ಥಿಯೇಟರ್ನಲ್ಲಿ ಕಾಶ್ಮೀರ್ ಫೈಲ್ಸ್ ಸಿನೆಮಾ ವೀಕ್ಷಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು: ಮಾರ್ಚ್ 14: ರಾಜಕೀಯ ಜಂಜಾಟದ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿ ಕಾಶ್ಮೀರ್ ಫೈಲ್ಸ್ ಸಿನೆಮಾವನ್ನು ವೀಕ್ಷಣೆ ಮಾಡಿದರು. ಕುಟುಂಬ ಸಮೇತರಾಗಿ ಆಗಮಿಸಿದ ಅವರು, ಬೆಂಗಳೂರಿನ ಓರಾಯನ್ ಮಾಲ್ ನ ಪಿವಿಆರ್ ಥಿಯೇಟರ್ ನಲ್ಲಿ ಚಿತ್ರವನ್ನು ಭಾನುವಾರ ರಾತ್ರಿ ವೀಕ್ಷಿಸಿದರು. ಈ ವೇಳೆ ಹಿರಿಯ ನಟರಾದ ಅನಂತ್ ನಾಗ್, ಹಾಗೂ ಸಚಿವ ಮುನಿರತ್ನ ಉಪಸ್ಥಿತರಿದ್ದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಶ್ಮೀರ್ ಪಂಡಿತರ ಜೀವನದ ವಾಸ್ತವ ಕಥೆ ಆಧಾರಿತ ಕಾಶ್ಮೀರಿ ಫೈಲ್ಸ್ ಚಿತ್ರದ ಪ್ರದರ್ಶನಕ್ಕೆ ರಾಜ್ಯದಲ್ಲಿ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ನೀಡಿದೆ. ಕಾಶ್ಮೀರಿ ಪಂಡಿತರ ವಾಸ್ತವ ರಕ್ತ ಚರಿತೆಯ ಚಿತ್ರಣವನ್ನು ಸಿನೆಮಾ ನೀಡಿದೆ. ಇಂತಹ ಚಿತ್ರಕ್ಕೆ ಬೆಂಬಲ ನೀಡಲು ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.