ಕನಕದಾಸರ 536ನೇ ಜಯಂತಿಯ ಆಚರಣೆ
ಬಳ್ಳಾರಿ30: ಬಳ್ಳಾರಿ ನಗರದ 36ನೇ ವಾರ್ಡಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಸ ಶ್ರೇಷ್ಠ ಕನಕದಾಸರವರ ಜಯಂತಿಯನ್ನು ಆಚರಿಸಲಾಯಿತು.
ತರುವಾಯ ಅತಿಥಿಯಾಗಿ ಆಗಮಿಸಿದ ಎಸ್ಡಿಎಂಸಿ ಅಧ್ಯಕ್ಷ ಜೆ ವಿ ಮಂಜುನಾಥರವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಅರ್ಿಸಿ ಜಯಂತಿ ಆಚರಣೆ ಮಾಡಿದರು.
ನಂತರ ಮುಖ್ಯ ಗುರುಗಳಾದ ಕೆ ಎಂ ಬಸವರಾಜ್ ರವರು ಮಾತನಾಡುತ್ತಾ, ಕನಕದಾಸರು 1508ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಬಾಡ ಎಂಬ ಗ್ರಾಮದಲ್ಲಿ ಜನಿಸಿದರು.ಇವರ ತಂದೆ ಬೀರ್ಪ ತಾಯಿ ಬಚ್ಚಮ್ಮ ಇವರು ತಿರುಪತಿ ತಿಮ್ಮಪ್ಪನ ಪರಮಭಕ್ತರು ಇವರ ಮೊದಲಿನ ಹೆಸರು ತಿಮ್ಮಪ್ಪ ನಾಯಕ, ನಂತರ ಕನಕದಾಸರು ಎಂಬ ಹೆಸರು ಬಂದಿದೆ, ಇವರು ಹುಟ್ಟುಹಬ್ಬದ ನಿಮಿತ್ಯವಾಗಿ 536ನೇ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕುಲ ಕುಲವೆಂದು ಹೊಡೆದಾಡಬೇಡಿರಿ ಕುಲದ ನೆಲೆಯನ್ನು ಎಂದಾದರೂ ಬಲ್ಲಿರಾ ಎಂದು ಕನಕದಾಸರು, ದಾಸ ಸಾಹಿತ್ಯದಲ್ಲಿ ಶ್ರೇಷ್ಠವಾದ ದಾಸರ ಅಂದರೆ ಕನಕದಾಸರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಸಮಾನತೆ ಹಾಗೂ ಉತ್ತಮ ಕೀರ್ತಿನಕಾರರು ಹಾಗೂ ಸಮಾಜ ಸುಧಾರಕರು ಪ್ರಮುಖ ವ್ಯಕ್ತಿ ಆಗಿದ್ದಾರೆ.ಕನಕ ಎಂದರೆ ಬಂಗಾರ ಅಂದಿನಿಂದ ಕನಕದಾಸರು ಇವರು ತಮ್ಮ ಜೀವನದಲ್ಲಿ ನಡೆದಿರುವಂತಹ ಘಟನೆ ಹಾಗೂ ಭಕ್ತಿಯ ಸಾರವನ್ನು ಕೀರ್ತನೆಗಳು ರೂಪದಲ್ಲಿ ಬಿಂಬಿಸುತ್ತೇವೆ. ಕೀರ್ತನೆಗಳನ್ನು ಹರಿದಾಸ ಪದಗಳನ್ನು ಅರ್ಥಗರ್ಭಿತವಾಗಿ ಹಾಡುವುದರ ಮೂಲಕ ದಾಸ ಸಾಹಿತ್ಯ ದಲ್ಲಿ ಹೆಸರುವಾಸಿಯಾದವರು. ಇವರ ಅಂಕಿತನಾಮ ಕಾಗಿನೆಲೆ ಆದಿಕೇಶವ ಎಂದು ವಿದ್ಯಾರ್ಥಿಗಳಿಗೆ ಮನದಟ್ಟುವಂತೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ರಾಜಶೇಖರ,ಸುಜಾತ, ಶಿಕ್ಷಕ ವೃಂದದವರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.