ಕೇಂದ್ರ ಸರ್ಕಾರ ಐಟಿ ಈಡಿ ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ: ಮಂಜುನಾಥ್
ಬಳ್ಳಾರಿ 23: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದ ನೆಪವೊಡ್ಡಿ ರಾತ್ರೋ ರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧಿಸಿರುವುದನ್ನು ಆಮ್ ಆದ್ಮಿ ಪಕ್ಷ ಜಿಲ್ಲಾ ಘಟಕ ಖಂಡಿಸುತ್ತದೆ ಎಂದು ಬಳ್ಳಾರಿ ಜಿಲ್ಲಾಧ್ಯಕ್ಷ ಜೆ ವಿ ಮಂಜುನಾಥ್ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಜಾರಿ ನಿರ್ದೇಶನಾಲಯವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ದೆಹಲಿಯಲ್ಲಿ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಅರವಿಂದ ಕೇಜ್ರಿವಾಲ್ ಆಡಳಿತವನ್ನು ದೇಶವೇ ಮೆಚ್ಚಿಕೊಳ್ಳಲಾರಂಭಿಸಿದೆ. ಅವರ ಆಡಳಿತ, ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು ಸಹಿಸದ ಬಿಜೆಪಿ ಸರ್ಕಾರವು ಕೇಜ್ರಿವಾಲ್ ಅವರನ್ನು ಬಂಧಿಸಿ ಉತ್ತಮ ಆಡಳಿತ ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಅಭಿವೃದ್ಧಿ ಆಡಳಿತ ಕೊಡುವವರನ್ನು ಹತ್ತಿಕ್ಕಿರುತ್ತಿರುವ ಬಿಜೆಪಿಯ ಕೇಂದ್ರ ಸರ್ಕಾರದ ನಡೆಯನ್ನು ದೇಶದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಪ್ ಜಿಲ್ಲಾಧ್ಯಕ್ಷ ಜೆ ವಿ ಮಂಜುನಾಥ್ ಆರೋಪಿಸಿದರು.ಪಕ್ಷದ ಪ್ರಮುಖ ಮುಖಂಡರುಗಳಾದ ಕೊರಲಗುಂದಿ ವಿ.ದೊಡ್ಡ ಕೇಶವ ರೆಡ್ಡಿ, ಲೋಕೇಶ್ ನಾಯಕ್, ಮಿಂಚೇರಿ ರುದ್ರ್ಪ, ಮಂಜುನಾಥ ಸ್ವಾಮಿ, ನಾಗರಾಜ್ ಗೌಡ ಉಪ್ಪಾರ್ ವೆಂಕಟೇಶ್, ಮುಂತಾದವರು ಉಪಸ್ಥಿತರಿದ್ದರು.