ಪೊಲೀಸ ಕ್ವಾಟರ್ಸ್ ಪಕ್ಕದಲ್ಲಿನ ಮನೆ ಕಳ್ಳತನ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳರು ಫರಾರಿ

ಪೊಲೀಸ ಕ್ವಾಟರ್ಸ್ ಪಕ್ಕದಲ್ಲಿನ ಮನೆ ಕಳ್ಳತನ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳರು ಫರಾರಿ

ಸಂಕೇಶ್ವರ : ಪಟ್ಟಣದ ಪೊಲೀಸ ಠಾಣೆಯ ಕೂದಲಳೆ ಅಂತರದಲ್ಲಿಯೇ ಇರುವ ಮನೆಯೊಂದಕ್ಕೆ ಕನ್ನ ಹಾಕಿದ ಖದೀಮರು ಮನೆಯಲ್ಲಿನ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಮೊಬೈಲ್ ದೋಚಿ ಫರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದ ವರದಿಯಾಗಿದೆ.

    ಪಟ್ಟಣದ ಪೊಲೀಸ ಠಾಣೆ ಹಿಂದುಗಡೆ ಇರುವ ಪೊಲೀಸ ವಸತಿಗೃಹಗಳ ಪಕ್ಕದಲ್ಲಿ ಪ್ರಮುಖ ರಸ್ತೆಯಲ್ಲಿನ ಸಂದೀಪ್ ದವಡತೆ ಅವರಿಗೆ ಸೇರಿದ ಮನೆಯಲ್ಲಿ ಯಾರು ಇಲ್ಲದ ಸಮಸ ಸಾಧಿಸಿಕೊಂಡ ಖದೀಮರು ಮನೆಗೆ ನುಗ್ಗಿದ ಒಂದು ಚಿನ್ನದ ಸರ್, ಕಿವಿಯೋಲೆ, ಮೊಬೈಲ್ ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿ ಫರಾರಿಯಾಗಿದ್ದಾರೆಂದು ತಿಳಿದು ಬಂದಿದೆ. 

ಸುದ್ದಿ ಓದಿ