ಶಿಗ್ಗಾವ್

ತಹಶೀಲ್ದಾರ ಕಚೇರಿಯಲ್ಲಿ ಲಂಚಮುಕ್ತ ಕರ್ನಾಟಕ ಅಭಿಯಾನ

ತಹಶೀಲ್ದಾರ ಕಚೇರಿಯಲ್ಲಿ ಲಂಚಮುಕ್ತ ಕರ್ನಾಟಕ ಅಭಿಯಾನ

ಶಿಗ್ಗಾವಿ 25 : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ  ಅಭಿಯಾನ ಚಾಲನೆಯಾಗಿ  ತಹಶೀಲ್ದಾರ್ ಕಚೇರಿಯ ಒಳಗಡೆ ಹೋದ ತಕ್ಷಣ  ಸಾರ್ವಜನಿಕರು ಮತ್ತು ರೈತರು ಅನೇಕ ದೂರುಗಳನ್ನು ನಮ್ಮ ನಿಯೋಗದ ಗಮನಕ್ಕೆ ತಂದರು. 

ಮೊದಲನೆಯದಾಗಿ ಬೈಲಪ್ಪ ಬಸಪ್ಪ ಕುಂಬಾರ ಎಂಬ ರೈತರು  ಎರಡು ವರ್ಷಗಳ ಹಿಂದೆ ಆದ  ಬೆಂಕಿ ಅನಾಹುತಕ್ಕೆ ಪರಿಹಾರ ಕೋರಿ  ಅರ್ಜಿ ಸಲ್ಲಿಸಿದ್ದರು, ಆದ್ರೆ ಎರಡು ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ ಹಾಗೂ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದಾಗ ಕೆ. ಆರ್‌. ಎಸ್‌. ಪಕ್ಷದ ನಿಯೋಗ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿಸಿ ಏಕೆ ಇಷ್ಟು  ವಿಳಂಬ ಮಾಡುತ್ತಿದ್ದೀರಾ ರೈತರಿಗೆ ಎರಡು ವರ್ಷಗಳಾದರೂ ಯಾಕೆ ನೀವು ಪರಿಹಾರ ನೀಡಲಿಲ್ಲ ಎಂದು ಕೇಳಿದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಅರ್ಜಿಯನ್ನು ಪರೀಶೀಲನೆ ಮಾಡಿ ಮುಂದಿನ ವಾರದೊಳಗೆ ಪರಿಹಾರ ನೀಡುತ್ತೇವೆ ಎಂದು  ಭರವಸೆ ನೀಡಿದರು. ಕಚೇರಿಯ ಸಿಬ್ಬಂದಿಯ ಗುರುತಿನ ಚೀಟಿ ಮತ್ತು ಅವರು ಕಾರ್ಯ ನಿರ್ವಹಿಸುವ ಕೊಠಡಿಗಳ ಮುಂದೆ ಸಾರ್ವಜನಿಕ ಮಾಹಿತಿ (ದರಪಟ್ಟಿ, ಸೂಚನಾ ಫಲಕ ,ಮಾಹಿತಿ ಹಕ್ಕು ಅಧಿನಿಯಮ ಮತ್ತು ಲೋಕಾಯುಕ್ತ) ಬೋರ್ಡ್‌ ಗಳನ್ನು ಪರೀಶೀಲನೆ ಮಾಡಲಾಯಿತು. 

ಗುರುತಿನ ಚೀಟಿ ಶೇಕಡ 95ಅ ರಷ್ಟು  ಅಧಿಕಾರಿಗಳು ಧರಿಸಿದ್ದರು ಹಾಗಾಗಿ ಅವರನ್ನು   ಕೆ ಆರ್ ಎಸ್ ಪಕ್ಷವು ಪ್ರಶಂಸಿಸಿತು. ಸಾರ್ವಜನಿಕ ಮಾಹಿತಿಯನ್ನು ಕೆಲವು ಕೊಠಡಿಗಳ ಮುಂಭಾಗದಲ್ಲಿ ಅಳವಡಿಸಲಾಗಿತ್ತು. ಉಳಿದ ಎಲ್ಲಾ ಕೊಠಡಿಗಳಲ್ಲೂ ಹಾಕುತ್ತೇವೆ ಎಂದು ತಹಶಿಲ್ದಾರರು ಭರವಸೆಯನ್ನು ನೀಡಿದರು. 

