ಪುಷ್ಪ ನೀಡಿ ಮಕ್ಕಳನ್ನು ಸ್ವಾಗತಿಸಿದ ಸಿಡಿಪಿಒ ಚನ್ನಪ್ಪ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ನ.08 : ಪಟ್ಟಣದ 17ನೇ ವಾರ್ಡ್ನ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಅಂಗನವಾಡಿ ಕೇಂದ್ರಕ್ಕೆ ಹಾಜರಾದ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಪ್ಪ ಅವರು ಪುಷ್ಪ ನೀಡಿ ಬರಮಾಡಿಕೊಂಡರು. ಈ ಸಂಧರ್ಭದಲ್ಲಿ ಅವರು ಮಾತನಾಡಿ ಕಳೆದ ಎರೆಡು ವರ್ಷಗಳಿಂದ ಸಾಂಕ್ರಾಮಿಕ ರೋಗ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದ್ದು, ಹಂತ ಹಂತವಾಗಿ ಕಾಲೇಜು, ಶಾಲೆಗಳನ್ನು ತೆರೆಯುವಂತೆ ರಾಜ್ಯ ಸರಕಾರದ ಆದೇಶದಂತೆ ಇಂದು ಅಂಗನವಾಡಿ ಕೇಂದ್ರಗಳನ್ನು ತರೆಯುವಂತೆ ನೀಡಿದ ಸೂಚನೆಯ ಪ್ರಕಾರ ಮಕ್ಕಳನ್ನು ಬರಮಾಡಿಕೊಳ್ಳಲಾಗಿದೆ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಕರೆತರುವ ಕೆಲಸವಾಗಬೇಕಿದೆ, ಕಳೆದ ಎರೆಡು ವರ್ಷಗಳಿಂದ ಮಕ್ಕಳು ಮನೆಯ ವಾತಾವರಣಕ್ಕೆ ಹೊಂದಿಕೊಂಡಿರುತ್ತಾರೆ, ಪೋಷಕರ ಮನವೊಲಿಸಿ ಮಕ್ಕಳನ್ನು ಮತ್ತೆ ಶಾಲೆಯ ಕಡೆ ಮುಖಮಾಡುವಂತೆ ತಿಳಿಸಿದರು,ಶೈಕ್ಷಣಿಕವಾಗಿ ಪ್ರಾಥಮಿಕ ಹಂತವಾದ ಅಂಗನವಾಡಿ ಕೇಂದ್ರಗಳತ್ತ ಮತ್ತೆ ಮಕ್ಕಳನ್ನು ಕರೆತರುವ ಕೆಲಸವಾಗಬೇಕೆಂದು ಕರೆ ನೀಡಿದರು. ಪುರಸಭೆ ಮಾಜಿ ಸದಸ್ಯ ಅಲ್ಲಾಬಕ್ಷಿ ಮಾತನಾಡಿ ಮಕ್ಕಳ ಕಳೆದ ಎರೆಡು ವರ್ಷಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಕರೋನಾ ತಡೆಗೋಡೆಯಾಗಿದ್ದು, ಪ್ರಸ್ತುತ ದಿನದಿಂದ ಅಂಗನವಾಡಿ ಕೇಂದ್ರಗಳು ಯಥಾ ರೀತಿ ನಡೆ ಮಕ್ಕಳಲ್ಲಿ ಮಂದಹಾಸ ಮೂಡಿಸಿದೆ, ಬೆಳೆಯು ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳ ಪ್ರಾಥಮಿಕ ಶಿಕ್ಷಣ ಹಂತವಾದ ಅಂಗನವಾಡಿ ಕೇಂದ್ರಗಳಲ್ಲಿ ಅರಳುವಂತೆ ಮಾಡುವ ಕೆಲಸವಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ, ಮಣ್ಣಿನ ಮುದ್ದೆಯಂತಿರು ಮಕ್ಕಳನ್ನು ಉತ್ತಮ ರೂಪ ನೀಡಿ ಭವಿಷ್ಯದಲ್ಲಿ ಶೈಕ್ಷಣಿಕವಾಗಿ ಉತ್ತಮತೆ ರೂಪಿಸುವ ಕಾರ್ಯ ಅಂಗನವಾಡಿ ಕೇಂದ್ರದ ಶಿಕ್ಷಕಿಯರದ್ದಾಗಿರುತ್ತದೆ ಎಂದರು. ಸೀನಿಯರ್ ಸುಪ್ರವೈಸರ್ ನಾಗರತ್ನ ಮಾತನಾಡಿ ಮಕ್ಕಳು ಕಳೆದ ಎರೆಡು ವರ್ಷಗಳ ಕಾಲ ಮನೆಯಲ್ಲೆ ಇದ್ದು,ಪೋಷಕರು ಮಕ್ಕಳ ಉಪಟಳಕ್ಕೆ ಮೊಬೈಲ್ ನೀಡುವುದು ಟಿ.ವಿ.ಮುಂದೆ ಕೂರಿಸುವುದು ಇಂತಹ ಸನ್ನೀವೇಶಗಳಿಗೆ ಮಾರು ಹೋಗಿರುತ್ತಾರೆ, ಪೋಷಕರು ಮಕ್ಕಳ ಶಿಕ್ಷಣದತ್ತ ಗಮನ ಹರಿಸಿ ಅಂಗನವಾಡಿ ಕೇಂದ್ರಗಳಿಗೆ ಕಳಿಸುವಂತೆ ತಿಳಿಸಿದರು. ಮಕ್ಕಳ ಹಾಜರಾತಿಯ ಮುಖಾಂತರ ವಿಭಜಿಸಿ ಕೇಂದ್ರವನ್ನು ಮುನ್ನೆಡೆಸುವಂತೆ ತಿಳಿಸಿದರು. ಮೇಲ್ವಿಚಾರಕಿ ಲಲಿತಾ ಮಾತನಾಡಿ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕರೆತರುವುದರಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿಗಳನ್ನು ಅಗತ್ಯವಾಗಿ ಅನುಸರಿಸಬೇಕು, ಪುಟ್ಟ ಮಕ್ಕಳಿಗೆ ಉಸಿರಾಟದ ಸಮಸ್ಯೆ ಅಗಬಾರದೆಂಬ ಮುನ್ನೆಚ್ಚರಿಕೆಯಾಗಿ ಮಾಸ್ಕ್ ಬಳಕೆ ಮಾಡದಂತೆ ತಿಳಿಸಲಾಗಿದೆ,ಮಕ್ಕಳನ್ನು ವಿಭಜಿಸಿ ಕೇಂದ್ರಗಳನ್ನು ನಡೆಸಬೇಕು,ಮಕ್ಕಳನ್ನು ಅಂತರತೆ ಕಾಪಾಡಿಕೊಂಡು ಕಲಿಕೆಯಲ್ಲಿ ಭಾಗಿಯಾಗುವಂತೆ ತಿಳಿಸಿದರು. ಅಂಗನವಾಡಿ ಶಿಕ್ಷಕಿ ಮಾಬುನ್ನಿ, ಸಹಾಯಕಿ ಸರಸ್ವತಿ, ದೀಪ, ಮುಖಂಡರಾದ ತೋಟಪ್ಪ ಸೇರಿದಂತೆ ಪೋಷಕರು ಇದ್ದರು. ನ.17 ಹೆಚ್ಬಿಹೆಚ್ 01 : ಹಗರಿಬೊಮ್ಮನಹಳ್ಳಿ ಪಟ್ಟಣದ 17ನೇ ವಾರ್ಡ್ನ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಪ್ಪ ಅವರು ಮಕ್ಕಳಿಗೆ ಪುಷ್ಪ ನೀಡಿ ಅಂಗನವಾಡಿ ಕೇಂದ್ರಕ್ಕೆ ಸ್ವಾಗತಿಸಿದರು.ಹೀರಿಯ ಮೇಲ್ವಿಚಾರಕಿ ನಾಗರತ್ನ ,ಲಲಿತಾ ಇದ್ದರು.