ಮುದ್ದೆಬಿಹಾಲ್

ಹೋಳಿ ರಂಜಾನ್ ಹಬ್ಬಗಳನ್ನು ಶಾಂತಿ ಸೌಹಾರ್ಧತೆಯಿಂದ ಆಚರಿಸಿ: ಪಿಎಸ್‌ಐ ತಿಪ್ಪಾರೆಡ್ಡಿ

ಹೋಳಿ ರಂಜಾನ್ ಹಬ್ಬಗಳನ್ನು ಶಾಂತಿ ಸೌಹಾರ್ಧತೆಯಿಂದ ಆಚರಿಸಿ: ಪಿಎಸ್‌ಐ ತಿಪ್ಪಾರೆಡ್ಡಿ

ಮುದ್ದೇಬಿಹಾಳ 22: ಈ ಬಾರಿ ಹೋಳಿ ಹುಣ್ಣಿಮೆ ಮತ್ತು ರಂಜಾನ್ ಹಬ್ಬದ ಒಟ್ಟೊಟ್ಟಿಗೆ ಆಚರಣೆಗೆ ತಯಾರಿಯಲ್ಲಿರುವ ಬಾಂಧವರು ಯಾವೂದೇ ಅಹಿತಕರ ಘಟನೆಗಳು ಜರುಗದಂತೆ ಎಲ್ಲ ಧರ್ಮದವರು ಶಾಂತಿ ಸೌಹಾರ್ಧತೆಯಿಂದ ಆಚರಿಸಬೇಕು ಎಂದು ಪಿಎಸ್‌ಐ  ಸಂಜೀಯಕುಮಾರ ತಿಪ್ಪಾರೆಡ್ಡಿ ಹೇಳಿದರು.  

ಪಟ್ಟಣದ ಪೋಲಿಸ್ ಠಾಣೆಯಲ್ಲಿ ಗುರುವಾರ ಸಂಜೆ ಹೋಳಿ ಹುಣ್ಣಿಮೆ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಸರ್ವಧರ್ಮದ ಮುಖಂಡರ, ಕಾರ್ಯಕರ್ತರ, ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. 

 ದಿ.24 ರಂದು ಕಾಮದಹನ ನಡೆಯಲಿದ್ದು ಬಳಿಕ 25,26 ಎರಡು ದಿನಗಳ ಕಾಲ ಬಣ್ಣದ ಓಕುಳಿ, ರಂಗಿನಾಟ ಇರುವುದರಿಂದ ಜಾತಿ, ಬೇದ, ಬಡವ, ಶ್ರೀಮಂತ ಎನ್ನದೇ ಎಲ್ಲರೂ ಕೂಡಿ ಆಚರಿಸುವಂತಹ ಹಬ್ಬ ಹೊಳಿ ಹಬ್ಬವಾಗಿದೆ,  ಕಾಮ ಧಹನವು ಆದಷ್ಟು ಬೇಗನ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು ರಾತ್ರಿ ಹೆಚ್ಚಾದಂತೆ ಕುಚೇಷ್ಠಿಗಳ, ಕುಡುಕರ ಪ್ರತಾಪದಿಂದ ಸಣ್ಣ ಪುಟ್ಟ ಅಹಿತಕರ ಘಟನೆ ನಡೆದರೂ ಕೂಡಾ ಎಲ್ಲರೂ ಜವಾಬ್ದಾರರಾಗಬೇಕಾಗುತ್ತದೆ ಇಂತಹ ಘಟನೆಗಳನ್ನು ತಪ್ಪಿಸಲು ಆದಷ್ಟು ಬೇಗನೆ ಕಾಮ ಧಹನ ಮಾಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು, ಮರುದಿನ ಬಣ್ಣ ದೋಕುಳಿ ಇರುವದರಿಂದ ಆದಷ್ಟು ಮನುಷ್ಯನ ಶರೀರದ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಮಿಕಲ್ ರಹಿತ ಬಣ್ಣ ಉಪಯೋಗಿಸುವದು ಒಳ್ಳೆಯದು,  ರಸಾಯನಿಕ ಕೆಮಿಕಲ್ ಬಣ್ಣದಿಂದ ದೇಹಕ್ಕೆ ಹಾನಿಕರ ಉಂಟಾಗಲಿದೆ ಅಲ್ಲದೇ ಇಂತಹ ಸಂದರ್ಬದಲ್ಲಿ ಕಣ್ಣುಗಳಲ್ಲಿ ಕೆಮಿಕಲ್ ಬಣ್ಣ ಸೇರಿ ಕಣ್ಣುಗಳು ಸಹ ಹಾಳಾಗುವ ಸಂದರ್ಬ ಬರಬಹುದು ಮತ್ತು ತಲೆಯ ಮೇಲೆ ತತ್ತೆ ಒಡೆಯುವದು ಇನ್ನಿತರ ಹೊಲಸನ್ನು ಹಚ್ಚುವದು ಇಂತಹ ರೀತಿ ಆಟಗಳನ್ನು ಆಡದೇ ಪ್ರೀತಿ ಮತ್ತು ಸೌಹಾರ್ದತೆ ಮೂಡುವಂತೆ ಬಣ್ಣದಾಟವಾಗಿರಲಿ ಎಂದರು.  

