ಮುದ್ದೆಬಿಹಾಲ್

ಎಲ್ಲ ಸಮಾಜಗಳ ಶರಣ ಸತ್ಪುರುಷರ ಜಯಂತಿಯನ್ನು ಏಕಕಾಲಕ್ಕೆ ಆಚರಣೆ

ಎಲ್ಲ ಸಮಾಜಗಳ ಶರಣ ಸತ್ಪುರುಷರ ಜಯಂತಿಯನ್ನು ಏಕಕಾಲಕ್ಕೆ ಆಚರಣೆ

ಮುದ್ದೇಬಿಹಾಳ:  ಕನಕದಾಸರು ಕುಲ ಕುಲ ಕುಲವೆಂದು ಬಡಿದಾಡದಿರಿ ಎಂದು ತಮ್ಮ ಪದಗಳಲ್ಲಿ ಹೇಳಿದಂತೆ ಈ ಬಾರಿಯ 53ನೇ ಕನಕದಾಸ ಜಯಂತಿಯ ಸಂದರ್ಭದಲ್ಲಿ ನಾಡಿನ ಎಲ್ಲ ಸಮಾಜಗಳ ಶರಣ ಸತ್ಪುರುಷರ ಜಯಂತಿಗಳನ್ನು ಏಕಕಾಲಕ್ಕೆ ಆಚರಿಸಲಾಗುವುದು. ತನ್ಮೂಲಕ ಕನಕದಾಸರ ಆಶಯದಂತೆ ನಡೆದುಕೊಳ್ಳಲಾಗುವುದು ಎಂದು ಮುದ್ದೇಬಿಹಾಳ ತಾಲೂಕಾ ಕುರುಬರ ಸಂಘದ ಅಧ್ಯಕ್, ಉದ್ಯಮಿ ಎಂ.ಎನ್‌.ಮದರಿ ಹೇಳಿದರು. 

ಇಂದಿನ ದಿನಗಳಲ್ಲಿ ನಾಡಿನಾದ್ಯಂತ ಜಾತಿಗಳ ವೈಭವಿಕರಣವಾಗುತ್ತಿರುವುದು ಮತ್ತು ಜಾತಿ ಜಾತಿಗಳ ಮದ್ಯ ಕಂದಕಗಳು ನಿರ್ಮಾಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಹಾಲುಮತ ಸಮಾಜವು ಎಲ್ಲಿಯೂ ಯಾರೊಂದಿಗೂ ಜಾತಿ ಆಧಾರದ ಮೇಲೆ ನಡೆದುಕೊಳ್ಳುತ್ತಿಲ್ಲ. ಸಂತ ಕನಕದಾಸರು ಹೇಳಿದಂತೆ ಸರ್ವರು ಒಂದೇ ಎನ್ನುವ ನುಡಿ ಮುತ್ತಿನ ಹಾಗೇ ಎಲ್ಲ ಸಮೂದಾಯದವರೋಂದಿಗೆ ಅನೋನ್ಯತೆಯಿಂದ ನಡೆದುಕೊಳ್ಳುವ ಮೂಲಕ ಶ್ರೇಷ್ಠ ಸಮೂದಾಯ ಹಾಲುಮತ ಸಮೂದಾಯವಾಗಿದೆ. 

ಈ ನಿಟ್ಟಿನಲ್ಲಿ ಈ ಬಾರಿಯ ಕನಕದಾಸರ ಜಯಂತಿಯ ಸಂದರ್ಭದಲ್ಲಿ ನಾಡಿನ ಎಲ್ಲ ಸಮಾಜಗಳ ಗುರು ಹಿರಿಯರ ಸಮ್ಮತಿಯೊಂದಿಗೆ ಎಲ್ಲ ಪಂಥ ಸಂಪ್ರದಾಯಗಳ ದಾರ್ಶನಿಕರ ಜಯಂತಿಗಳನ್ನು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಆಚರಿಸಲಾಗುತ್ತದೆ. ಮತ್ತು ಹಾಲುಮತದವರು ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರು.  

ಪಟ್ಟಣದ ಸಂಗಮೇಶ್ವರ ನಗರದಲ್ಲಿ ಸಂತ ಕನಕದಾಸ ಶಾಲೆಯಲ್ಲಿ ನಡೆದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಈ ಕುರಿತು ಇನ್ನೂ ಒಂದೆರಡು ಸಭೆಗಳನ್ನು ಕರೆದು ಎಲ್ಲ ಸಮಾಜಗಳ ಅಧ್ಯಕ್ಷರು ಮತ್ತು ಪ್ರಮುಖರನ್ನು ಒಳಗೊಂಡು ಅದ್ದೂರಿಯಾಗಿ ಜಯಂತಿಯನು ಆಚರಿಸಲು ನಿರ್ಧರಿಸಲಾಯಿತು.  

ಈ ವೇಳೆ  ಮಾಜಿ.ತಾ.ಪಂ.ಅಧ್ಯಕ್ಷ ಬಿ.ಎಚ್‌. ಹಾಲಣ್ಣವರ, ಜಿ.ಪಂ. ಮಾಜಿ ಉಪಾಧ್ಯಕ್ಷ ಕೆಂಚಪ್ಪಗೌಡ ಬಿರಾದಾರ, ಪಿ.ಎಲ್‌.ಡಿ.ಬ್ಯಾಂಕ ಅಧ್ಯಕ್ಷ ಬಿ.ಕೆ.ಬಿರಾದಾರ, ಕುರುಬರ ಮಹಿಳಾ ಸಂಘದ ಅಧ್ಯಕ್ಷ್ಯೆ ಶ್ರೀಮತಿ ಸವಿತಾ ಗುರುವಿನ, ಆರ್‌.ಎಂ. ಗಂಗನ್ನವರ, ಪಿ.ಬಿ.ಮಾತಿನ ವಕೀಲರು, ನಾಗಪ್ಪ ರೂಡಗಿ, ಮಾಜಿ ಜಿ.ಪಂ. ಸದಸ್ಯ ಬಸವರಾಜ ಶಿರೋಳ, ಸಂತ ಕನಕದಾಸ ಶಾಲಾ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ, ಬಿ.ಎಲ್‌.ಬಿಳೇಬಾವಿ, ಎನ್‌.ಎಸ್‌.ತುರುಡಗಿ, ಮಲ್ಲಿಕಾರ್ಜುನ ಕೆಸರಟ್ಟಿ, ಎಚ್‌.ಡಿ.ದೇವರಹಳ್ಳಿ, ನಾಗಪ್ಪ ವಾಲಿಕಾರ, ಎಸ್‌.ಜಿ.ಕುರಿ, ಬಿ.ಎಸ್‌.ಮೇಟಿ, ಬಸವರಾಜ ಗುಳಬಾಳ, ಸಂತೋಷ ನಾಯ್ಕೋಡಿ, ಮಹಾದೇವಪ್ಪ ಪೂಜಾರಿ, ಹಣಮಂತ ಮೆಲಿನಮನಿ, ಎಚ್‌.ಎನ್‌.ಇಟಗಿ ಸರ್,  ಮುಂತಾದವರು ಇದ್ದರು. 


ಸುದ್ದಿ ಓದಿ