ಹುಕ್ಕೇರಿ

ಕೆನರಾ ಬ್ಯಾಂಕ ಶಾಖೆಯಿಂದ 2 ಲಕ್ಷ ರೂ ಪರಿಹಾರ ವಿತರಣೆ

ಕೆನರಾ ಬ್ಯಾಂಕ ಶಾಖೆಯಿಂದ 2 ಲಕ್ಷ ರೂ ಪರಿಹಾರ ವಿತರಣೆ

ಲೋಕದರ್ಶನ ವರದಿ 

ಹುಕ್ಕೇರಿ 27: ಹುಕ್ಕೇರಿ ಕೆನರಾ ಬ್ಯಾಂಕ ಶಾಖೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 2 ಲಕ್ಷ ರೂ ಪರಿಹಾರ ಧನ ವಿತರಿಸಲಾಯಿತು. 

ಹುಕ್ಕೇರಿ ತಾಲೂಕು ಬಡಕುಂದ್ರಿ ಗ್ರಾಮದ ನಿವಾಸಿ ಶಂಕರ ರಾವಸಾಹೇಬ ಮಲ್ಲಹೊಳಿ ಅವರು ಉಳಿತಾಯ ಖಾತೆಯಲ್ಲಿ ಕೇವಲ 20/- ರೂ ವಾರ್ಷಿಕ ಕಂತಿನ ಪಿಎಂಎಸ್‌ಬಿವೈ ಜೀವವಿಮೆ ಪಡೆದಿದ್ದರು.  

ಅವರ ರಸ್ತೆ ಅವಘಡದಲ್ಲಿ ಮೃತಪಟ್ಟಿರುವ ಕಾರಣ ಕೇಂದ್ರ ಸರಕಾರದ ಅಪಘಾತ ವಿಮಾರಕ್ಷಣೆ ಯೋಜನೆಯಡಿ ಫಲಾನುಭವಿಗೆ ಮಾರ್ಚ 25ರಂದು 2ಲಕ್ಷ ರೂ ಪರಿಹಾರ ವಿತರಿಸಲಾಯಿತು. 

ಮೃತರ ತಂದೆ ರಾವಸಾಹೇಬ ಮಲ್ಲಹೊಳಿ ಅವರಿಗೆ ಪರಿಹಾರ ವಿತರಿಸಿದ ಶಾಖೆಯ ಹಿರಿಯ ವ್ಯವಸ್ಥಾಪಕ ರಾಜಶೇಖರ ಪಿ ಮಾತನಾಡಿ ಭಾರತ ಸರಕಾರ ಜಾರಿಗೊಳಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳು ಅತ್ಯಂತ ಕಡಿಮೆ ಬೆಲೆಗೆ ಅಪಘಾತ ಮತ್ತು ಜೀವವಿಮೆ ಎರಡನ್ನು ನೀಡುತ್ತಿವೆ. ಸಾಮಾನ್ಯ ಜನರಿಗೂ ಕೈಗೆಟುಕುವ ವಿಮಾ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಕುಟುಂಬದ ಆರ್ಥಿಕ ಭದ್ರತೆಯನ್ನು ಸುರಕ್ಷಿತ ಮಾಡಿಕೊಳ್ಳುವಂತೆ ಕರೆ ನೀಡಿದರು. ಉಳಿತಾಯ ಹಾಗೂ ಸಾಲ ಸೌಲಭ್ಯಗಳು ಸೇರಿದಂತೆ ಬ್ಯಾಂಕಿನಿಂದ ದೊರೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.  

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್‌.ಮಲ್ಲಾಡದ, ಬ್ಯಾಂಕ ಅಧಿಕಾರಿ ಸಣಪತಿ ಗೋವಿಂದ, ಸಂಜೀವಿನಿ ಒಕ್ಕೂಟದ ತಾಲೂಕಾ ಯೋಜನಾಧಿಕಾರಿ ರವಿಚಂದ್ರ ಕಾಂಬ್ಳೆ, ಭೀಮಸಿ ಗೊರಖನಾಥ, ಸಂಜೀವಿನಿ ಒಕ್ಕೂಟದ ಎನ್‌ಬಿಕೆ ನಿರ್ಮಲಾ ಆರ್‌. ಕಿಲ್ಲೇದಾರ, ಶೀಲಾ ಎಂ. ಮಾನಗಾಂವಿ, ಸ್ಮಿತಾ ಐ.ಶಿರಗಾಂವಿ ಗ್ರಾಹಕರು ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