ಬ್ಯಾಡ್ಗಿ

ರಂಜಾನ್ ಹಬ್ಬವನ್ನು ಸೌಹಾರ್ದ ಹಾಗೂ ಸಾಮರಸ್ಯವಾಗಿ ಆಚರಿಸಿ ಸಿಪಿಐ ಚಿಕ್ಕಣ್ಣನವರ್‌

ರಂಜಾನ್ ಹಬ್ಬವನ್ನು ಸೌಹಾರ್ದ ಹಾಗೂ ಸಾಮರಸ್ಯವಾಗಿ ಆಚರಿಸಿ ಸಿಪಿಐ ಚಿಕ್ಕಣ್ಣನವರ್‌

ಬ್ಯಾಡಗಿ 18: ಪಟ್ಟಣದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬವನ್ನು ಸೌಹಾರ್ದ ಹಾಗೂ ಸಾಮರ್ಥ್ಯವಾಗಿ ಆಚರಿಸಲು ಎಲ್ಲ ಸಮುದಾಯಗಳು ಸಹಕಾರ ನೀಡಬೇಕೆಂದು ಬ್ಯಾಡಗಿ ಪೊಲೀಸ್ ಠಾಣೆ ವೃತ್ತ ನೀರೀಕ್ಷಕ ಮಂಜುನಾಥ್ ಚಿಕ್ಕಣ್ಣನವರ್ ಮನವಿ ಮಾಡಿದರು  ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದವರು.

ಭ್ರಾತೃತ್ವ ಭಾವ ಹಾಗೂ ಶಾಂತಿ ಕೊಡುವ ಎಲ್ಲ ಧರ್ಮಗಳಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತದೆ ತಾಲೂಕಿನಲ್ಲಿ ಹಿಂದಿನಿಂದಲೂ ಎಲ್ಲ ಧರ್ಮಗಳ ಹಬ್ಬಗಳು ಶಾಂತಿ ಸೌಹಾರ್ದತೆಯುತವಾಗಿ ನಡೆದುಕೊಂಡು ಬಂದಿದ್ದು ಈ ವರ್ಷವೂ ಸಂಪ್ರದಾಯ ಮುಂದುವರಿಲಿ ಎಂದು ಆಶಿಸಿದರು.ವೃತ್ತ ಉಪನೀರೀಕ್ಷಕಿ ಭಾರತಿ ಕುರಿ ಮಾತನಾಡಿ ಕೋಮು ಸೌಹಾರ್ದತೆಗೆ ತಾಲೂಕು ರಾಜ್ಯದಲ್ಲಿ ಮಾದರಿಯಾಗಿದೆ

ಆದ್ದರಿಂದ ಹಿಂದೂ ಮತ್ತು ಮುಸ್ಲಿಂ ಬಾಂಧವರು ವದಂತಿಗಳಿಗೆ ಕಿವಿಕೊಡದೆ ಯಾವುದೇ ಸಂದರ್ಭದಲ್ಲಿಯೂ ಕಾನೂನನ್ನು ಕೈಗೊತ್ತಿಕೊಳ್ಳದೆ ಸಮಾಜದ ಶಾಂತಿಯ ಕದಡುವ ಕಿಡಿಗೇಡಿಗಳಿಗೆ ಬಗ್ಗೆ ಎಚ್ಚರದಿಂದ ಇದ್ದು ಅಂಥವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ಹಬ್ಬದ ದಿನ ವಾಹನಗಳ ಸೈಲೆನ್ಸರ್ ತೆಗೆದು ಕರ್ಕಶ ವಾಗಿ ವಾಹನದ ಸೈಲೆನ್ಸರ ಸೌಂಡ್ ಮಾಡುತ್ತ ಸಾರ್ವಜನಿಕ ತೊಂದರೆಯಾಗುವ ರೀತಿಯಲ್ಲಿ ವೀಲಿಂಗ್ ಹಾಗೂ ತ್ರಿಬಲ್ ರೈಡಿಂಗ್ ಹತ್ತಿಕೊಂಡು ವಾಹನ ಚಲಾಯಿಸುತ್ತಾರೆ

ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಿದರು.ಸಮಾಜದ ಮುಖಂಡ ಹಾಗೂ ಮಾಜಿ ಅಂಜುಮನ್ ಏ ಇಸ್ಲಾಂ ಕಮಿಟಿ ಅಧ್ಯಕ್ಷ ಡಾ.ಎ.ಎಂ.ಸೌಧಾಗರ ಮಾತನಾಡಿ ಹಿಂದಿನಿಂದಲೂ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದು ಮುಂದೆಯೂ ಪರಸ್ಪರ ಗೌರವ ಶಾಂತಿ ಪ್ರೀತಿಯಿಂದ ಹಬ್ಬವನ್ನು ಆಚರಿಸುತ್ತೇವೆ ಹಬ್ಬದ ಸಂದರ್ಭದಲ್ಲಿ ನಾವು ಜಾಮಿಯಾ ಮಜೀದನಿಂದ ಈದ್ಗಾ ಮೈದಾನ ವರಿಗೆ ಶಾಂತಿಯುತವಾಗಿ ಮೆರವಣಿಗೆ ಹೋಗುತ್ತೇವೆ ಆ ಸಮಯದಲ್ಲಿ ವಾಹನಗಳ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು

ಮತ್ತು ಚಂದ್ರಮಾನ ಯುಗಾದಿಯು ರಂಜಾನ್ ಹಬ್ಬವು ಒಂದೇ ಸಮಯದಲ್ಲಿ ಬಂದಿದ್ದು ಹಿಂದೂ ಮತ್ತು ಮುಸ್ಲಿಂ ಬಾಂಧವರು ಸಂತೋಷದಿಂದ ಹಾಗೂ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್‌ಐ ಪೂಜಾರ್‌. ಮುಸ್ಲಿಂ ಸಮಾಜದ ಮುಖಂಡರಾದ ಖಾದರ್ ಸಾಬ್ ದೊಡ್ಮನಿ ಮಜೀದ್ ಮುಲ್ಲಾ ಮಂಜೂರ್ ಅಲಿ ಹಕಿಮ್‌. ಮೆಹಬೂಬ್  ಆಗಸನಹಳ್ಳಿ. ಮುಕ್ತಿಯರ್ ಮುಲ್ಲಾ. ಹಾಗೂ ಎಲ್ಲ ಗ್ರಾಮದ ಮುಸ್ಲಿಂ ಸಮುದಾಯದ ಅಧ್ಯಕ್ಷರುಗಳು  ಉಪಸ್ಥಿತರಿದ್ದರು 


ಸುದ್ದಿ ಓದಿ