ಶಾಸಕರಿಂದ ಖಾದಿ ವಸ್ತ್ರಗಳ ಖರೀದಿ
ಲೋಕದರ್ಶನ ವರದಿ
ಬಳ್ಳಾರಿ 02: ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತ್ಯೋತ್ಸವ ಹಾಗೂ ಸೇವೆ ಮತ್ತು ಸಮರಾ್ಣ ಅಭಿಯಾನದ ಅಂಗವಾಗಿ ದಿ. 02ರಂದು ನಗರದ ಡಬಲ್ ರಸ್ತೆಯಲ್ಲಿರುವ ಸ್ವದೇಶಿ ಖಾದಿ ಭಂಡಾರ್ನಲ್ಲಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಖಾದಿ ಗ್ರಾಮೋದ್ಯೋಗವನ್ನು ಪ್ರೊತ್ಸಾಹಿಸಲು ಖಾದಿ ವಸ್ತ್ರಗಳನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಾತ್ಮಗಾಂಧಿ ಅವರು ಸದಾ ಖಾದಿಯನ್ನು ಪ್ರೋತ್ಸಾಹಿಸುತ್ತಿದ್ದರು. ಅದೇರೀತಿ ನಾವು ಕೂಡಾ ಖಾದಿ ಗ್ರಾಮೋದ್ಯೋಗವನ್ನು ಪ್ರೋತ್ಸಾಹಿಸಿ ಅವರ ಹಾದಿಯಲ್ಲೇ ನಡೆಯಬೇಕೆಂದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಪಿ.ಪಾಲನ್ನ, ಎ.ಪಿ.ಎಂ.ಸಿ. ಅಧ್ಯಕ್ಷರಾದ ಉಮೇಶ್, ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್ಕುಮಾರ್, ಹನುಮಂತ ಗುಡಗಂಟಿ, ಸುರೇಂದ್ರ, ಮೋತ್ಕರ್ ಶ್ರೀನಿವಾಸ್, ಕೋನಂಕಿ ತಿಲಕ್, ಪಾಲಿಕೆಯ ಮಾಜಿ ಸದಸ್ಯರಾದ ಮಲ್ಲನಗೌಡ, ಬಿಜೆಪಿ ಬಳ್ಳಾರಿ ನಗರ ಕಾರ್ಯದರ್ಶಿ ಕೆ.ಪ್ರಹ್ಲಾದ್, 15ನೇ ವಾರ್ಡ್ನ ಬಿಜೆಪಿ ಮುಖಂಡರು ಹಾಗೂ ನಗರ ಬಿಜೆಪಿ ಮಾಧ್ಯಮ ಸಂಚಾಲಕ ರಾಜೀವ್, ತಮ್ಮಣ್ಣ, ಕಾಂತು, ಗೋಪಾಲ್, ಕೆ.ಎಸ್.ಗುರುರಾಜ್, ರವೀಂದ್ರರೆಡ್ಡಿ, ಬದ್ರಿ, ನೀಲಕಂಠಪ್ಪ ಹಾಗೂ ಇತರರು ಉಪಸ್ಥಿತಿರಿದ್ದು, ಖಾದಿ ವಸ್ತ್ರಗಳನ್ನು ಖರೀದಿಸಿದರು.