ಸಶಕ್ತ ವಿಕಸಿತ ಭಾರತ ನಿರ್ಮಾಣಕ್ಕೆ ಬಜೇಟ್ ದೇಶದ ಅಭಿವೃದ್ದಿಗೆ ಪೂರಕ : ಈರಣ್ಣ ಕಡಾಡಿ
ಮೂಡಲಗಿ 23 : ರೈತರು, ಯುವಕರಿಗೆ, ಮಹಿಳೆಯರಿಗೆ ಹಾಗೂ ಬಡ ವರ್ಗದ ಜನರ ಜೀವನಮಟ್ಟ ಸುಧಾರಿಸಲು, ಹೊಸ ಭರವಸೆ, ಅವಕಾಶಗಳನ್ನು ಸೃಷ್ಠಿಸುವ, ಸದೃಡ, ಸಶಕ್ತ ವಿಕಸಿತ, ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಈ ಬಜೇಟ್ ದೇಶದ ಅಭಿವೃದ್ದಿಗೆ ಪೂರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಬಜೇಟ್ನ್ನು ಸ್ವಾಗತಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ 3 ನೇ ಅವಧಿಯ ಕೇಂದ್ರ ಸರ್ಕಾರದ ಬಜೆಟ್ ಮಂಗಳವಾರ 2024-25 ನೇ ಸಾಲಿನ ದಾಖಲೆಯ ಸತತ 7 ನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದರು. ಇದು ಮುಂದಿನ 5 ವರ್ಷಗಳ ದಿಕ್ಷೂಚಿ ಬಜೆಟ್ ಆಗಲಿದ್ದು, 2047 ರಲ್ಲಿ ವಿಕಸಿತ ಭಾರತದ ಕನಸನ್ನು ನನಸಾಗಿಸುವ ಅಡಿಪಾಯ ಹಾಕುತ್ತದೆ ಎಂದ ಸಂಸದ ಈರಣ್ಣ ಕಡಾಡಿ ಅವರು ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ತಂತ್ರಜಾನ, ಹಾಗೂ ಮೂಲ ಸೌಕರ್ಯ, ಗ್ರಾಮೀಣ ಅಭಿವೃದ್ದಿಗೆ ಪೂರಕವಾಗಿದೆ.
ರೈತರ ಮೇಲೆ ಹೆಚ್ಚಿನ ಗಮನ ಹರಿಸಿರುವ ಮೋದಿ ಸರ್ಕಾರ ಕೃಷಿ ಮತ್ತು ಕೃಷಿ ಸಂಬಂಧಿಸಿರುವ ವಲರಕ್ಕೆ ರೂ 1.52 ಲಕ್ಷ ಕೋಟಿ ಅನುದಾನ ನಿಗಧಿಪಡಿಸಲಾಗಿದೆ. ರೈತರಿಗಾಗಿ ಕಿಸಾನ್ ಕ್ರೇಡಿಟ್ ಕಾರ್ಡ, ಸಾವಯವ ಕೃಷಿ,ಹಳ್ಳಿಗಳ ಅಭಿವೃದ್ದಿ ಒತ್ತು, ಡಿಜಿಟಲ್ ಭೂ ಆಧಾರ್ ಯೋಜನೆ ಘೋಷಣೆ ಗ್ರಾಮೀಣ ಭಾಗದಲ್ಲಿ ಭೂ ಸುಧಾರಣೆಗೆ ಹೆಜ್ಜೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಹೊಸ ಮನೆಗಳ ನಿರ್ಮಾಣಕ್ಕೆ ನಿರ್ಧಾರ.ಗ್ರಾಮೀಣ ಅಭಿವೃದ್ದಿಗೆ ರೂ 2.66 ಲಕ್ಷ ಕೋಟಿ ಹೆಚ್ಚಿನ ಒತ್ತು ನೀಡಿದ್ದಾರೆಂದರು.
ಎಸ್ಸಿ, ಎಸ್ಟಿ ಕುಶಲ ಕರ್ಮಿಗಳಿಗೆ ವಿಶೇಷ ಆದ್ಯತೆ, ಮುದ್ರಾ ಯೋಜನೆಗೆ ರೂ. 10 ಲಕ್ಷದಿಂದ 20 ಲಕ್ಷ ವರೆಗೆ ಸಾಲ ಹೆಚ್ಚಳ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ರೂ. 10 ಲಕ್ಷವರೆಗೆ ಸಾಲ ಸೌಲಭ್ಯ, ಪ್ರತಿ ವರ್ಷ 1 ಕೋಟಿ ವಿದ್ಯಾರ್ಥಿಗಳಿಗೆ ನೇರ ಸಾಲ ಸೌಲಭ್ಯ, ಪಿಎಂ ಸೂರ್ಯ ಘರ್ ಯೋಜನೆಯಡಿ ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್, ಒಂದು ಕೋಟಿ ಯುವಕರಿಗೆ 500 ದೊಡ್ಡ ಕಂಪನಿಗಳಲ್ಲಿ ಇಂಟರ್ನ್ಶಿಫ್, ಯುವಕರಿಗೆ 12 ತಿಂಗಳು ತರಬೇತಿ ನೀಡಲಾಗುವುದು ಮತ್ತು ತಿಂಗಳಿಗೆ ರೂ 5 ಸಾವಿರ ವೇತನ ನೀಡಲಾಗುವುದು ಎಂದರಲ್ಲದೇ ಟಿಡಿಎಸ್ ಕಡಿಮೆಗೊಳಿಸಿರುವುದು ಸೇರಿದಂತೆ ಬಜೇಟ್ ಅತ್ಯಂತ ಆಶಾದಾಯಕವಾಗಿದೆ ಎಂದು ಬಜೇಟನಲ್ಲಿರುವ ಅಂಶಗಳನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕೊಂಡಾಡಿದ್ದಾರೆ.