ಹಗರಿಬೊಮ್ಮನಹಳ್ಳಿ

ಪ್ರ್ರಾಥಮಿಕ ಶಾಲೆಗಳ ಮುಚ್ಚುವ ಸರಕಾರದ ನಿರ್ಧಾರಕ್ಕೆ ಸಿಪಿಐಎಂ ವಿರೋಧ

ಪ್ರ್ರಾಥಮಿಕ ಶಾಲೆಗಳ ಮುಚ್ಚುವ ಸರಕಾರದ ನಿರ್ಧಾರಕ್ಕೆ ಸಿಪಿಐಎಂ ವಿರೋಧ

ಹಗರಿಬೊಮ್ಮನಹಳ್ಳಿ 27: ಕರ್ನಾಟಕ ಸರಕಾರ ರಾಜ್ಯದ್ಯಾಂತ 13,800 ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿರುವುದು ಬಡ ಹಾಗೂ ದಲಿತರ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರವಾಗಿದೆ ಎಂದು ಸಿಪಿಐಎಂನ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ ಹೇಳಿದರು. 

ಪಟ್ಟಣದ ಕೃಷಿಕ ಭವನದಲ್ಲಿ ಏರಿ​‍್ಡಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ರಾಜ್ಯದ 13800 ಪ್ರಾಥಮಿಕ ಶಾಲೆಗಳನ್ನು  ಮುಚ್ಚುವ ನಿರ್ಧಾರ ನಿಜಕ್ಕೂ ಕನ್ನಡ ವಿರೋಧಿ ನಿಲುಮೆಯಾದೆ, ಶಾಲೆಗಳನ್ನು ಮುಚ್ಚು ಪ್ರಮಾಣ ದೊಡ್ಡದಿದ್ದು ಸುಮಾರು ಶೇ.20ಕ್ಕೂ ಅಧಿಕವಾಗುತ್ತದೆ ಇದು ನೂತನ ಶಿಕ್ಷಣ ನೀತಿ ಜಾರಿಯ ಮುಂದುವರೆದ ದುರ್ನಡತೆಯಾಗಿದೆ ಹಾಗೂ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದುಕ್ಕೆ ಒಕ್ಕೂಟ ಹಾಗೂ ರಾಜ್ಯ ಸರಕಾರಗಳೇ ನೇರ ಹೊಣೆಯಗಿವೆ ಕೂಡಲೆ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದರು. 

ರಾಜ್ಯ ಸಮಿತಿ ಸದಸ್ಯೆಯಾದ ಮಾಳಮ್ಮ ಮಾತನಾಡಿ ಪಕ್ಕದ ಕೇರಳ ರಾಜ್ಯದಲ್ಲಿ ಶಾಲೆಗಳ ಗುಣಮಟ್ಟವನ್ನು ವ್ಯಾಪಕವಾಗಿ ಹೆಚ್ಚಿಸಿರುವುದರಿಂದ ಸಾವಿರಾರು ಖಾಸಗೀ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದಂತಾಗಿ ಮುಚ್ಚಿದ್ದು, ಸಾರ್ವಜನಿಕ ಶಾಲೆಗಳಿಗೆ ಮಕ್ಕಳು ಹಿಂದಿರುಗಿರುವುದು ಉದಾಹರಣೆಯಾಗಿದೆ, ರಾಜ್ಯದಲ್ಲಿ ಶಿಕ್ಷಣವನ್ನು ಖಾಸಗೀಕರಣ ಹಾಗೂ ಕೋಮವಾದಿಕರಿಸುವ ಹೂಸ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಬಡವರ, ಕನ್ನಡ ವಿರೋಧ ವ್ಯೆಕ್ತಪಡಿಸುವ ಕಾರ್ಯವನ್ನು ಕೈಬಿಟ್ಟು ಸರಕಾರಿ ಶಾಲೆಗಳನ್ನು ಮೇಲ್ದಜೆಗೇರಿಸುವ ಬಜೆಟ್ ಒದಗಿಸಿ ಯೋಜಿತ ಕ್ರಮಗಳಿಗೆ ಮುಂದಾಗುವಂತೆ ತೀಳಿಸಿದರು. 

ಈ ಸಂಧರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಆರ್‌.ಎಸ್‌.ಬಸವರಾಜ, ಜಿಲ್ಲಾ ಸಮಿತಿ ಕಾರ್ಯದರ್ಶಿ ಆರ್‌.ಭಾಸ್ಕರ್ ರೆಡ್ಡಿ, ಜಗನ್ನಾಥ್ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