ಚಿಕ್ಕೋಡಿ

ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡಲು ಸಿ.ಟಿ.ಇ. ಸಂಸ್ಥೆ ಸದಾ ಬದ್ಧ: ಉಪಾಧ್ಯಕ್ಷ ಮಾಂಜರೇಕರ

ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡಲು ಸಿ.ಟಿ.ಇ. ಸಂಸ್ಥೆ ಸದಾ ಬದ್ಧ: ಉಪಾಧ್ಯಕ್ಷ ಮಾಂಜರೇಕರ

             ಚಿಕ್ಕೋಡಿ 23: ಶತಮಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸುತ್ತಾ ಬಂದಿರುವ ಸಿ.ಟಿ.ಇ. ಸಂಸ್ಥೆ, ಇಂದಿಗೂ ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಮರ್ಥವಾಗಿದೆ. ಪಾಲಕರ ಅಪೇಕ್ಷೆಗೂ ಮೀರಿ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ ಹಾಗೂ ಟಿ.ವಿ.ಗಳಿಂದ ದೂರವಿಟ್ಟು ಅವರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯತ್ತ ಹೆಚ್ಚಿನ ಗಮನ ಹರಿಸಬೇಕೆಂದು ಸಿ.ಟಿ.ಇ. ಸಂಸ್ಥೆಯ ಉಪಾಧ್ಯಕ್ಷ ವಿ.ಎಸ್‌. ಮಾಂಜರೇಕರ ಹೇಳಿದರು.ಪಟ್ಟಣದ ಸಿ.ಟಿ.ಇ. ಸಂಸ್ಥೆಯ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ 2025ಹಿ26್ಫೂ ಸಾಲಿನ “ಸ್ಪಂದನ” ್ತುೂಹಿ1್ಘ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪನಿರ್ದೇಶಕರ ಕಾರ್ಯಾಲಯದ ಶಿಕ್ಷಣ ಸಂಯೋಜಕ ಎ.ಎಚ್‌. ಬಿರಾದರ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಮೂಲಕ ದೇಶಕ್ಕೆ ಸದೃಢ ಹಾಗೂ ಆರೋಗ್ಯವಂತ ಮಕ್ಕಳನ್ನು ನೀಡುವ ಹೊಣೆಗಾರಿಕೆ ಪಾಲಕರ ಮೇಲಿದೆ ಎಂದರು.

               ಜೊತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಗುರು-ಹಿರಿಯರ ಗೌರವ ಬೆಳೆಸುವುದು ಇಂದಿನ ದಿನಮಾನದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ಹಂತವನ್ನು ಪೂರ್ಣಗೊಳಿಸಿ ಪ್ರಾಥಮಿಕ ಹಂತಕ್ಕೆ ಪ್ರವೇಶ ಪಡೆದ ಯು.ಕೆ.ಜಿ. ಪುಟಾಣಿಗಳನ್ನು ಗೌರವ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಿ.ಟಿ.ಇ. ಸಂಸ್ಥೆಯ ಹಿರಿಯ ನಿರ್ದೇಶಕ ವಿ.ಪಿ. ಶೇಡಬಾಳ ಗೌರವ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ನಿರ್ದೇಶಕ ಎಸ್‌.ಬಿ. ಕುಲಕರ್ಣಿ, ಯುವ ನಿರ್ದೇಶಕರು ಓಂಕಾರ ಎಸ್‌. ಕುಲಕರ್ಣಿ, ಕಿರಣ ಸಿ. ಕುಲಕರ್ಣಿ, ಜಂಟಿ ಕಾರ್ಯದರ್ಶಿಗಳು ಮಿಥುನ ಎಸ್‌. ದೇಶಪಾಂಡೆ, ಸಂಕೇತ ವಿ. ಮಾಂಜರೇಕರ, ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲೆ ಎ.ಪಿ. ಜೋಶಿ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ ಎಸ್‌. ಮಲಾಬಾದೆ ಉಪಸ್ಥಿತರಿದ್ದರು.

            ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಕ್ಷಕಿ ರೂಪಾ ಪಿ. ರಾಂಪೂರ ಸ್ವಾಗತಿಸಿ, ಶಿಕ್ಷಕ ಸುಧೀರ ಜೆ. ಪಾಟೀಲ ಅಧ್ಯಕ್ಷರು ಹಾಗೂ ಅತಿಥಿಗಳ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಆಕರ್ಷಕ ನೃತ್ಯ ಕಾರ್ಯಕ್ರಮಗಳು ಜರುಗಿದವು.ಅದೇ ವೇಳೆ ಸಿ.ಟಿ.ಇ. ಸಂಸ್ಥೆಯ ಅಂಗಸಂಸ್ಥೆಗಳಾದ ಪದವಿ, ಪದವಿಪೂರ್ವ ಹಾಗೂ ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಪಾಲಕರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಕಾರ್ಯಕ್ರಮದ ನಿರೂಪಣೆಯನ್ನು ಆನಂದ ಸಿ. ಬ್ಯಾಕೂಡೆ ಹಾಗೂ ಎ.ಎಸ್‌. ಮಂಗಾವತಿ ನಿರ್ವಹಿಸಿದರು. 


ಸುದ್ದಿ ಓದಿ