ಮಹಲಿಂಗಪುರ

ಬಿಎಸ್ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

ಬಿಎಸ್ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

ಮಹಾಲಿಂಗಪುರ08: ವಿದ್ಯಾರ್ಥಿಗಳಿಗೆ ವೃತ್ತಿ ಜೀವನದ ಆಯ್ಕೆ ಬಹಳ ಮುಖ್ಯ. ವೃತ್ತಿ ಜೀವನದ ಬಗ್ಗೆ ಯೋಚಿಸುವಾಗ ಹಲವಾರು ತಪ್ಪುಗಳು ಆಗುವ ಸಾಧ್ಯತೆ ಹೆಚ್ಚು ಅದಕ್ಕಾಗಿ ನಿಮಗೆ ಸರಿಯಾದ ಮಾರ್ಗದರ್ಶನ ಅವಶ್ಯ. ವೃತ್ತಿ ಮನುಷ್ಯನ ಜೀವನದ ಪ್ರಮುಖ ಹಂತ ಎಂದು ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕ ಎಸ್.ಸಿ.ಬಿಜ್ಜರಗಿ ಹೇಳಿದರು. 

ಸ್ಥಳೀಯ ಕೆಎಲ್‍ಇ ಸಂಸ್ಥೆಯ ಎಸ್‍ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಭಾಗಗಳ ವತಿಯಿಂದ “ಬಿಎಸ್ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ಬಿಎಸ್ಸಿ ವಿಭಾಗದಲ್ಲಿ ಅನೇಕ ಉದ್ಯೋಗಾವಕಾಶಗಳಿದ್ದು, ನಿರಂತರ ಪರಿಶ್ರಮ, ಆಸಕ್ತಿಯನ್ನು ಅಳವಡಿಸಿಕೊಂಡರೆ ಗುರಿ ತಲುಪಲು ಸಾಧ್ಯ ಎಂದರು. 

ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಕೆ.ಎಂ.ಅವರಾದಿ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಸ್ನೇಹಾ ಮುರಾರಿ, ಉಪನ್ಯಾಸಕರಾದ ಶೈಲಾ ಶೀಪರಮಟ್ಟಿ, ಶ್ರೀಯಾ ದಿವಾನಜಿ, ಎನ್.ಬಿ.ಹೊಸಪೇಟಿ, ಡಿ.ಎ.ನಾಯಕ, ಎಸ್‍ಎಸ್.ಮುಗಳ್ಯಾಳ, ಚಂದ್ರಕಲಾ ಗೆನ್ನುರ, ಸಂಧ್ಯಾ ಕೊಡಗನೂರ, ಎಸ್.ಬಿ.ಕೊಣ್ಣುರ ಹಲವರು ಇದ್ದರು.

ವಿದ್ಯಾರ್ಥಿನಿ ಗೀತಾ ಕೋಲ್ಕರ ಪ್ರಾರ್ಥಿಸಿದರು. ಶೈಲಾ ಶೀಪರಮಟ್ಟಿ ಸ್ವಾಗತಿಸಿದರು. ಎನ್.ಬಿ.ಹೊಸಪೇಟಿ ವಂದಿಸಿದರು. ಶ್ರೀಯಾ ದಿವಾನಜಿ ನಿರೂಪಿಸಿದರು. 


ಸುದ್ದಿ ಓದಿ