ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಿ ಸಿಪಿಐ ಪಕ್ಷ ಒತ್ತಾಯ
ಬಳ್ಳಾರಿ 07: ನಗರದ ಮೋತಿ ಸರ್ಕಲ್ನಿಂದ ರಾಯಲ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಛೇರಿವರಿಗೆ ಮೆರವಣಿಗೆ ಮೂಲಕ ಪ್ರತಿಭಟಿಸಿದರು. ತರುವಾಯ ಸಿಪಿಐ ಪಕ್ಷದ ಸಹ ಕಾರ್ಯದರ್ಶಿ ಅಡಿವಪ್ಪ ಮಾತನಾಡುತ್ತಾ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದೂರಾಡಳಿತದಿಂದ ಬೇಸತ್ತಿದ್ದ ರಾಜ್ಯದ ಜನರು ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಭರವಸೆ ಈಡೇರಿಸಿ ಜನರ ನೈಜ್ಯ ಸಮಸ್ಯೆಗಳನ್ನು ಪರಿಹರಿಸಿ ಎಂಬ ಘೋಷಣೆಯಡಿ ರಾಜ್ಯ ಸರ್ಕಾರವನ್ನು ಸಿಪಿಐ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಚಳುವಳಿ ಹಮ್ಮಿಕೊಳ್ಳಲಾಯಿತು. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ಆರು ಗ್ಯಾರೆಂಟಿಗಳನ್ನು ಕೊಟ್ಟಿದ್ದು ಅವುಗಳಲ್ಲಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ಬೆಲೆ ಏರಿಕೆಯಿಂದ ಆತರಿಸಿದ್ದ ಜನತೆಗೆ ತಾತ್ಕಾಲಿಕವಾಗಿ ನೆರವು ನೀಡಿದೆ. ಸರ್ಕಾರದ ನಡೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ಸ್ವಾಗತಿಸುತ್ತದೆ. ಆದರೆ ರಾಜ್ಯದ ಅಸಂಘಟಿತ ಕಾರ್ಮಿಕರಿಗಾಗಿ ಘೋಷಿಸಿದ್ದ ಆರನೇ ಗ್ಯಾರಂಟಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಾ, ಕಾಂಗ್ರೆಸ್ ಪಕ್ಷ ತನ್ನ ಜನ ಸಮುದಾಯ ಎದುರಿಸುತ್ತಿರುವ ಜ್ವಲಾಂತ ಸಮಸ್ಯೆಗಳನ್ನು ಆಗ್ರಹಿಸಿ ಇಂದು ನಾವು ರಾಜ್ಯಾದ್ಯಂತ ಜನಗೃಹ ಚಳುವಳಿ ಕಾರ್ಯಕ್ರಮವನ್ನು ಭಾರತದ ಕಮ್ಯುನಿಸ್ಟ್ ಪಕ್ಷ ಹಮ್ಮಿಕೊಂಡಿದೆ, ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಕೆ ನಾಗಭೂಷಣ ರಾವ್, ಅಡಿವಪ್ಪ, ಎಚ್ ಎ ಆದಿಮೂರ್ತಿ, ಕಟ್ಟೆ ಬಸಪ್ಪ, ಸಿಪಿಐ ಪಕ್ಷದ ಸದಸ್ಯರು, ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು, ಇತರರು ಭಾಗವಹಿಸಿದ್ದರು.