ಸಾಕಷ್ಟು ಜನರು ಆಹಾರ ಇಲಾಖೆಯಲ್ಲಿ ರೇಷೇನ್ ಕಾರ್ಡ್‌ ಪಡೆಯಲು ಅಲೆದಾಟ ಮಾಡುತ್ತಿರುವುದನ್ನು ಕೆ ಆರ್ ಎಸ್ ಪಕ್ಷದ ನಿಯೋಗದ ಬಳಿ ಹಂಚಿಕೊಂಡರು.  ಚನ್ನಮ್ಮ ಎಂಬ ಮಹಿಳೆ ನಾನು ಪಡಿತರ ಚೀಟಿ (ರೇಷೇನ್ ಕಾರ್ಡ್‌)ಗಾಗಿ ಅರ್ಜಿ ಸಲ್ಲಿಸಿ ಎರಡು ವರ್ಷದಿಂದ ಅಲೆದಾಡುತ್ತಿದ್ದೇನೆ ಎಂದು ಹೇಳಿದರು. ಆಗ ಸಂಬಂಧ ಪಟ್ಟ ಅಧಿಕಾರಿಯೊಂದಿಗೆ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಜ್ಞಾನ ಸಿಂಧು ಸ್ವಾಮಿರವರು ವಿಚಾರಣೆ ಮಾಡಿ ಅರ್ಜಿ ಸಲ್ಲಿಸಲು   ಪೋರ್ಟಲ್  ತೆರೆಯುವಂತೆ ತಹಶಿಲ್ದಾರರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು. ಕೆ. ಆರ್‌. ಎಸ್‌. ಪಕ್ಷದ ನಿಯೋಗ ಕಚೇರಿಯ ಸ್ವಚ್ಛತೆ ಮತ್ತು ಸಾರ್ವಜನಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಪರೀಶೀಲನೆ  ಮಾಡಿತು. 

ಕೆಲವೊಂದು ಕೊಠಡಿಗಳಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇರಲಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ, ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ ಹಾಗೂ ತೀರ ಅಶುದ್ಧವಾಗಿತ್ತು ಇದನ್ನೆಲ್ಲಾ ಕಂಡು ನಿಯೋಗ ಬೇಸರ ವ್ಯಕ್ತಪಡಿಸಿತು ಮತ್ತು ತಹಶಿಲ್ದಾರರ ಗಮನಕ್ಕೆ ತಂದು ಸರಿ ಪಡಿಸುವಂತೆ ಆಗ್ರಹಿಸಿತು. 

ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ ಆದೇಶದಂತೆ ಸರ್ಕಾರಿ ಕಚೇರಿಗಳಲ್ಲಿ ಯಾವೆಲ್ಲಾ ಸೌಲಭ್ಯಗಳು ಇರಬೇಕು ಮತ್ತು ಅಧಿಕಾರಿಗಳು ಯಾವ ರೀತಿ ಅವರ ಕರ್ತವ್ಯವನ್ನು ನಿರ್ವಹಿಸಬೇಕು ಅನ್ನುವ ಅಂಶಗಳ ಪಟ್ಟಿಯಲ್ಲಿ ಕಂಡು ಬಂದ ಕುಂದು ಕೊರತೆಗಳ ಹಾಗೂ ಕಚೇರಿಯಲ್ಲಿ ಕೆ ಆರ್ ಎಸ್ ಪಕ್ಷದ ನಿಯೋಗಕ್ಕೆ ಕಂಡುಬಂದ ನೂನ್ಯತೆಗಳನ್ನು ಪಟ್ಟಿ ಮಾಡಿ ಶಿಗ್ಗಾವಿ ತಾಲೂಕು ಕಚೇರಿಯ ತಹಶೀಲ್ದಾರ ರವರಿಗೆ ನೀಡಲಾಯಿತು. ಹಾಗೂ ಶಿಗ್ಗಾವಿ ತಾಲ್ಲೂಕ (ತಹಶೀಲ್ದಾರ್) ಕಚೇರಿ ನಗರದ ಹೊರಗೆ ಮತ್ತು ದೂರ ಇರುವುದರಿಂದ ಸಾರ್ವಜನಿಕರಿಗೆ ದಿನನಿತ್ಯ ಬಂದು ಹೋಗಲು ತೊಂದರೆಯಾಗುತ್ತಿದೆ ಆದ್ದರಿಂದ ಕಚೇರಿಗೆ ಬಂದು ಹೋಗುವವರಿಗೆ ಸರ್ಕಾರಿ  ಬಸ್ಸಗಳ ವ್ಯವಸ್ಥೆ ಮಾಡಿ ಎಂದು ತಿಳಿಸಿದರು. 

