ಚಿಕ್ಕೋಡಿ

ಸಹಕಾರಿ ಸಂಘಗಳು ಬೆಳೆಯಲು ಸರ್ವರು ಸಹಕರಿಸಿ: ಸಂಸದ ಅಣ್ಣಾಸಾಹೇಬ

ಸಹಕಾರಿ ಸಂಘಗಳು ಬೆಳೆಯಲು ಸರ್ವರು ಸಹಕರಿಸಿ: ಸಂಸದ ಅಣ್ಣಾಸಾಹೇಬ
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ನಿರ್ದೇಶಕರಿಗೆ ಹಮ್ಮಿಕೊಂಡ ಅಭಿನಂ

ಚಿಕ್ಕೋಡಿ 28: ಬಿಡಿಸಿಸಿ ಬ್ಯಾಂಕಿನ  ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ  ತಾಲೂಕಿನ ಸಹಕಾರಿಗಳು ಒಗ್ಗಟ್ಟಿನಿಂದ ನನಗೆ ಪರೋಕ್ಷ ಮತ್ತು ಅಪರೋಕ್ಷವಾಗಿ  ಸಹಾಯ, ಸಹಕಾರ  ತಮ್ಮ ಅಮೂಲ್ಯವಾಗಿರುವ ಬೆಂಬಲ ವ್ಯಕ್ತಪಡಿಸಿ  ಸತತ 2 ನೇ ಬಾರಿಗೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ರವಿವಾರ ಜೊಲ್ಲೆ ಉದ್ಯೋಗ ಸಮೂಹದ ನನದಿ ಕ್ಯಾಂಪಸ್  ಸಭಾಗೃಹದಲ್ಲಿ, ಚಿಕ್ಕೋಡಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ನಿರ್ದೇಶಕರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. 

ಮುಂಬರುವ ದಿನಗಳಲ್ಲಿ ಕ್ಷೇತ್ರದ ಹಾಗೂ ಜಿಲ್ಲೆಯ ರೈತ ಭಾಂದವರ ಹಾಗೂ ಸಹಕಾರ ಕ್ಷೇತ್ರದ  ಅಭಿವೃದ್ಧಿ ಹಿತದೃಷ್ಟಿಯಿಂದ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ  ಭರವಸೆಯೊಂದಿಗೆ ತಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪಕ್ಷಾತೀತವಾಗಿ ಸಹಕಾರಿ ಸಂಘಗಳು ಬೆಳೆಯಲು ಸರ್ವರು ಸಹಕರಿಸಬೇಕು. ಸಹಕಾರಿ ಸಂಘಗಳು ಸದಾ ಚಟುವಟಿಕೆಯಿಂದ ಇರಲಿ. ಎಲ್ಲರೂ ಸಮಯ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸುತ್ತಾ, ಸಹಕಾರಿ ಸಂಘಗಳು ಬೆಳೆಯಲು ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಕೆ.ಪಿ.ಟಿಸಿ.ಎಲ್ ನಿರ್ದೇಶಕ  ಮಹೇಶ ಭಾತೆ, ಬಿಡಿಸಿಸಿ ಬ್ಯಾಂಕ್‍ನ ಉಪಪ್ರಧಾನ ವ್ಯವಸ್ಥಾಪಕ  ಎನ್.ಜಿ. ಕಲಾವಂತ, ತಾಲೂಕು ನಿಯಂತ್ರಣಾಧಿಕಾರಿ ವ್ಹಿ.ಎಸ್. ಮಾಳುಂಗೆ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ನಿರ್ದೇಶಕ  ಅಪ್ಪಾಸಾಹೇಬ ಜೊಲ್ಲೆ ಮುಂತಾದವರು ಇದ್ದರು.

ಸುದ್ದಿ ಓದಿ