ಹಗರಿಬೊಮ್ಮನಹಳ್ಳಿ

ಸಿಟಿ ರವಿ ಕೂಡಲೇ ಕ್ಷಮೆಯಾಚಿಸಲಿ: ಪತ್ರೇಶ್

ಸಿಟಿ ರವಿ ಕೂಡಲೇ ಕ್ಷಮೆಯಾಚಿಸಲಿ: ಪತ್ರೇಶ್


ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ಸೆ.13 :  ವಿಪಕ್ಷ ನಾಯಕ ಸಿದ್ಧರಾಮಯ್ಯ ಬಗ್ಗೆ ಹಗುರವಾಗಿ ದಾಖಲೆಗಳಿಲ್ಲದೇ ಅಶ್ಲೀಲವಾಗಿ ನಿಂದಿಸಿರುವ ಮಾಜಿ ಸಚಿವ ಸಿಟಿ ರವಿ ಮಾಜಿ ಸಿಎಂ ಸಿದ್ಧರಾಮಯ್ಯನವರ ಕ್ಷಮೆ ಯಾಚಿಸಬೇಕೆಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ. 

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ರಾಜಕಾರಣಿ, ಮುತ್ಸದ್ದಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ವ್ಯಕ್ತಿಯ ಬಗ್ಗೆ ಪೆದ್ದ ಎಂದು ನಾಲಿಗೆ ಹರಿ ಬಿಡುವ ಮೂಲಕ ತಮ್ಮ ವಿಕೃತ ಸಂಸ್ಕೃತಿಯನ್ನು ಪ್ರದರ್ಶನ ಮಾಡಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು. 

ವಿಪರೀತ ಕುಡಿದು ಮತ್ತಿನಲ್ಲಿ ವಾಹನ ಚಲಾಯಿಸಿ ಎರಡು ಜೀವ ಬಲಿ ಪಡೆದ ಮಾಜಿ ಸಚಿವ ಸಿಟಿ ರವಿ ನಾಲಿಗೆ ಹಿಡಿತದಲ್ಲಿ ಇಟ್ಟುಕೊಳ್ಳಿ ಇಲ್ಲವೇ ಮತ್ತಿನ ಅಮಲಿನಲ್ಲಿ ಮಾತಾನಾಡುವುದನ್ನು ಬಿಡಿ ಇಲ್ಲದಿದ್ದರೆ ಜನತೆ ದಾರಿಯಲ್ಲಿ ಓಡಾಡಿಸಿ ಬಡಿದಾರು, ಕೂಡಲೇ ಸಿದ್ದರಾಮಯ್ಯ ಅವರಿಗೆ ಕ್ಷಮೆ ಕೇಳುವಂತೆ ಒತ್ತಾಯಿಸಿದರು. 


ಸುದ್ದಿ ಓದಿ