ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪಟಾಕಿ ಸಿಡಿಸಿ ಸಂಭ್ರಮ
ಬೆಳಗಾವಿ .1: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬೆಳಗಾವಿಯನ್ನು ಕರ್ನಾಟಕದ ಅವಿಭಾಜ್ಯ ಅಂಗವೆಂದು ರಾಜ್ಯದ ಪರವಾಗಿ ಗೊತ್ತುಪಡಿಸುವ ನಿರ್ಣಯವನ್ನು ಮಂಡಿಸಿ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಗೋಕಾಕ ಹಾಗೂ ಮೂಡಲಗಿ ತಾಲೂಕು ಘಟಕಗಳ ಪದಾಧಿಕಾರಿಗಳು ಘಟಪ್ರಭಾ ನಗರದ ಮೃತ್ಯುಂಜಯ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆಂಪಣ್ಣ ಚೌಕಶಿ, ಉಸ್ತುವಾರಿ ಅಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಉಪಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಕಾರ್ಯಾಧ್ಯಕ್ಷ ಶೆಟ್ಟೆಪ್ಪ ಗಾಡಿವಡ್ಡರ, ಪ್ರಧಾನ ಕಾರ್ಯದರ್ಶಿ ರೆಹಮಾನ್ ಮೊಕಾಶಿ, ರವಿ ನಾವಿ, ತಮ್ಮಣ್ಣ ಅರಭಾವಿ, ರಾಜು ವಗ್ಗನವರ, ಸಿದ್ದಪ್ಪ ತೆಳಗೇರಿ, ಮಲ್ಲಿಕಾರ್ಜುನ ಶಿಂಧೆ, ರಾಘವೇಂದ್ರ ಕುಡೇಮೆ, ಸುರೇಶ ಚಿಗಡೊಳ್ಳಿ, ಯಲ್ಲಪ್ಪ ಅಟ್ಟಿಮಿಟ್ಟಿ, ಶಶಿಧರ ಚೌಕಶಿ, ಪ್ರಕಾಶ ಬಿರನಾಳಿ, ಸುನೀತಾ ಕೊಣೂರ, ಅನಿತಾ ಬಡಕುಂದ್ರಿ, ಕಾಡಪ್ಪ ಕರೋಶಿ, ಮಣಿಕಂಠ ನಾಯಿಕ, ಅಲ್ಲಪ್ಪ ಕೌಜಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.