ಢಪಾಳಾಪುರ ವಿದ್ಯಾವಿಹಾರ ಶಾಲೆಗೆ ಸಿಬಿಎಸ್ಸಿ ಮಾನ್ಯತೆ
ಮಹಾಲಿಂಗಪುರ 08 : ಮಹಾಲಿಂಗಪುರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಢಪಾಳಾಪುರ ವಿದ್ಯಾವಿಹಾರ ಶಾಲೆ ಕಳೆದ ಒಂದು ದಶಕದ ಹಿಂದೆ ಜಂಬೊ ಕಿಡ್ಸನಿಂದ ಪ್ರಾರಂಭವಾಗಿ ಇಂದು ಎಸ್ ಎಸ್ ಎಲ್ ಸಿ ವರೆಗೆ ಇದ್ದು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಂದಿದ್ದು ಹೆಮ್ಮೆಯ ಸಂಗತಿ.
ಸತತ ಪ್ರಯತ್ನದ ಫಲವಾಗಿ ಶಾಲೆಗೆ ಸನ್ 2023-24 ನೇ ಸಾಲಿಗೆ ಸಿ ಬಿ ಎಸ್ ಇ ಮಾನ್ಯತೆ ದೊರೆತಿದ್ದು ಅದರ ನೋಂದಣಿ ಸಂಖ್ಯೆ 831326 ಇರುತ್ತದೆ,
ಪಿ ಯು ಸಿ ಗೆ ಅನುಮತಿ : ಪದವೀ ಪೂರ್ವ ವಾಣಿಜ್ಯ ವಿಭಾಗ ಪ್ರಾರಂಭಿಸಲು ಸನ್ 2023-24 ನೇ ಸಾಲಿಗೆ ಅನುಮತಿ ದೋರಕಿದ್ದು ಅದರ ನೊಂದಣಿ ಸಂಖ್ಯೆ ಇಃಓ457 ಹೊಂದಿದೆ. ಇದನ್ನು ತಿಳಿಸಲು ಅತೀವ ಸಂತಸ ಎನಿಸುತ್ತಿದೆ.
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ( ಸೆಂಟ್ರಲ್ ಬೋರ್ಡ್ ಅಪ್ ಸೆಕೆಂಡರಿ ಎಜುಕೇಷನ್ )ಸಿ ಬಿ ಎಸ್ ಇ ಇದು ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳಿಗೆ ಭಾರತದಲ್ಲಿ ರಾಷ್ಟ್ರೀಯ ಮಟ್ಟದ ಶಿಕ್ಷಣ ಮಂಡಳಿಯಾಗಿದ್ದು, ಇದು ಕೇಂದ್ರ ಸರ್ಕಾರದ ನಿಯಂತ್ರಿಸುತ್ತದೆ, ಮತ್ತು ನಿರ್ವಹಿಸುತ್ತದೆ. ಸಿ ಬಿ ಎಸ್ ಇ ಅಂಗ ಸಂಸ್ಥೆ ಹೊಂದಿರುವ ಎಲ್ಲಾ ಶಾಲೆಗಳನ್ನು ಏನ್ ಸಿ ಇ ಆರ್ ಟಿ ಪಠ್ಯ ಕ್ರಮವನ್ನು ಮಾತ್ರ ಅನುಸರಿಸುತ್ತದೆ. ಭಾರತದಲ್ಲಿ ಸುಮಾರು 20299 ಶಾಲೆಗಳು ಮತ್ತು ವಿದೇಶಗಳಲ್ಲಿ 220 ಶಾಲೆಗಳು ಮಾನ್ಯತೆ ಹೊಂದಿವೆ.
ಈ ಎರಡು ಅನುಮತಿ ದೊರಕಲು ಶ್ರಮಿಸಿದ ನಮ್ಮ ಶಾಲೆಯ ವ್ಯವಸ್ಥಾಪಕರಾದ ಶ್ರೀ ವಿವೇಕ ಧಪಾಳಾಪುರ ಕಾರ್ಯದರ್ಶಿಗಳಾದ ಶ್ರೀಮತಿ ಕವಿತಾ ಢಪಾಳಾಪುರ, ಪ್ರಿನ್ಸಿಪಾಲ್ ಲೂಯಿಸ್ ಬಾರಟೊ ಕಾರ್ಯನಿರ್ವಾಹಕರಾದ ಭೀಮಪ್ಪ ಹಣಗಂಡಿ ಹಾಗೂ ಎಲ್ಲ ಗುರುಗಳು ಗುರುಮಾತೆಯರು, ಭೋದಕೇತರ ಸಿಬ್ಬಂದಿ ವರ್ಗ ಮತ್ತು ಪರೋಕ್ಷವಾಗಿ ಅಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತಪೂರ್ಕ ಅಭಿನಂದನೆ ಸಲ್ಲಿಸಿದರು.