ಬಳ್ಳಾರಿಯಲ್ಲಿ ಸಂತ ಸೇವಲಾಲ್ ಜಯಂತಿ ಆಚರಣೆ
ಬಳ್ಳಾರಿ 15: ಬಳ್ಳಾರಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಮಂಗಳವಾರದಂದು ಸಂತ ಶ್ರೀ ಸೇವಲಾಲ್ ಜಯಂತಿಯನ್ನು ಸರಳವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಜಯಂತಿಯಲ್ಲಿ ಅಖಿಲ ಕರ್ನಾಟಕ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷರಾದ ಎಸ್.ಚಂದ್ರನಾಯಕ್, ಸಮಾಜದ ಮುಖಂಡರಾದ ಗೊವಿಂದ ನಾಯಕ್, ರಾಕೂರ್ ನಾಯಕ್, ಭಲಚಂದ್ರ ನಾಯಕ್, ಗೋಪಿನಾಯ್ಕ್, ರಾಮು ನಾಯಕ್
ಹಾಗೂ ಇತರರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ವರ್ಗದವರು
ಭಾಗವಹಿಸಿದ್ದರು.