ಅಗ್ನಿಪಥ್ ಯೋಜನೆ ರದ್ದುಗೊಳಿಸುವಂತೆ ಸಿಪಿಐಎಂ ಮನವಿ
ಹಗರಿಬೊಮ್ಮನಹಳ್ಳಿ.ಜು.02 : ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ಮೂಲಕ ದೇಶದ ನಿರುದ್ಯೋಗಿ ಯುವ ಜನತೆಗೆ ಖಾಯಂ ಉದ್ಯೋಗ ನೀಡುವ ಬದಲು ದೇಶದ ಭದ್ರತೆಗೆ ಧಕ್ಕೆ ತರುವ ಮತ್ತು ನಿರುದ್ಯೋಗಿ ಯುವ ಜನತೆಯನ್ನು ಕುಹಕ ಮಾಡುವ ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸುತ್ತಿರುವುದನ್ನು ಖಂಡಿಸಿ ಸಿಪಿಐಎಂ ಪಕ್ಷ ತಹಶಿಲ್ದಾರ್ಗೆ ಮನವಿಯನ್ನು ನೀಡಿತು.
ಈ ವೇಳೆ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ ಗುತ್ತಿಗೆ ಆಧಾರದಲ್ಲಿ ಸುಮಾರು 46ಸಾವಿರ ನಿರುದ್ಯೋಗಿ ಯುವ ಜನರನ್ನು ನಾಲ್ಕು ವರ್ಷಗಳ ಕಾಲ ಸೈನಿಕ ಸೇವೆಗೆ ನೇಮಸಿಕೊಂಡು ನಂತರ ಯಾವುದೇ ಪರಿಹಾರ ನೀಡದೇ ಬೀದಿಗೆ ತಳ್ಳುವ ಯೋಜನೆ ಇದಾಗಿದೆ ಇಂತಹ ವೃತ್ತಿಪರವಲ್ಲದ ಗುತ್ತಿಗೆ ಆಧಾರದ ಸೈನ್ಯದಿಂದ ದೇಶದ ಭದ್ರತೆಗೆ ಮಾರಕವಾಗುತ್ತದೆ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಇದರ ಜೊತೆ ಸೈನ್ಯದಲ್ಲಿ ಖಾಲಿ ಇರುವ 1.46 ಲಕ್ಷ ಹುದ್ದೆಗಳನ್ನು ತುಂಬಿಕೊಳ್ಳಲು ಕ್ರಮವಹಿಸಬೇಕು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಸಚಿವ ನಾಗೇಶ ಅವರನ್ನು ವಜಾ ಮಾಡಬೇಕು, ನಾಡಿನ ಮಹಾನ್ ಹಾಗೂ ಗಣ್ಯ ವ್ಯೆಕ್ತಿಗಳನ್ನು ಅವಮಾನಿಸಲಾಗಿದೆ ಜೊತೆಗೆ ದುಂದು ವೆಚ್ಚಕ್ಕೂ ಮುಂದಾಗಿದ್ದು ರಾಜ್ಯದ ಬೊಕ್ಕಸಕ್ಕೆ ಮಾರಕವಾಗಿದೆಕೂಡಲೇ ಶಿಕ್ಷಣ ಸಚಿವ ಹಾಗೂ ಪರೀಶೀಲನಾ ಸಮಿತಿಯನ್ನು ವಜಾ ಮಾಡುವಂತೆ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಜಗನ್ನಾಥ್, ಚಾಂದಬೀ, ಸರೋಜ, ಬಸವರಾಜ, ಮೈಲಮ್ಮ, ಹನುಮಂತಪ್ಪ, ರಾಮಣ್ಣ ಸೇರಿದಂತೆ ಇನ್ನಿತರರು ಇದ್ದರು.