ಮಳೆಯ ಆರ್ಭಟಕ್ಕೆ ನೀರಿನಲ್ಲಿ ತೇಲಾಡಿದ ಕಾರುಗಳು : ಜನಜೀವನ ಅಸ್ತವ್ಯಸ್ತ

ಮಳೆಯ ಆರ್ಭಟಕ್ಕೆ ನೀರಿನಲ್ಲಿ ತೇಲಾಡಿದ ಕಾರುಗಳು : ಜನಜೀವನ ಅಸ್ತವ್ಯಸ್ತ

ಸಂಕೇಶ್ವರ : ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಸಂಕೇಶ್ವರ ಪಟ್ಟಣದ ಲಕ್ಷ್ಮೀ ಹಳ್ಳಕ್ಕೆ ಪ್ರವಾಹ ಉಂಟಾಗಿ ಹಳ್ಳದ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ನೀರಲ್ಲಿ ತೇಲಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. 

    ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಸಂಕೇಶ್ವರ ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಮಳೆಯು ಪ್ರಾರಂಭಗೊಂಡು ಸುಮಾರು 3 ತಾಸು ಸತತ ಧಾರಾಕಾರವಾಗಿ ಸುರಿದ ಮಳೆಯಿಂದ ಸಂಕೇಶ್ವರದ ಪಟ್ಟಣದಲ್ಲಿನ ರಸ್ತೆಗಳು ಅಕ್ಷರಶಃ ಹಳ್ಳದಂತೆ ಕಂಡು ಬಂದವು.

  ಅಲ್ಲದೆ. ಪಟ್ಟಣದಲ್ಲಿ ಹರಿದು ಹೋಗುವ ಲಕ್ಷ್ಮೀ ಹಳ್ಳದಲ್ಲಿ ಮಳೆ ನೀರಿನಿಂದ ಪ್ರವಾಹ ಉಂಟಾಗಿ ಹಳ್ಳದ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರು ಕಾರು ಹಾಗೂ ಒಂದು ಪಿಕ್ ಬೂಲೇರೊ ಗೂಡ್ಸ್ ವಾಹನಗಳು ನೀರಿನಲ್ಲಿ ತೇಲಾಡಿವೆ. ಅದೇ ರೀತಿ ಮಳೆ ರಬಸಕ್ಕೆ ಪಟ್ಟಣದ ಕೆಲವು‌ ಮನೆಗಳಲ್ಲಿ ನೀರು ನುಗ್ಗಿರುವದು ಬರದಿಯಾಗಿದೆ. 

ಸುದ್ದಿ ಓದಿ