ಬಳ್ಳಾರಿ

ಭಾರತದ ಸಂವಿಧಾನ ಸಮರ್ಪಣಾ ದಿನ ಆಚರಣೆ

ಭಾರತದ ಸಂವಿಧಾನ ಸಮರ್ಪಣಾ ದಿನ ಆಚರಣೆ

ಬಳ್ಳಾರಿ26:  ನಗರದ ದುರ್ಗಮ್ಮ ದೇವಸ್ಥಾನದ ಬಳಿ ಇರುವ ಕಸ್ತೂರಿ ಬಾ ಪ್ರೌಢ ಶಾಲೆಯಲ್ಲಿ ವಿಶ್ವದಲ್ಲಿಯೇ ಶ್ರೇಷ್ಠವಾದ ಹಾಗೂ ಭಾರತದ  ಸಂವಿಧಾನ ಸಮರ್ಪಣ ದಿನವನ್ನು  ಆಚರಣೆಯನ್ನು ಮಾಡಿದರು. ನಂತರ ಶಾಲೆಯ ಮುಖ್ಯ ಗುರುಗಳಾದ ಜಿ ಎಚ್ ಚಿಟ್ಟೆಮ್ಮ ರವರು ಮಾತನಾಡುತ್ತಾ, ನಮ್ಮ ಭಾರತ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಈ ಸಂವಿಧಾನದ ಭದ್ರ ಬುನಾದಿಯ ಮೇಲೆ ನಿಂತಿದೆ. ವಿಶ್ವದಲ್ಲಿಯೇ ಶ್ರೇಷ್ಠವಾದ    ಹಾಗೂ ನಮ್ಮ ಭಾರತ ದೇಶದ ಮಹಾನ್ ಗ್ರಂಥವನ್ನು  ಡಾ. ಬಾಬಾ ಸಾಹೇಬ್ ಬಿ.ಆರ್ . ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ವಾಗಿದೆ. ಈ ಗ್ರಂಥವು ನಮ್ಮ ದೇಶಕ್ಕೆ ಮಾದರಿಯಾದ ಪ್ರಮುಖವಾಗಿ ಪ್ರಜಾಪ್ರಭುತ್ವ ಮತ್ತು ದೇಶದ ನಿಯಮ ಕಟ್ಟಳೆಗಳ  ಗ್ರಂಥವಾಗಿದೆ. ಆದುದರಿಂದ  ಈ ದಿನದಂದು ಇಡೀ ಭಾರತ ದೇಶವೇ  ಸಂವಿಧಾನ ಸಮರ್ಪಣಾ  ದಿನವಾನ್ನಗಿ  ಆಚರಿಸಲಾಗುತ್ತಿದೆ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ  ಶ್ರೀಮತಿ ಉಷಾರಾಣಿ , ಹಾಗೂ ಶಾಲಾ ಶಿಕ್ಷಕರು  ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