ಕ್ಯಾಂಪಸ್ ಸಂದರ್ಶನ: 91 ವಿದ್ಯಾರ್ಥಿಗಳಿಗೆ ಉದ್ಯೋಗ
ಮಹಾಲಿಂಗಪುರ05: ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಪಾಲಿಟೆಕ್ನಿಕ ಕಾಲೇಜಿನಲ್ಲಿ ಡಿಪೆÇ್ಲೀಮಾ ಅಂತಿಮ ವμರ್Àದ ವಿದ್ಯಾರ್ಥಿಗಳಿಗೆ, ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಪಾಸಾದ ವಿದ್ಯಾರ್ಥಿನಿಯರಿಗೆ ದಿ. 2ರಂದು ಕ್ಯಾಂಪಸ್ ಸಂದರ್ಶನ ನಡೆಯಿತು.
ಈ ಸಂದರ್ಶನದಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ ವಿಭಾಗದ 08, ಮೆಕ್ಯಾನಿಕಲ್ ವಿಭಾಗದ 21, ಎಲೆಕ್ಟ್ರಾನಿಕ್ ವಿಭಾಗದ 15, ಸಿವಿಲ್ ವಿಭಾಗದ 24 ಮತ್ತು ಎಲೆಕ್ಟ್ರಿಕಲ್ ವಿಭಾಗದ 23 ವಿದ್ಯಾರ್ಥಿಗಳು ಒಟ್ಟಾರೆ 91 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ನಮಗೆ ಸಂತಸ ತಂದಿದೆ ಎಂದು ಪ್ರಾಚಾರ್ಯ ಎಸ್.ಐ ಕುಂದಗೋಳ ತಿಳಿಸಿದರು.
ಕೋಲಾರದ ನೀಡ್ಸ್ ಮ್ಯಾನ್ ಪಾವರ್ ಸಪೆÇೀರ್ಟ ಸರ್ವಿಸಿಸ್ ಕಂಪನಿ ಮತ್ತು ಲ್ಯುಮ್ಯಾಕ್ಸ್ ಆಟೋ ಟೆಕ್ನಾಲೊಜಿಜ ಕಂಪನಿಗಳು ಆಪ್ಟಿಟಿವ್ಢ ಟೆಸ್ಟ ಮತ್ತು ಟೆಕ್ನಿಕಲ್ ರೌಂಡಗಳನ್ನೊಳಗೊಂಡಂತೆ ಈ ಸಂದರ್ಶನವನ್ನು ನಡೆಸಿತು.
ಈ ಸಂದರ್ಶನದಲ್ಲಿ 85 ವಿದ್ಯಾರ್ಥಿನಿಯರು ಹಾಗೂ 278 ವಿದ್ಯಾರ್ಥಿಗಳು ಭಾಗವಹಿಸಿ, 29 ಐಟಿಐ, 5 ಪದವಿ ಮತ್ತು 210 ಡಿಪೆÇ್ಲೀಮಾ ವಿದ್ಯಾರ್ಥಿಗಳು ಅಂತಿಮ ಸುತ್ತಿನಲ್ಲಿ ಆಯ್ಕೆಯಾದರು.
ಕಾಲೇಜಿನ ಉದ್ಯೋಗಾಧಿಕಾರಿ ರಾಚಣ್ಣ ಕಾಳಗಿ, ಉಪನ್ಯಾಸಕ ಅಭಿμÉೀಕ ಮುರಗುಂಡಿ, ಗುರುರಾಜ ಅಥಣೆ, ವಿಶಾಲ ಮೆಟಗುಡ್ಡ, ನೀಲಾ ಪಾಟೀಲ ಮತ್ತು ಜ್ಯೋತಿ ಕುರಿ ಉಪಸ್ಥಿತರಿದ್ದರು.