ಪಾಂಡಿಗಾವ ಗ್ರಾಮದಲ್ಲಿ 15 ದಿನಗಳಲ್ಲಿ 400 ಸಸಿ ನೆಡುವ ಅಭಿಯಾನ
ಸಂಬರಗಿ 01 : ಗ್ರಾಮ ಸಂಜೀವನಿ ಪ್ರತಿಷ್ಠಾನದ ವತಿಯಿಂದ ಪಾಂಡೇಗಾಂವ್ ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಮನೆಗಳ ಮುಂದೆ ಮರಗಳನ್ನು ನೆಡುವ ಅಭಿಯಾನ ಕೈಗೊಳ್ಳಲಾಗಿದೆ. ಅಭಿಯಾನದ ಅಂಗವಾಗಿ ಎರಡನೇ ವಾರದಲ್ಲಿ 200 ಸಸಿಗಳನ್ನು ನೆಡಲಾಗಿದ್ದು, ಇದುವರೆಗೆ ಒಟ್ಟು 400 ಸಸಿಗಳನ್ನು ನೆಡಲಾಗಿದೆ.
ಪ್ರತಿಷ್ಠಾನದ ಮುಖ್ಯಸ್ಥ ವಿಠ್ಠಲ ಪೂಜಾರಿ ಮಾತನಾಡಿ, ಒಂದೇ ದಿನದಲ್ಲಿ 200 ಸಸಿಗಳನ್ನು ನೆಟ್ಟು, ಮುಂದಿನ 15 ದಿನಗಳಲ್ಲಿ ಒಟ್ಟು 400 ಸಸಿಗಳನ್ನು ನೆಡುವ ಮೂಲಕ ಗ್ರಾಮವನ್ನು ಹಸಿರಿನಿಂದ ಆವೃತಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಪ್ರತಿ ಸಸಿಗೂ ಟ್ಯಾಂಕರ್ಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ, ಶಿಕ್ಷಣ, ಪರಿಸರ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳನ್ನು ಪ್ರತಿಷ್ಠಾನ ಕೈಗೊಂಡಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಗ್ರಾಮದ ಸಮೀಪ ಸುಸಜ್ಜಿತ ಉದ್ಯಾನವನ ನಿರ್ಮಿಸುವುದು ಪ್ರತಿಷ್ಠಾನದ ಗುರಿಯಾಗಿದೆ. ವಿವಿಧ ಜಾತಿಯ 400 ಸಸಿಗಳನ್ನು ನೆಡಲಾಗಿದೆ. ಕಾರ್ಯಕ್ರಮದಲ್ಲಿ ಅಕ್ಷಯ ಕುಮಾರ್ ಪಾಟೀಲ, ಕೃಷ್ಣ ಆಠವಳೆ, ಅರುಣ ಚೌಗುಲೆ, ಸುನೀಲ ಚೌಗುಲೆ, ಓಂಕಾರ ಚೌಗುಲೆ, ಪ್ರಕಾಶ ಕಾಂಗ್ಲೆ, ಹೃತಿಕ್ ಕಾಂಬಳೆ, ಅರ್ಮಾನ್ ಮುಜಾವರ್, ಅಶೋಕ ಕೊಡಗ್, ಅಭಿನವ ಪವಾರ್, ಶುಭಂ ಜಾಧವ್, ಸಂದೀಪ್ ಪಾಟೀಲ,
ಪ್ರತೀಕ ಪಾಟೀಲ, ಶ್ರೀಜಿತ್ ಪಾಟೀಲ, ಅಲೋಕ್ ಪಾಟೀಲ, ಸುಮಿತ್ ವಾಘಮೋಡೆ, ಬಲರಾಮ ವಾಘಮೋಡೆ, ತಾನಾಜಿ ಪಾಟೀಲ, ಅಮೋಲ್ ಪಾಟೀಲ, ದಯಾನಂದ ಕಗ್ಗಳ, ಕಾಂತೇಶ ಕಗ್ಗಳ, ಪ್ರಕಾಶ ಕಗ್ಗಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಸುನೀಲ ಪಾಟೀಲ ಸ್ವಾಗತಿಸಿ, ಧನ್ಯವಾದ ಅರ್ಿಸಿದರು.