ಕಂಪ್ಲಿ

ಬ್ರೇಟ್ ವೇ ಶಾಲೆ ಎಸ್ಸೆಸ್ಸೆಲ್ಸಿ ಸತತ 100 ರಷ್ಟು ಸಾಧನೆ ಮಾಡಿದೆ

ಬ್ರೇಟ್ ವೇ ಶಾಲೆ ಎಸ್ಸೆಸ್ಸೆಲ್ಸಿ ಸತತ 100 ರಷ್ಟು ಸಾಧನೆ ಮಾಡಿದೆ

ಲೋಕದರ್ಶನ ವರದಿ

  ಕಂಪ್ಲಿ 23:  2025-2026ನೇ ಸಾಲೀನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕಂಪ್ಲಿ ಪಟ್ಟಣದ ನಿವೇದಿತಾ ಎಜ್ಯುಕೇಷನ್ ಸೊಸೈಟಿಯ ಬ್ರೇಟ್‌ವೇ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸತತ ಒಂಬತ್ತನೇ ಬಾರಿಗೆ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದೆ ಎಂದು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶಿವರಾಜ ಉಗಾದಿ ತಿಳಿಸಿದರು. ಶಾಲೆಯಿಂದ ಹತ್ತನೇ ತರಗತಿಗೆ ಹಾಜರಾದ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 5 ವಿದ್ಯಾರ್ಥಿಗಳು ಡಿಸ್ಟಿಂಗಷನ್, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸಾಧನೆಯ ಜೊತೆಗೆ ಶಾಲೆಯ ಕೀರ್ತಿಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿ ಗೌಳೇರು ವಿಶ್ವನಾಥ ಇವರು 625ಕ್ಕೆ 586(ಶೇ.93.76ಅ) ಅಂಕಗಳೊಂದಿಗೆ ಪ್ರಥಮ ಸ್ಥಾನದ ಸಾಧನೆ ಮಾಡಿದ್ದಾರೆ.

ನಂತರದಲ್ಲಿ ಶಾಲೆಯ ವಿದ್ಯಾರ್ಥಿನಿ ಯು.ನಂದಿತ್ 585(ಶೇ.93.60ಅ), ಬಿ.ಮುಸ್ಖಾನ್ 559(ಶೇ.89.44ಅ), ಕೆ.ಗೌತಮ್ 542(ಶೇ.86.72ಅ), ಎಂ.ಮುಸ್ಖಾನ್ 541(ಶೇ.86.56ಅ), ಅಮೃತ ಲಹರಿ ಆರ್‌.ಎಂ 529(ಶೇ.84.64ಅ), ಅಂಕಗಳ ಸಾಧನೆ ಮಾಡಿದ್ದಾರೆ. ಮತ್ತು ಕನ್ನಡ ವಿಷಯದಲ್ಲಿ 100ಕ್ಕೆ 100ರಷ್ಟು ಅಂಕಗಳನ್ನು ಎಂ.ಮುಸ್ಖಾನ್, ಎನ್‌.ನಂದಿತ್ ಪಡೆಯುವ ಮೂಲಕ ಶಿಕ್ಷಣ ಪ್ರೇಮಿಗಳ ಮನಗೆದ್ದಿದ್ದಾರೆ.  ಸತತ 9ನೇ ಬಾರಿಗೆ ಶಾಲೆಗೆ ನೂರಕ್ಕೆ ನೂರು ಫಲಿತಾಂಶವನ್ನು ತಂದ ವಿದ್ಯಾರ್ಥಿಗಳನ್ನು ಹಾಗೂ ಉತ್ತಮವಾಗಿ ಭೋದನೆ ಮಾಡಿದ ಶಿಕ್ಷಕರನ್ನು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ವಿನೂತಾ ಶಿವರಾಜ, ಉಪ ಪ್ರಾಚಾರ್ಯ ಚಂದ್ರಶೇಖರ ಹಾಗೂ ಆಡಳಿತ ಮಂಡಳಿಯವರು ಮತ್ತು ಶಿಕ್ಷಕ ವೃಂದದವರು ಸೇರಿದಂತೆ ಇತರರು ಪ್ರಶಂಸಿಸಿದ್ದಾರೆ.  


ಸುದ್ದಿ ಓದಿ