ಬೆಳಗಾವಿಯ ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಬೆಂಕಿ : ತಪ್ಪಿದ ಭಾರಿ ಅನಾಹುತ
ಬೆಳಗಾವಿ : ಪೆಟ್ರೋಲ್ ಬಂಕನಲ್ಲಿ ಸ್ವಿಫ್ಟ್ ಕಾರಿಗೆ ಆಕಸ್ಮಿಕ ಬೆಂಕಿ, ತಗುಲಿ ಕಾರು ಬೆಂಕಿಗರ ಆಹುತಿಯಾದ ಘಟನೆ ನಡೆದಿದ್ದು, ಬಂಕ್ ಸಿಬ್ಬಂದಿಗಳ ಎಚ್ವರಿಕೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಬೆಳಗಾವಿಯ ನೆಹರು ನಗರದ ಕೊಲ್ಲಾಪುರ ಸರ್ಕಲ್ ಬಳಿ ಇರುವ ಹೊಸಮನಿ ಆ್ಯಂಡ್ ಸನ್ಸ್ ಅವರಿಗೆ ಸೇರಿದ ಪೆಟ್ರೊಲ್ ಬಂಕ್ಈ ಅವಘಡ ನಡೆದಿದೆ. ಪೆಟ್ರೊಲ್ ಬಂಕ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಇಂದನ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್‌ಗೆ ಬಂದಿದ್ದ ಮಾರುತಿ ಸುಜುಕಿ ಕಂಪನಿಯ ಶಿಫ್ಟ್ ಕಾರು ಇಂಜಿನಿನಲ್ಲಿ ಬೆಂಕಿ ಕಾಣುತ್ತಿದ್ದಂತೆ ಕೀ ಜೊತೆಗೆ ಕಾರಿನ ಮಾಲಿಕ ಕಾರು ಬಿಟ್ಟು ಓಡಿ ಹೋರ ಹೋಗಿದ್ದಾರೆ.
ತಕ್ಷಣವೇ ಜಾಗೃತರಾದ ಬಂಕ್ ಸಿಬ್ಬಂದಿ ಅಗ್ನಿನಂದಕ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಯ ಈ ಕಾರ್ಯಾಚರಣೆ ಪೆಟ್ರೊಲ್ ಬಂಕ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದ ತಕ್ಷಣ ಕಾರನ್ನು ಪೆಟ್ರೋಲ್ ಬಂಕ್‌ನಿಂದ ಸ್ಥಳೀಯ ನಾಗರಿಕರು ಹಾಗೂ ಸಿಬ್ಬಂದಿ ಹೊರ ತಳ್ಳುವ ಮೂಲಕ ಹೆಚ್ವಿನ ಅನಾಹುತ ತಪ್ಪಿಸಿದ್ದಾರೆ.