ನೃಪತುಂಗ ಮಹಾರಾಜರ ಜಯಂತಿ ಆಚರಣೆ
ತಾಳಿಕೋಟಿ 12: ತಾಲೂಕಿನ ಪೀರಾಪೂರ ಗ್ರಾಮದಲ್ಲಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ರಟ್ಟಕುಲ( ರೆಡ್ಡಿ) ಸೂರ್ಯವಂಶ ರಾಷ್ಟ್ರಕೂಟ ಸಾಮ್ರಾಜ್ಯದ ಅರಸ ಅಮೋಘವರ್ಷ ನೃಪತುಂಗ ಮಹಾರಾಜರ 1224 ನೇ ಜಯಂತೋತ್ಸವವನ್ನು ಗುರುವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಸದಸ್ಯ ಸುರೇಶಬಾಬುಗೌಡ ಬಿರಾದಾರ ಮಾತನಾಡಿ ಮಾನವಕುಲ ಒಂದೇ ಎಂದು ಸಾರಿ ಎಲ್ಲ ಜಾತಿ ವರ್ಗದ ಜನರನ್ನು ತನ್ನ ಆಸ್ಥಾನದಲ್ಲಿ ನೆಮ್ಮದಿಯಿಂದ ಇರುವ ಅವಕಾಶವನ್ನು ಮಾಡಿಕೊಟ್ಟ, ಸುದೀರ್ಘ 64 ವರ್ಷಗಳ ಕಾಲ ರಾಜ್ಯವನ್ನಾಳಿದ ದಕ್ಷಿಣದ ಅಶೋಕ ಎಂದೇ ಪ್ರಸಿದ್ಧಿ ಹೊಂದಿದ ರಟ್ಟಕುಲ ರೆಡ್ಡಿ ಸೂರ್ಯವಂಶಸ್ಥಾನದ ರಾಷ್ಟ್ರಕೂಟ ವೀರ ಅರಸ ಅಮೋಘವರ್ಷ ನೃಪತುಂಗ ದೇಶದ ಮಾದರಿ ಅರಸ ಆಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯ ಉಪಾಧ್ಯಕ್ಷ ಸುರೇಶಕುಮಾರ ಇಂಗಳಗೇರಿ, ಪ್ರಭುಗೌಡ ಬಿರಾದಾರ,ಗ್ರಾಪಂ ಸದಸ್ಯ ಮುಷಾವಲಿ ಮುಜಾವರ,ಮಾಜಿ ಸದಸ್ಯ ರಸೂಲಸಾ ನೀರಲಗಿ, ಮುಖಂಡರಾದ ಸಂತೋಷ ಇಂಗಳಗೇರಿ, ಶಿವನಗೌಡ ಬಿರಾದಾರ,ಸಿದ್ದನಗೌಡ ಬಿರಾದಾರ, ಇಮಾಮಸಾಬ ಬೈಚಬಾಳ,ಗ್ರಾಪಂ ಸಿಬ್ಬಂದಿ ಬಂದೇನವಾಜ ಮುಲ್ಲಾ ಮತ್ತಿತರರು ಇದ್ದರು.