ತಹಸಿಲ್ದಾರರವರು ಕೆ ಆರ್ ಎಸ್ ಪಕ್ಷದ   ಲಂಚಮುಕ್ತ ಅಭಿಯಾನದ ಮನವಿಯನ್ನು   ಸ್ವೀಕರಿಸಿ, ಪಡಿತರ ಚೀಟಿಗೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೆ ಪತ್ರವನ್ನು ಬರೆದು ಪಡಿತರ ಚೀಟಿಯ ಅರ್ಜಿ ದಾರರಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುವಂತೆ ತಿಳಿಸುತ್ತೇನೆ.  

ಶಿಗ್ಗಾವಿ ನಗರದಿಂದ ಸಾರ್ವಜನಿಕರಿಗೆ ಬಂದು ಹೋಗಲು ಬಸ್ಸನ ವ್ಯವಸ್ಥೆ ಮಾಡಲು ಕೆಎಸ್‌ಆರ್ಟಿಸಿ ಅಧಿಕಾರಿಗಳಿಗೆ ಪತ್ರವನ್ನು ಬರೆದು ಮನವಿ ಮಾಡುತ್ತೇನೆ ಹಾಗೂ ನಮ್ಮ ಕಚೇರಿಯ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇನೆ ಹಾಗೂ ನಮ್ಮ ಸಿಬ್ಬಂದಿ ಸಾರ್ವಜನಿಕರ ಕೆಲಸಕ್ಕೆ ಲಂಚ ಪಡೆಯದೆ ಮತ್ತು ಅವರ ಕೆಲಸ ವಿಳಂಬ ಮಾಡದೆ ನಿಗದಿತ ಅವಧಿಯಲ್ಲಿ ಮಾಡುವಂತೆ ಸಭೆ ಮಾಡಿ ತಿಳಿಸುತ್ತೇನೆ ಎಂದು ಕೆ. ಆರ್‌. ಎಸ್‌. ಪಕ್ಷದ ನಿಯೋಗ ಮತ್ತು ಸಾರ್ವಜನಿಕರ ಮುಂದೆ ತಿಳಿಸಿದರು.  

ರಾಜ್ಯ ಕಾರ್ಯದರ್ಶಿ ಜ್ಞಾನ ಸಿಂಧೂ ಸ್ವಾಮಿ, ರಾಜ್ಯ ಕಾರ್ಯದರ್ಶಿ ಸೋಮಸುಂದರ್, ರಾಜ್ಯ ಯುವ ಘಟಕದ ಕಾರ್ಯದರ್ಶಿ  ವೆಂಕಟೇಶ್ ಯುವಧ್ವನಿ,  ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮಠದ್,  ಆನಂದ್, ರಮೇಶ್ ಗೌಡ, ಗಜೇಂದ್ರ ಕುಮಾರ್‌ಗೌಡ, ಹಾವೇರಿ ಜಿಲ್ಲೆಯ ಕಾರ್ಯದರ್ಶಿಗಳಾದ ಧರ್ಮರಾಜ, ಈರಣ್ಣ ಬಾರಕೇರ್ ಮತ್ತು  ಹಾಗೂ ಇತರ ಪಕ್ಷದ ಸೈನಿಕರು ಹಾಜರಿದ್ದರು. 


ಸುದ್ದಿ ಓದಿ