮರಿಸಿದರು. ವಿಧಾನ ಸಭೆಯಲ್ಲಿವೀರ ಸಾವರ್ ಕರ್ ಪೊಟೊ ಹಾಕಿದ್ದಕ್ಕೆ ಬೊಮ್ಮಾಯಿ ಸರಕಾರ ಅಭಿನಂದಸಿದರು. ಭಾಷಣದಲ್ಲಿ ಮೊದಲಿಗೆ ಸವದತ್ತಿ ಯಲ್ಲಮ್ಮದೇವಿಗೆ ಹಾಗೂ ಕಿತ್ತೂರು ಚನ್ನಮ್ಮ, ಬಸವಣ್ಣನವರ, ಕಲಾ ಮಠ ಸಿದ್ದಾರೂಢ ಮಠ, ಸಿದ್ದಯ ಶ್ರೀ ಗೆ ನಮಸ್ಕರಿಸಿ ಭಾಷಣ ಪ್ರಾರಂಭಿಸಿದರು. ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಪ್ಪಾಳೆ ತಟ್ಟಿ ಶುಭ ಕೋರುವಂತೆ ಜನತೆಗೆ ಮನವಿ ಮಾಡಿದರು.
ಕೇಂದ್ರದ ಸಚಿವ ಪ್ರಹ್ಲಾದ ಜೋಶಿ ಅವರು ಮಾತನಾಡಿ, ರಾಜ್ಯದಲ್ಲಿ ಹಲವು ಜನಪರ ಯೋಜನೆಗಳನ್ನು ನೀಡುವ ಮೂಲಕ ಪ್ರತಿ ವಾರದಲ್ಲಿ ಹೊಸ ಹೊಸ ಯೋಜನೆಗಳನ್ನು ಮೋದಿ ಅವರು ನೀಡಿದ್ದಾರೆ. ನಿಮ್ಮ ಕಾಲದಲ್ಲಿ ವಿದ್ಯುತ್ ನೀಡದ ಕಾಂಗ್ರೆಸ್ ಉಚಿತ 200 ಯುನಿಟ್ ನೀಡುವ ಭರವಸೆ ನೀಡಿದ್ದಿರಿ. ಹಿಂದಿನ ಐದು ವರ್ಷದಲ್ಲಿ ಯಾಕೆ ಉಚಿತ ವಿದ್ಯುತ್ ನೀಡಲಿಲ್ಲ. ಕೇವಲ ಸುಳ್ಳು ಹೇಳುತ್ತ ಐದು ವರ್ಷ ಕಾಲ ಕಳೆದಿದ್ದಿರಿ ಎಂದು ದೂರಿದರು. ಪಂಚಯಾತ್ರೆ ಮಾಡುತ್ತಿರುವ ಜೆಡಿಎಸ್ ಒಂದೇ ಕುಟುಂಬದ 9 ಜನ ಸೇರಿ ಮಾಡುವ ನವ ಗ್ರಹ ಸಮಾವೇಶ ಜೆಡಿಎಸ್ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, 2023 ಚುನಾವಣೆ ರಣಕಹಳೆ ಕಿತ್ತೂರು ನಾಡಿನಿಂದ ಪ್ರಾರಂಭವಾಗಿದೆ. ಮತ್ತೊಮ್ಮೆ ಬಿಜೆಪಿ ಅಭಿವೃದ್ಧಿ ಪರ ಕೆಲಸ ಮಾಡುವ ಸರಕಾರ ಅಧಿಕಾರಕ್ಕೆ ತರಲು ಶ್ರಮವಹಿಸಿ ಎಂದು. ಅಂದು ಕಣ್ಣಿಗೆ ಕಾಣುವ ಬ್ರಿಟಿಷ್ ರು ಇದ್ದರು. ಉಗ್ರವಾದ ಚಟುವಟಿಕೆ ಮಾಡಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಹೊರಟಿರುವವನ್ನು ಬಗ್ಗೆ ಬಡೆಯಲು ಅಮಿತ್ ಶಾ ಕಾರ್ಯ ಮಾಡುತ್ತಿದ್ದಾರೆ. ಪಿಎಫ್ ಐ ನಿಷೇಧ ಮೂಲಕ ದಿಟ್ಟ ಕಾರ್ಯ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಇರಲು ನಾವೆಲ್ಲರು ಕೈಜೋಡಿಸಬೇಕಾಗಿದೆ. ಪ್ರಧಾನಿ ಮೋದಿ ಅಮಿತ್ ಶಾ ಅವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ. ಯುಪಿಎ ಸರಕಾರದಲ್ಲಿ ಬಾಂಬ್ ಗಳ ಸದ್ದು ಮಾಡುತ್ತಿದ್ದವು. ಕಾಂಗ್ರೆಸ್ ಪ್ರಜಾಧ್ವಜ ಸಮಾವೇಶ ಹಿಂದುಳಿದ ವರ್ಗಗಳನ್ನು ಹಿಂದೆ ಬಿಟ್ಟಿದ್ದಿರಿ. ಅಪಪ್ರಚಾರ ಮಾಡಿ ಅಧಿಕಾರ ನಡೆಸಿ ಮೀಸಲಾತಿ ನೀಡದೆ ವಂಚಿಸಿ ದ್ದಿರಿ.
