ರಾಷ್ಟ್ರೀಯ

ಸಿಎಎ; ನಿಲುವು ಬದಲಿಸುತ್ತಿರುವ ಶಿವಸೇನೆ...!

ಸಿಎಎ;  ನಿಲುವು  ಬದಲಿಸುತ್ತಿರುವ  ಶಿವಸೇನೆ...!

ಮುಂಬೈ, ಡಿ 17 :       ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ  ಹಿನ್ನಲೆಯಲ್ಲಿ  ಶಿವಸೇನೆ  ನಾಯಕ ಸಂಜಯ್  ರಾವತ್   ಕೇಂದ್ರ  ಸರ್ಕಾರದ  ವಿರುದ್ದ   ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಕಾಯ್ದೆಯಲ್ಲಿನ ಲೋಪ ದೋಷಗಳನ್ನು  ಮುಚ್ಚಿಕೊಳ್ಳಲು,   ದೇಶಾದ್ಯಂತ   ಭುಗಿಲೆದ್ದಿರುವ ಪ್ರತಿಭಟನೆಗಳಿಗೆ ಪ್ರತಿಪಕ್ಷಗಳೇ  ಕಾರಣ ಎಂದು ಬಿಜೆಪಿ  ದೂಷಿಸುತ್ತಿದೆ ಎಂದು  ಅವರು ಆರೋಪಿಸಿದ್ದಾರೆ.ಅವರು ಸೋಮವಾರ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ  ಅವರು,  ಕಾಯ್ದೆಯ  ಕುರಿತು   ಕುರಿತು ವಿದ್ಯಾರ್ಥಿಗಳ   ವ್ಯಕ್ತಪಡಿಸಲಿರುವ  ಅಭಿಪ್ರಾಯಗಳನ್ನು  ಆಲಿಸಬೇಕು  ಎಂದು  ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.  ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿನ  ಲೋಪ ದೋಷಗಳ  ಕುರಿತು ಚರ್ಚಿಸಲು   ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಬೇಕು ಎಂದು ರಾವತ್  ಆಗ್ರಹಿಸಿದ್ದಾರೆ. ಈ ನಡುವೆ,  ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಪ್ರತಿಪಕ್ಷಗಳ ನಿಯೋಗ   ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಮಾಡಲು ನಿರ್ಧರಿಸಿದೆ.  ಪ್ರತಿಪಕ್ಷಗಳ ನಿಯೋಗದಲ್ಲಿ   ಶಿವಸೇನೆಯ ಪ್ರತಿನಿಧಿಯಾಗಿ ಯಾರು  ತೆರಳಲಿದ್ದಾರೆ  ಎಂಬ ಪ್ರಶ್ನೆಗೆ  ಉತ್ತರಿಸಿದ  ಸಂಜಯ್  ರಾವತ್,  ಪ್ರತಿಪಕ್ಷಗಳ ನಿಯೋಗ ರಾಷ್ಟ್ರಪತಿ ಅವರನ್ನು ಭೇಟಿಯಾಗಲಿದೆ ಎಂಬ  ವಿಷಯ   ತಮಗೆ  ತಿಳಿದಿಲ್ಲ. ಅಷ್ಟೇ ಅಲ್ಲ,  ಪ್ರತಿಪಕ್ಷಗಳ  ನಿಯೋಗದಲ್ಲಿ ಶಿವಸೇನೆ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಮಹಾರಾಷ್ಟ್ರದಲ್ಲಿ  ಪೌರತ್ವ ತಿದ್ದುಪಡಿ  ಕಾಯ್ದೆ ಜಾರಿಗೊಳಿಸಬೇಕೋ  ಅಥವಾ ಬೇಡವೋ ಎಂಬುದನ್ನು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ನಿರ್ಧರಿಸಲಿದ್ದಾರೆ  ಎಂದು ರಾವತ್  ಉತ್ತರಿಸಿದರು.      ಪೌರತ್ವ  ತಿದ್ದುಪಡಿ ಕಾಯ್ದೆಯಲ್ಲಿನ  ಲೋಪದೋಷಗಳ ಬಗ್ಗೆ ಚರ್ಚಿಸಲು  ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು  ನಿನ್ನೆ ಆಗ್ರಹಿಸಿದ್ದ  ರಾವತ್,  ಇಂದು   ಪ್ರತಿಪಕ್ಷಗಳ ನಿಯೋಗದಲ್ಲಿ  ಶಿವಸೇನೆ  ಭಾಗಿಯಾಗುವುದಿಲ್ಲ ಎಂದು ಹೇಳಿರುವುದು  ತೀವ್ರ ಚರ್ಚೆಯ ಅಂಶವಾಗಿದೆ.

ಸುದ್ದಿ ಓದಿ