ಜುಲೈ 15 ಇದ್ದಂತೆ ಶೇ. 95.73 ಮತದಾರರಿಗೆ ಗಣತಿ ನಮೂನೆಗಳ ವಿತರಣೆ
ಧಾರವಾಡ 15 : ಭಾರತ ಚುನಾವಣಾ ಆಯೋಗದ ನವದೆಹಲಿ ಅವರು ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ, ಧಾರವಾಡ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಜೂನ್ 30, 2026 ರಿಂದ ಮತದಾರರ ಮನೆ-ಮನೆಗಳಿಗೆ ಭೇಟಿ ನೀಡಿ, ಏಣಿಕೆ, ಗಣತಿ ನಮೂನೆಗಳನ್ನು ವಿತರಣೆ ಮಾಡುವ ಕಾರ್ಯ ಪ್ರಾರಂಭಗೊಂಡಿರುತ್ತದೆ. ಜಿಲ್ಲೆಯ ಒಟ್ಟು 16,21,961 ಮತದಾರರ ಇದ್ದು, ಗಣತಿ ನಮೂನೆಗಳನ್ನು ಮುದ್ರಿಸಿ ಸಂಬಂಧಿಸಿದ ಬಿಎಲ್ಒಗಳಿಗೆ ಒದಗಿಸಲಾಗಿರುತ್ತದೆ. ಧಾರವಾಡ ಜಿಲ್ಲೆಯ ಮತಗಟ್ಟೆ ಮಟ್ಟದ ಅಧಿಕಾರಿಗಳು ಜುಲೈ 15, 2026 ಕ್ಕೆ ಇದ್ದಂತೆ 15,52,657 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಶೇ.95.73 ರಷ್ಟು ವಿತರಿಸಲಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 5,69,247 ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ. ಶೇ.35.10 ರಷ್ಟು ಗಣಕೀಕರಣಗೊಳಿಸಲಾಗಿದೆ. ಗೈರು, ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಒಟ್ಟು 75,509 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 36,774 ಶಾಶ್ವತ ವಲಸೆ ಹಾಗೂ 12,645 ಮರಣ ಹೊಂದಿದ ಪ್ರಕರಣಗಳು, 3,300 ದ್ವಿಪ್ರತಿಗಳು, 22,353 ಗೈರು ಹಾಗೂ ಇತರೆ 437 ಸೇರಿವೆ. 69-ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,15,962 ಮತದಾರರ ಪೈಕಿ 2,15,962 ನಮೂನೆಗಳನ್ನು ವಿತರಿಸಲಾಗಿದ್ದು, ಶೇ. 100 ರಷ್ಟು ವಿತರಿಸಲಾಗಿದೆ. 1,57,702 ನಮೂನೆಗಳು ಗಣಕೀಕೃತಗೊಂಡಿವೆ. 70-ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,96,503 ಮತದಾರರ ಪೈಕಿ 1,96,503 ನಮೂನೆಗಳನ್ನು ವಿತರಿಸಲಾಗಿದ್ದು, ಶೇ. 100 ರಷ್ಟು ವಿತರಿಸಲಾಗಿದೆ. 88,502 ನಮೂನೆಗಳು ಗಣಕೀಕೃತಗೊಂಡಿವೆ.