ಬಳ್ಳಾರಿ

ಬಯಲಾಟಗಳು ಹಳ್ಳಿ ಜನರ ಸಾಂಸ್ಕೃತಿಕ ಬದುಕಿನ ಮನರಂಜನೆಯ ಸಾಧನಗಳಾಗಿವೆ : ಪ್ರೊ.ಕೆ. ಆರ್‌. ದುರ್ಗಾದಾಸ

ಬಯಲಾಟಗಳು ಹಳ್ಳಿ ಜನರ ಸಾಂಸ್ಕೃತಿಕ ಬದುಕಿನ ಮನರಂಜನೆಯ  ಸಾಧನಗಳಾಗಿವೆ  : ಪ್ರೊ.ಕೆ. ಆರ್‌. ದುರ್ಗಾದಾಸ

ಬಳ್ಳಾರಿ 29: ಹಳ್ಳಿ ಜನರ ಬದುಕಿನ ದುಡಿಮೆಯ ಸಾಂಸ್ಕೃತಿಕ ಮನೋರಂಜನೆಯ ಸಾಧನೆಗಳಾಗಿ ಬಯಲಾಟಗಳು ಮೂಡಿಬಂದಿವೆ ಎಂದು  ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಕೆ.ಆರ್‌. ದುರ್ಗಾದಾಸ್ ಅವರು ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಡೂರಿನ ಬಸವ ಪಬ್ಲಿಕೇಷನ್ಸ್‌ ಹಾಗೂ ಸಂಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ಇವರ ಸಹಯೋಗದಲ್ಲಿ  ಆಯೋಜಿಸಲಾಗಿದ್ದ ಡಾ. ಮಲ್ಲಯ್ಯ ಸಂಡೂರು ಅವರ ಸಂಶೋಧನಾ ಕೃತಿ ಬಳ್ಳಾರಿ ಜಿಲ್ಲೆ ಬಯಲಾಟಗಳ ಪದ್ಯ ಸಾಹಿತ್ಯ: ತಾತ್ವಿಕತೆ ಕೃತಿಯ ಲೋಕಾರೆ​‍್ಣ, ಕಾರ್ಯಕ್ರಮವನ್ನು ಉದ್ಘಾಟಿಸಿ   ಮಾತನಾಡುತ್ತಾ ಜನಪದ ಕಲೆ ಗಂಡುಕಲೆ ಎಂದೇ ಪ್ರಸಿದ್ಧವಾಗಿದ್ದು ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಬಹುಮುಖ್ಯ ಕಲಾಪ್ರಕಾರವಾಗಿದ್ದು ರಾಮಾಯಣ, ಮಹಾಭಾರತ, ಭಾಗವತ ಸೇರಿದಂತೆ ಹಲವಾರು ಕೃತಿಗಳ ರಸಪ್ರಸಂಗಗಳನ್ನು ಅನಕ್ಷರಸ್ಥರು ಕಂಠಪಾಠ ಮಾಡಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ.  

ಸಂಗೀತ, ಸಾಹಿತ್ಯ, ನೃತ್ಯ ಸೇರಿದಂತೆ ಹಲವು ಕಲೆಗಳ ಸಂಗಮವಾದ ಈ ಕಲೆಯು ಸುಧನ್ವ ಕಾಳಗ, ಗಿರಿಜಾ ಕಲ್ಯಾಣ, ಪ್ರಸಂಗಗಳು ಸೇರಿದಂತೆ ಅತ್ಯುತ್ತಮ ರಂಗಗೀತೆಗಳು ಮತ್ತು ಬಯಲಾಟ  ಪದ್ಯ ಸಾಹಿತ್ಯವನ್ನು ಮಲ್ಲಯ್ಯ ಅವರು ಈ ಕೃತಿಯಲ್ಲಿ ವಿಶ್ಲೇಷಿಸುವುದು ಈ ಬಯಲಾಟ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿದೆ  ಎಂದು ತಿಳಿಸಿದರು. ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿಷ್ಠಿ ರುದ್ರ​‍್ಪನವರು ಮಾತನಾಡಿ ನಶಿಸಿಹೋಗುತ್ತಿರುವ ಪುನರಜ್ಜೀವನಗೊಳಿಸಲು ಬಯಲಾಟಗಳ ಬಗ್ಗೆ ಸಂಶೋಧನೆ ನಡೆಸಿ ಮಲ್ಲಯ್ಯನವರು ಪದ್ಯಗಳನ್ನು ವಿಶ್ಲೇಷಿಸುವ ಮೂಲಕ ಅವುಗಳ ಮಹತ್ವ ಮತ್ತು ಪ್ರಯೋಗ ಸಾಧ್ಯತೆಯನ್ನು ವಿವರಿಸಿರುವುದು ಈ ಕೃತಿಯ ಮಹತ್ವವನ್ನು ಸೂಚಿಸುತ್ತದೆ ಎಂದು ತಿಳಿಸಿದರು. ಸಂಡೂರು ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ನಾಗನಗೌಡ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಬಯಲಾಟ ಕಲೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ಥಕವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ  ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಬಿ. ರವಿ,  ಬಯಲಾಟ ಕಲಾವಿದರಾದ ಪಿ. ತಿಪ್ಪೇಸ್ವಾಮಿ, ನಾಗಪ್ಪ ದೇವರಮನೆ, ಪ್ರಾಂಶುಪಾಲರಾದ ಡಾ. ಬಸವರಾಜ್ ಹೆಚ್, ಬಸಪ್ಪ. ಹೆಚ್‌., ಸಹಾಯಕ ಪ್ರಾಧ್ಯಾಪಕರಾದ  ತಿಪ್ಪೇರುದ್ರ ಸಂಡೂರು, ರೇಖಾ  ಈ.ಜಿ, ಪ್ರಕಾಶಕರಾದ ರಾಬಕ್ಕಿ ಬಸವರಾಜ, ಹೆಚ್‌., ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು 


ಸುದ್ದಿ ಓದಿ