ವೃತ್ತಿ ಬದುಕಿನಲ್ಲಿ ದೇಶ ಮತ್ತು ನಾಡಿಗಾಗಿ ಸೇವೆ ಮಾಡಬೇಕು:ಡಾ.ರಾಜೇಂದ್ರ ಸಣ್ಣಕ್ಕಿ
ಬೆಟಗೇರಿ 14:ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ವಿವಿಧ ಉನ್ನತ ಹುದ್ದೆಗೆ ಕೌಜಲಗಿ ಗ್ರಾಮದ ಯುವಕರು ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಗೋಕಾಕ ತಾಲೂಕಿನ ಕೌಜಲಗಿ ಗ್ರಾಮ ಪಂಚಾಯತಿ ವತಿಯಿಂದ ಜು.13ರಂದು ಹಮ್ಮಿಕೊಂಡ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ವಿವಿಧ ಉನ್ನತ ಹುದ್ದೆಗೆ ಆಯ್ಕೆಯಾದ ಕೌಜಲಗಿ ಗ್ರಾಮದ ಯುವಕರಿಬ್ಬರಿಗೆ ಸನ್ಮಾನ ನೆರವೇರಿಸಿ ಮಾತನಾಡಿ, ವೃತ್ತಿ ಬದುಕಿನಲ್ಲಿ ದೇಶ ಮತ್ತು ನಾಡಿಗಾಗಿ ಸೇವೆ ಮಾಡಬೇಕು. ಇನ್ನೂ ಉನ್ನತ ಮಟ್ಟದ ಹುದ್ದೆಗೆ ಆಯ್ಕೆಯಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.
ಭಾರತ ಸರ್ಕಾರದ ಭಾರತೀಯ ಕೃಷಿ ಇಲಾಖೆ ಹಿರಿಯ ತೋಟಗಾರಿಕೆ ಅಧಿಕಾರಿಯಾಗಿ ಕೌಜಲಗಿ ಗ್ರಾಮದ ನಾಗರಾಜ ಶಿವಾನಂದ ಶೆಟ್ಟರ, ಭಾರತ ಸರ್ಕಾರದ ಗೃಹ ಮಂತ್ರಾಲಯ ಕೇಂದ್ರ ಶಸತ್ತ್ರ ಪೊಲೀಸ್ ಪಡೆ ಅಸಿಸ್ಟಂಟ್ ಕಮಾಂಡೆಟ್ನಾಗಿ ಉನ್ನತ ಹುದ್ದೆಗೆ ಆಯ್ಕೆಯಾದ ಇವರನ್ನು ಕೌಜಲಗಿ ಗ್ರಾಮ ಪಂಚಾಯತಿ ವತಿಯಿಂದ ಸತ್ಕರಿಸಲಾಯಿತು.
ಗ್ರಾಪಂ ಅಧ್ಯಕ್ಷ ಅಶೋಕ ಉದ್ದಪ್ಪನ್ನವರ, ಮಹೇಶ ಪಟ್ಟಣಶೆಟ್ಟಿ, ಶಿವಾನಂದ ಲೋಕನ್ನವರ, ನೀಲಪ್ಪ ಕೇವಟಿ, ರವಿ ಪರುಶೆಟ್ಟಿ, ರಾಯಪ್ಪ ಬಳೋಲ್ದಾರ, ಶಿವಪ್ಪ ಭಜಂತ್ರಿ, ಹಾಶೀಮ್ ನಾಗರ್ಚಿ, ಎಮ್.ಡಿ.ಖಾಜಿ, ಯಲ್ಲಪ್ಪ ಸುನ್ನಾಳ, ಭೀಮಪ್ಪ ಹೊಸಮನಿ, ಸ್ಥಳೀಯ ಗ್ರಾಪಂ ಕಾರ್ಯದರ್ಶಿ, ಸಿಬ್ಬಂದಿ ವರ್ಗ, ಗಣ್ಯರು, ಸ್ಥಳೀಯರು ಇದ್ದರು.