ಕೊರೊನಾ ಭೀತಿ: ಸ್ವಗ್ರಾಮದತ್ತ ಕಾರ್ಮಿಕರು..
ಮಾಂಜರಿ04: 2020-21 ನೇ ಸಾಲಿನ ಕಬ್ಬು ನುರಿಯುವ ಹಂಗಾಮು ಮುಕ್ತಾಯ ಹಂತ ತಲುಪಿದ್ದು, ನೆರೆಯ ಮಾಹಾರಾಷ್ಟ್ರದಿಂದ ಕಳೆದ ಅಕ್ಟೋಬರ ತಿಂಗಳಲ್ಲಿ ಆಗಮಿಸಿ ಕಬ್ಬು ಕಟಾವು ಕಾರ್ಮಿಕರು ಕೊರೊನಾ ಭಯದಿಂದ ಕಳೆದ ಎರಡು ದಿನಗಳಿಂದ ಸ್ವಗ್ರಾಮದತ್ತ ತೆರಳುತ್ತಿದ್ದಾರೆ. ಇದೇ ದಿ. 21ರಂದು ಚಿದಾನಂದ ಕೋರೆ ಸಕ್ಕರೆ ಕಾರಖಾನೆ ತನ್ನ ಹಂಗಾಮು ಮುಕ್ತಾಯಗೊಳಿಸಿದ್ದು, ಬುರವ 8-10 ದಿನಗಳಲ್ಲಿ ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆಗಳು ತನ್ನಕಬ್ಬು ನುರಿಯುವ ಹಂಗಾಮು ಮುಕ್ತಾಯಗೊಳಿಸಲಿದ್ದು, ಗುತ್ತಿಗೆ ಅವಧಿ ಮುಗಿದ ಕಾರ್ಮಿಕರು ಮನಗಳತ್ತ ಮುಖ ಮಾಡುತ್ತಿದ್ದಾರೆ. ಜೀವನದ ಹೊಟ್ಟೆ ಹೋರೆಯಲು ಕಬ್ಬು ಕಟಾವುಗಾರರು ಜಿಲ್ಲೆಯಿಂದ ಜಿಲ್ಲೆಗೆ ಮತ್ತು ರಾಜ್ಯದ ಗಡಿಭಾಗದಿಂದ ತಮ್ಮ ಸರಕು ಸರಾಜಾಜಾಮನೊಂದಿಗೆ ಮಹಾರಾಷ್ಟ್ರದ ಬೀಡ, ಉಸ್ಮಾನಾಬಾದ, ಜತ್, ಪಂಡರಪೂರ, ವಿಜಾಪೂರ ಜಿಲ್ಲೆಗಳಿಂದ ಕಬ್ಬುಕಟಾವು ಕೆಲಸ ಆವಲಂಬಿಸಿ ಸಂಸಾರ ಸಮೇತ ಆಗಮಿಸಿದ್ದರು,
ಸತತ ನಾಲ್ಕು ತಿಂಗಳಕಾಲ ಕಬ್ಬು ಕಟಾವು ಮಾಡಿ ಮನೆಗೆ ತೆರಳುತ್ತಿದ್ದಾರೆ. ಒಂದು ಗುಂಪಿನಲ್ಲಿ 15 ರಿಂದ 20 ಜನ ಕೂಲಿಗಳಿರುವ ಅವರ ಬದುಕೇ ವಿಲಕ್ಷಣ. ಕಬ್ಬುಕಟಾವಿಗೆ ಹೋಗುವ ಪ್ರದೇಶದಲ್ಲಿಯೇ ಮೂರುಕಲ್ಲಿನ ಒಲೆ, ವಾಸ್ತವಕ್ಕೆ ರವದಿಯ ಮನೆ, ಜೊತೆಗೆ ಅಲ್ಯೂಮಿನಿಯಂ ಬಕೆಟ್, ಧಾನ್ಯ, ಮಸಾಲೆ, ಅಡುಗೆ ಪದಾರ್ಥ ಸೇರಿದಂತೆ ಕೆಲ ಪಾತ್ರೆಗಳೊಂದಿಗೆ ಅವರಚಿಕ್ಕ ಸಂಸಾರ ಸಾಗುತ್ತದೆ. ದಿನವಿಡೀ ಕುಟುಂಬದ ಸದಸ್ಯರೆಲ್ಲಾ ಕಬ್ಬುಕಟಾವು ಮಾಡುತ್ತಾರೆ. ರಾತ್ರಿ ಬರುವ ಲಾರಿಗಳಿಗೆ ಕಬ್ಬು ತುಂಬಿ ಕಾರ್ಖಾನೆಗೆ ಸಾಗಿಸಲು ಚಳಿ ಲೆಕ್ಕಿಸದೇ ದುಡಿಯುತ್ತಿದ್ದರು. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಾವು ಮಧ್ಯಮಾರ್ಗದಲ್ಲಿ ಸಿಲುಕಬಾರದು ಎಂದ ಉದ್ದೇಶದಿಂದ ಹೆಂಡತಿ ಮಕ್ಕಳ ಜೊತೆ ತಂದ ದಿನನಿತ್ಯ ಬಳಕೆಯ ವಸ್ತುಗಳನ್ನು, ಜಾನುವಾರುಗಳನ್ನು ಟ್ರಕ್ ಮತ್ತು ಟ್ರ್ಯಾಕ್ಟರಗಳ ಮೂಲಕ ತೆರಳವುದ ದೃಶ್ಯ ಗಡಿಯಲ್ಲಿ ಸವೇ ಸಾಮಾನ್ಯವಾಗಿದ್ದು, ಇನ್ನು ಬಾಕಿ ಉಳಿದ ಕಾರ್ಮಿಕರು ಭಯದಲ್ಲಯೇ ದಿನದುಡುವ ಪ್ರಸಂಗ ಬಂದೂದಗಿದೆ. ಕಳೆದ ಸಾಲಿನಲ್ಲಿ ಕಬ್ಬು ಕಟಾವು ಮಾಡಿ ಮನೆಗೆ ತೆರಳಿ ಹೊಗುವಾಗ ಕೇಂದ್ರ ಸರಕಾರ ಲಾಕ್ಡೌನ್ ಜಾರಿಗೆ ಮಾಡಿದ್ದರಿಂದ ಸ್ವಗ್ರಾಮಕ್ಕೆ ತೆರಳಲು ಪರದಾಡಬೇಕಾಯಿತು, ಈ ವರ್ಷನಲ್ಲಿಯೂ ನಮ್ಮ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವುರಿಂದ ಆದಷ್ಟು ಬೇಗ ಮನೆಗಳಿಗೆ ಸೇರಲು ಪ್ರಯತ್ನಿಸಲಾಗುತ್ತಿದೆ ಎಂದು ಭೀಡ ಜಿಲ್ಲೆಯ ಕಟಾವು ಕಾರ್ಮಿಕ ಅಮೋಲ ಮುರಾರಿ ಮತ್ತು ಸುನೀತಾ ಮುರಾರಿ ತಳಿಸಿದ್ದಾರೆ.