ಕೆಎಸ್ಆರ್ಟಿಸಿಗೆ ಸಿಎಂಒ ಬ್ರಾಡಿಂಗ್ ಎಕ್ಸಲೆನ್ಸ್ ಪ್ರಶಸ್ತಿ
ಬೆಂಗಳೂರು, ಆ 16 ಕೆಎಸ್ಆರ್ ಟಿಸಿಯು ಇತ್ತೀಚೆಗೆ ನೂತನವಾಗಿ ಕಾರ್ಯಾಚರಣೆಗೊಳಿಸಿರುವ ಬಸ್ಸಿನ ಬ್ರಾಂಡ್ "ಅಂಬಾರಿ ಡ್ರೀಮ್ ಕ್ಲಾಸ್ - ಕನಸಿನೊಂದಿಗೆ ಪ್ರಯಾಣಿಸಿ " ಉಪಕ್ರಮವು ಅಂತಾರಾಷ್ಟ್ರೀಯ ಸಿ.ಎಮ್.ಒ ಬ್ರಾಡಿಂಗ್ ಎಕ್ಸ್ ಲೆನ್ಸ್ ಸಪ್ಲೈ ಚೈನ್ ಆಂಡ್ ಲಾಜಿಸ್ಟಿಕ್ಸ್ ವರ್ಗದ ಪ್ರಶಸ್ತಿಗೆ ಭಾಜನವಾಗಿದೆ.
ಸಿಎಂಒ ಏಷ್ಯಾವು ಜಾಗತಿಕ ಮಟ್ಟದ ಬ್ರಾಡಿಂಗ್ ಕ್ಷೇತ್ರದ ಜಾಲವಾಗಿದ್ದು, ಬ್ರಾಡಿಂಗ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಜ್ಞಾನ ವಿನಿಮಯ ನಾಯಕತ್ವದ ವೇದಿಕೆಯಾಗಿದೆ. ಬ್ರಾಡಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಗಳ ಮುಖ್ಯಸ್ಥರು , ಬ್ರಾಂಡ್ ಪಾಲಕರು ಮತ್ತು ಸೃಜನಶೀಲ ನಾಯಕತ್ವವನ್ನು ಪ್ರೋತ್ಸಾಹಿಸಿ, ಗುರುತಿಸುವ ವ್ಯವಸ್ಥೆ ಇದಾಗಿದೆ.
ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಿಗೆ ಸಿಎಂಒ ಏಷ್ಯಾ ಸಿಂಗಾಪುರದಲ್ಲಿ ಪ್ರಶಸ್ತಿ ಪ್ರದಾನ ಮಾಡಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 