ಅದನ್ನು ಸರಿಒಡಿಸುವ ಕಾರ್ಯ ಡಬಲ್ ಇಂಜೆನ್ ಸರಕಾರ ಮಾಡಿದೆ. ಪ್ರವಾಹ ವೇಳೆ ಕೇಂದ್ರ ಕೊಟ್ಟ ಪರಿಹಾರ ದುಪ್ಪಟ್ಟು ನೀಡಿದ್ದೇವೆ. ಬಿಜೆಪಿ ಸಂಕಷ್ಟದಲ್ಲಿ ಇದ್ದಾಗ ಅವರ ನೆರವಿಗೆ ಬಿಜೆಪಿ ಸರಕಾರ ವಿದ್ಯಾನಿಧಿ ನೀಡಿದೆ. ಮೀನುಗಾರರಿಗೆ, ನೇಕಾರಿಗೆ, ಬಡಿಗೇರ, ಕಂಬಾರ, ಮೇದಾರ ಎಲ್ಲ ವ್ಯವಸಾಯಕ್ಕೆ ನೆವರು ನೀಡಲಾಗುತ್ತಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡುವ ಕಾರ್ಯ ಮಾಡುತ್ತಿದ್ದೆವೆ. ಹಾಲಮತ ಜನಕ್ಕಾಗಿ ವಿಶೇಷ ಯೋಜನೆಯಲ್ಲಿ ಕುರಿ ಆಶ್ರಯ ಮನೆ ನೀಡುವ ಯೋಜನೆ ಮಾಡಿದ್ದೇವೆ. ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ಉಚಿತ ವಿದ್ಯುತ್ ನೀಡಿದ್ದಾರೆ. ಕಾಂಗ್ರೆಸ್ ಗೆ ಸೋಲಿನ ಬೀತಿ ಎದುರಾಗಿದೆ. ಅದಕ್ಕೆ ಹತಾಶ ಭಾವನೆಯಿಂದ ಕೀಳುಮಾತುಗಳಿಂದ ಮಾತನಾಡುತ್ತಿದ್ದಾರೆ. ಅದರ ಕಡೆಗೆ ಕಿವಿ ಕೋಡದೆ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಿ ಎಂದರು.
