ಮಹಲಿಂಗಪುರ

ಡಾ.ಅಶೋಕ ನರೋಡೆ ಗ್ರಂಥಗಳ ನೂರರ ಸಂಭ್ರಮ

ಡಾ.ಅಶೋಕ ನರೋಡೆ ಗ್ರಂಥಗಳ ನೂರರ ಸಂಭ್ರಮ

ಮಹಾಲಿಂಗಪುರ 09: ಸ್ಥಳೀಯ ಕೆಎಲ್‍ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎಸ್.ಸಿ.ಪಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕ, ಸಾಹಿತಿ ಡಾ.ಅಶೋಕ ನರೋಡೆ ಅವರು ರಚಿಸಿರುವ "ಗ್ರಂಥಗಳ ನೂರರ ಸಂಭ್ರಮ ಕಾರ್ಯಕ್ರಮವನ್ನು ದಿ. 10 ರಂದು ಪದವಿ ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 

ಸಾನಿಧ್ಯವನ್ನು ಜಮಖಂಡಿಯ ಓಲೆಮಠದ ಡಾ.ಚನ್ನಬಸವ ಸ್ವಾಮೀಜಿ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಉದ್ಘಾಟಿಸಲಿದ್ದು, ಅತಿಥಿಯಾಗಿ ಕೆ.ಎಲ್.ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ ಆಗಮಿಸುವರು. ಡಾ.ಬಿ.ಎಂ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕೆ.ಎಲ್.ಇ ಪದವಿ ಕಾಲೇಜು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಸುವರ್ಣಾ ಆಸಂಗಿ ತಿಳಿಸಿದ್ದಾರೆ.  

ಸುದ್ದಿ ಓದಿ