ಮಹಲಿಂಗಪುರ

ವಿದ್ಯಾರ್ಥಿಗಳ ಉಜ್ಜಲ ಭವಿಷ್ಯಕ್ಕೆ ಶಿಬಿರಗಳು ಸಹಕಾರಿ: ಸೋರಗಾಂವಿ

ವಿದ್ಯಾರ್ಥಿಗಳ ಉಜ್ಜಲ ಭವಿಷ್ಯಕ್ಕೆ ಶಿಬಿರಗಳು ಸಹಕಾರಿ: ಸೋರಗಾಂವಿ

ಶ್ರೀ ಬಸವಾನಂದ ಶಾಲೆಯಲ್ಲಿ ಶ್ರೀ ಸಿದ್ದಗಂಗೆ ಬೇಸಿಗೆ ಶಿಬಿರದ ಸಮಾರೋಫ ಸಂಭ್ರಮ 

ಮಹಾಲಿಂಗಪುರ 26: ಪ್ರತಿ ಮಗುವಿನ ಭವಿಷ್ಯ ಶಿಕ್ಷಕರ ಕೈಯಲ್ಲಿದೆ, ಆದರೆ ಮಗುವಿನ ಭವಿಷ್ಯ ಉಜ್ಜಲವಾಗಬೇಕಾದರೆ ಪಾಲಕರ ಪಾತ್ರ ಬಹಳ ದೊಡ್ಡದಿದೆ. ನಮ್ಮ ಮಗು ಡಾಕ್ಟರ್ ಇಂಜಿನಿಯರ್ ಆಗಬೇಕೆಂದು ಕನಸ್ಸು ಕಾಣುವುದು ಸುಲಭ ಆದರೆ ಅದನ್ನು ನನಸ್ಸು ಮಾಡಲು ಮಗುವುಗೆ ಉತ್ತಮ ಶಿಕ್ಷಣ ಕೊಡಬೇಕು ಅದಕ್ಕೆ ಶಿಕ್ಷಕರು ನಡೆಸುವ ಇಂತಹ ಬೇಸಿಗೆ ಶಿಬಿರಗಳು ತುಂಬಾ ಸಹಕಾರಿಯಾಗಿವೆ ಎಂದು ನಗರದ ಖ್ಯಾತ ವೈದ್ಯರು ಹಾಗೂ ಬಸವಾನಂದ ಬ್ರಹ್ಮ ವಿದ್ಯಾಶ್ರಮ ಟ್ರಸ್ಟ್‌ ಸದಸ್ಯ ಡಾ ಬಿ ಡಿ ಸೋರಗಾಂವಿ ಹೇಳಿದರು. 

ಸ್ಥಳೀಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಸವಾನಂದ ಶಾಲೆಯಲ್ಲಿ ನಡೆಯುತ್ತಿರುವ ಸಿದ್ದಗಂಗೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಈ ಶಿಬಿರ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ನಾಂದಿಯಾಗಿದೆ. ಮಕ್ಕಳು ಬೇಸಿಗೆಯಲ್ಲಿ ಆಟ ಆಡಿ ಕಾಲಹರಣ ಮಾಡುವು ಬದಲು ಆಟದೊಂದಿಗೆ ಪಾಠವನ್ನು ಕಲಿತರೆ ಮುಂದಿನ ತರಗತಿಗಳಿಗೆ ಅನುಕೂಲ ಆಗುತ್ತದೆ. ಇಂತಹ ಶಿಬಿರಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿವೆ ಎಂದರು. 

ಟ್ರಸ್ಟ್‌ ಸದಸ್ಯ ಆದ ಕಲ್ಲಪ್ಪ ಚಿಂಚಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮೈಗುಡಿಸಿಕೊಂಡರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂದಿನ ಮಕ್ಕಳಿಗೆ ನೈತಿಕ, ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವುದು ಬಹಳ ಮುಖ್ಯವಾಗಿದೆ.ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಅವಕಾಶ, ಪ್ರಯತ್ನ, ದೇವರ ಕೃಪೆ. ಗುರು ಹಿರಿಯರ ಆಶೀರ್ವಾದ ಈ ನಾಲ್ಕು ಅಂಶಗಳ ಅಗತ್ಯವಿದೆ ಎಂದರು. 

ಮುಖ್ಯ ಅತಿಥಿಗಳಾಗಿ  ಬಿ ಬಿ ಕುದರಿಮನಿ, ಶಶಿಧರ ಉಳ್ಳಾಗಡ್ಡಿ, ಶ್ರೀಮತಿ ಸಪನಾ ಅನಿಗೋಳ ಮಾತನಾಡಿದರು , ಪ್ರಭು ಬೆಳಗಲಿ,  ಮಹಾದೇವ ಅಂಗಡಿ, ಯಲ್ಲಪ್ಪ ಹಟ್ಟಿ ಎಂ ಆರ್ ಬೆಟಗೇರಿ ವಿಶೇಷ ಆಹ್ವಾನಿತರಾಗಿ ಚನ್ನಯ್ಯ ಚಟ್ಟಿಮಠ, ವಿಷ್ಣುಗೌಡ ಪಾಟೀಲ, ಮಹೇಶಚಂದ್ರ ತೇಲಿ, ವಿವೇಕ ಒಸ್ವಾಲ ವೇದಿಕೆ ಮೇಲೆ ಉಪಸ್ಥಿತರಿದ್ದರು. ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಪ್ರಜ್ವಲ್ ಹಿಕಡಿ, ವಿರಬದ್ರ ಮಾಳಿ ಹಾಗೂ ಎಲ್ಲ ವಿದ್ಯಾರ್ಥಿಗಳೆ ಕಾರ್ಯಕ್ರಮ ನಡೆಸಿಕೊಟ್ಟರು. ಬೇಸಿಗೆ ಶಿಬಿರದ ಸಂಚಾಲಕ ಎಸ್‌.ಎಮ್‌. ಮುಗಳಖೋಡ, ಎಸ್‌.ಡಿ. ಕಾಂಬಳೇಕರ ಎಸ್‌. ಎಸ್‌. ಉಳ್ಳೇಗಡ್ಡಿ ಹಾಗೂ ಅ.ಗಿ.ಹುಣಶ್ಯಾಳ ಸರ್ ಮತ್ತು ಶಿಬಿರದ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