ಯಡಿಯೂರಪ್ಪ ಅವರು ಮಾತನಾಡಿ, ಇದು ವಿಜಯ ಸಂಕಲ್ಪ ಯಾತ್ರೆ ಅಲ್ಲ ಇದು ವಿಜಯಯಾತ್ರೆಯಾಗಿದೆ. ಕಾಂಗ್ರೆಸ್ ಜನಹಿತ ಮರೆತು ಸ್ವಾರ್ಥ ಕ್ಕಾಗಿ ಬದುಕಿತ್ತಿದೆ. ವಿಶ್ವನಾಯಕ ಎಂದು ಕೊಟ್ಟ ಕುದರೆ ಎಮೇರದವನು ವೀರನು ಅಲ್ಲ ಶೂರನು ಅಲ್ಲ. ಅಂದ ಹಾಗೆ ಅಧಿಕಾರಕ್ಕೆ ಕಚ್ಚಾಡುವ ಕಾಂಗ್ರೆಸ್. ಪ್ರಧಾನಿ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತರುವ ಮೂಲಕ ರೈತರ ಏಳ್ಗೆಗೆ ಶ್ರಿಮಿಸಿದ್ದಾರೆ ಎಂದರು. ರಾಜ್ಯದಲ್ಲಿ ಕೇಂದ್ರದ ಲ್ಲಿ ಬಿಜೆಪಿ ಅಧಿಕಾರಕ್ಕೆ ತರುವದನ್ನು ಯಾರಿಂದಲೂ ಸಾಧ್ಯವಿಲ್ಲ. ಬೆಳಗಾವಿ ಎಲ್ಲ ಸ್ಥಾನ ಬಿಜೆಪಿ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋಣ ಎಂದು ನುಡಿದರು.
ಜಿಲ್ಲಾ ಉಸ್ತುವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಉಕ್ಕಿನ ಮನುಷ್ಯ ಬಳಿಕ ಅಮಿತ್ ಶಾ ಅವರು ಅವರ ಸ್ಥಾನ ತುಂಬಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಅವ್ಯವಹಾರ ಕಂಡು ಸಹಕಾರಿಗಳನ್ನು ಹೆಚ್ಚು ಶಕ್ತಿಯುತ ಬೆಳವಣಿಗೆ ತಂದಿರುವ ಅಮಿತ್ ಶಾ ಅವರು. ದೇಶ ಮತ್ತು ರಾಜ್ಯದಲ್ಲು ಬಿಜೆಪಿ ಆಯ್ಕೆ ಆಗಬೇಕು. ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಯನ್ನಾಗಿ ಮಾಡೊನ ಎಂದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, 75 ವರ್ಷಗಳಲ್ಲಿ ಮನೆ ಮೇಲೆದೇಶದ ಧ್ವಜ ಹಾರಿರುವದು ನಾವು ನೋಡಿರಲಿಲ್ಲ. ಮನೆ ಮನೆಯಲ್ಲಿ ತಿರಂಗಾ ಹಾರಿಸುವ ಮೂಲಕ ಮೋದಿ ಅವರು ದೇಶಾಭಿಮಾನ ಮೆರೆದಿದ್ದಾರೆ. ಅವರ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನವಕರ್ನಾಟಕ ನಿಮಾರ್ಣ ಮಾಡಲು ಬಸವರಾಜ ಬೊಮ್ಮಾಯಿ ಅವರು ಕಾರ್ಯ ಮಾಡುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳಿಗೆ ಎರಡು ಸಾವಿರ ಬೆಲೆ ಕಟ್ಟಲು ಹೊರಟಿರುವ ಕಾಂಗ್ರೆಸ್ ತಿರಸ್ಕಾರ ಮಾಡೊನ ಎಂದು ನುಡಿದರು.
ಶಾಸಕ ಪಿ. ರಾಜೀವ್ ಅವರು ಮಾತನಾಡಿ, ಒಂದು ವೇಳೆಯಲ್ಲಿ ಹಿಂದೆ ಭಾರತ ಅಂದರೆ ಬಡ ಹಾಗೂ ಭಿಕ್ಷುಕರ ದೇಶ ಎಂದು ಎನ್ನುತ್ತಿದ್ದರು. ಅದನ್ನು ಬದಲಾಯಿಸಿ ಜಗತ್ತು ನಮ್ಮ ದೇಶ ಕಡೆಗೆ ನೋಡುವ ಹಾಗೆ ಕಾರ್ಯ ಮಾಡಿದ್ದಾರೆ ಎಂದು ನುಡಿದರು.