ಇನ್ನೂ ಕೆಲವೆಡೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ಚಂದಾ ವಸೂಲಿ ಮಾಡಿದಂತಹ ಪ್ರಖರ್ಣಗಳು ಅಲಲ್ಲಿ ಬೆಳಕಿಗೆ ಬಂದಿವೆ ಅಂತಹ ಕೆಲಸಕ್ಕೆ ಯಾರೂ ಕೂಡಾ ಕೈ ಹಾಕಬಾರದು ಬಣ್ಣದಾಟ ಮುಗಿದ ನಂತರ ಹರಿದ ಅಂಗಿ ಮತ್ತು ಪ್ಯಾಂಟ್‌ಗಳನ್ನು ವಿದ್ಯುತ್ ವಾಯರ್ ಮತ್ತು ಇನ್ನಿತರ ವಾಯರ್‌ಗಳ ಮೇಲೆ ಎಸೆದು ಹೋಗುವಂತಹ ಕೆಲಸ ಮಾಡಬಾರದು ವಿದ್ಯುತ್ ಶ್ಯಾರ್ಟ ಸರ್ಕ್ಯೂಟ್‌ದಿಂದ ಅನೇಕ ಕಡೆಗಳಲ್ಲಿ ಅವಘಡ ಸಂಭವಿಸಿವೆ ಬಣ್ಣದಾಟದ ದಿನವಾದ ದಿ. 25 ರಿಂದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗಳು ನಡೆಯುತ್ತಿರುವದರಿಂದ ವಿದ್ಯಾರ್ಥಿಗಳಿಗೆ ಬಣ್ಣ ಹಚ್ಚುವದಾಗಲಿ ತೊಂದರೆ ಕೊಡವದಾಗಲಿ ಮಾಡಬಾರದು ಬಣ್ಣದಾಟ ಪ್ರೀತಿಯಿಂದ ಸ್ನೇಹದಿಂದ ಬಣ್ಣದಾಟದಲ್ಲಿ ತೊಡಗಿಕೊಳ್ಳುವವರೊಂದಿಗೆ ಆಡಬೇಕು ಯಾರಿಗೂ ಕೂಡಾ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಿ ತೊಂದರೆಯನ್ನು ಮೈಮೇಲೆ ಎಳೆದುಕೊಳ್ಳಬೇಡಿ  ಸ್ನೇಹ ಬಾಂಧವ್ಯದೊಂದಿಗೆ ಹೋಳಿ ಹಬ್ಬವು ಪ್ರೀತಿ ಪ್ರೇಮ ಭಾವೈಕ್ಯತೆಯನ್ನು ಮೂಡಿಸಲಿ ಎಂದರು. 

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಾಮರಾಜ ಬಿರಾದಾರ ಅವರು ಮಾತನಾಡಿ ಹಲವು ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರ ಸೌಹಾರ್ಧತೆಯಿಂದ ಎಲ್ಲ ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಹೆಸರುವಾಸಿಯಾಗಿದೆ ‘ಹಿಂದಿನಿಂದಲೂ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ನಡೆಸಿಕೊಂಡು ಬರುತ್ತಿದ್ದೇವೆ ಮಾತ್ರವಲ್ಲದೇ ಎಲ್ಲರೂ ಅವರವರ ಧರ್ಮ ಮತ್ತು ಸಂಸ್ಕಾರಕ್ಕೆ ಯಾವೂದೇ ಅಡೆತಡೆಯುಂಟುಮಾಡುವ ಪರಿಸ್ಥಿತಿಗಳು ಎದುರಾಗಿಲ್ಲ ಮುಂದೆಯೂ ಹಾಗಾಗದಂತೆೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ನಮ್ಮ ಮೇಲೆ ಇದೆ ಅದನ್ನು ಸಮರ​‍್ಕವಾಗಿ ನಿಭಾಯಿಸುವ ಮೂಲಕ ಹೋಳಿ ಮತ್ತು ರಂಜಾನ ಹಬ್ಬವನ್ನು ಯಶಸ್ವಿಯಾಗಿಸುತ್ತೇನೆ.  

ಈ ವೇಳೆ ಕಾಂಗ್ರೆಸ್ ಮುಖಂಡರಾದ ಸಂಗಣ್ಣ ಮೇಲಿನಮನಿ, ಸದಾಶಿವ ಮಠ, ತಾಲೂಕಾ ಯೂಥ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ ರಫೀಕ ಶಿರೋಳ, ಮಹಾಂತೇಶ ಹಡಪದ, ಸಮೀರ ದ್ರಾಕ್ಷಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