ಮಾಜಿ ಡಿಸಿಎಂ ಲಕ್ಷಣ ಸವದಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ 18 ಅಭ್ಯರ್ಥಿಗಳು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ನಾವು ಸಂಕಲ್ಪ ಮಾಡಬೇಕು. ಮೋದಿ ದೇಶವನ್ನು ಕಾಯುವ ಮೂಲಕ ದೇಶದ ಹೆಸರನ್ನು ಜಗತ್ತಿನ ಎಲ್ಲೆಡೆ ಗುರುತಿಸಿದ್ದಾರೆ. ನಾವೆಲ್ಲರೂ ಸೇರಿ ಬಿಜೆಪಿ ಅಧಿಕಾರಕ್ಕೆ ತತುವ ಮೂಲಕ ತಲೆ ಎತ್ತಿ ತಿರುಗುವ ಕಾರ್ಯ ಮೋದಿ ಅವರು ಮಾಡಿದ್ದಾರೆ. ವಿದೇಶದಲ್ಲಿ ನಾನು ಭಾರತೀಯ ಎಂದು ಹೇಳುವ ಹಾಗೆ ಕಾರ್ಯ ಮಾಡಿದ್ದಾರೆ.
ಶಾಸಕರಾದ ಅಭಯ್ ಪಾಟೀಲ ಮತ್ತು ಅನಿಲ ಬೆನಕೆ ಮಾತನಾಡಿ, ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ರದ್ದು ಮಾಡುವದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದರೆ ಸರಕಾರ ರೈತಪರ ಯೋಜನೆಗಳನ್ನು ಮುಂದೆ ವರೆಸಿಕೊಂಡು ಹೋಗಲು ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುವಂತೆ ವಿನಂತಿಸಿದರು. ಈರಣ್ಣ ಕಡಾಡಿ ಮಾತನಾಡಿ, ತಲೆ ಎತ್ತಿ ಕಾರ್ಯಕರ್ತರು ಕೆಲಸ ಮಾಡುವ ಹಾಗೆ ಕಾರ್ಯ ಮಾಡುತ್ತೇನೆ ಎಂದಿದ್ದರು. ಅದೇ ರೀತಿಯಾಗಿ ಕಾರ್ಯ ಮಾಡುತ್ತಿದ್ದಾರೆ.
ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಇಲ್ಲಿ ಸೇರಿರುವ ಜನ ನೋಡಿ ನಿದ್ದೆ ಬರೊಲ್ಲ. ನೆರೆಯ ಪಾಕಿಸ್ತಾನ ನಾಲ್ಕು ಜನರನ್ನು ಹೊಡೆದರೆ ನಾವು ಮನೆ ಹೊಕ್ಕು ನಾಲವತ್ತು ಜನರನ್ನು ಹೊಡಿತೇವೆ ಎನ್ನುತ್ತಾರೆ. ರಾಹುಲ್ ಗಾಂಧಿ ಮೋದಿ ಅವರ ಕಾಪಿ ಗಡ್ಡ ಮಾಡುತ್ತಿದ್ದಾರೆ. 18 ತಾಸು ದೇಶದ ಕೆಲಸ ಮಾಡುವ ಮೂಲಕ ಅಜಾರಿ ತನಗೆ ಇಲ್ಲ ಎನ್ನುವದನ್ನು ತೋರಿಸುತ್ತಾರೆ. ರಾಮ ಲಖನ ಹಾಗೆ ಮೋದಿ ಎನಿಸಿದ್ದಾರೆ. ಆರ್. ಟಿಕಲ್ 370 ತೆಗೆದುಹಾಕುವ ಮೂಲಕ ಭಾರತ ಧ್ವಜ ಹಾರಿಸಿದ್ದಾರೆ.
ರಾಜ್ಯ ಉಸ್ತುವರಿ ಅರುಣಸಿಂಗ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ, ಮಂಗಳಾ ಅಂಗಡಿ, ಹನುಮಂತ ನಿರಾಣಿ, ಮಹಾದೇವಪ್ಪ ಯಾದವಾಡ ಉಪಸ್ಥಿತರಿದ್ದರು.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿತ್ತೂರು ಚನ್ನಮ್ಮನ ಕೋಟಿ ಹಲವಾರು ನೀರಾವರಿ ಯೋಜನೆಯನ್ನು ಮಾಡಿದ್ದಾರೆ ಎಂದರು.