ವೀರ ವನಿತೆ ಒನಕೆ ಓಬವ್ವಳ ಶೌರ್ಯ ಸಾಹಸ ಎಲ್ಲರಿಗೂ ಮಾದರಿ
ಲೋಕದರ್ಶನ ವರದಿ
ಶಿಗ್ಗಾವಿ 12: ಕನಕದಾಸರ ಚಿಂತನೆಗಳನ್ನು ಮತ್ತು ಅವರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡುವ ಅವಶ್ಯಕತೆ ಇದೆ ಹಾಗೆಯೇ ವೀರ ವನಿತೆ ಒನಕೆ ಓಬವ್ವಳ ಶೌರ್ಯ ಸಾಹಸ ಎಲ್ಲರಿಗೂ ಮಾದರಿಯಾಗಿದೆ ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ತಾಲೂಕ ಆಡಳಿತ ವತಿಯಿಂದ ಕನಕ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿಯ ಪ್ರಯುಕ್ತ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಅವರು ಮಾತನಾಡಿ ಕುಲ ಕುಲವೆಂದು ಹೊಡೆದಾಡಬೇಡಿರಿ ನಿಮ್ಮ ಕುಲದ ನೆಲೆಯೇನೇನಾದರು ಬಲ್ಲಿರಾ ಎಂದು ಹೇಳಿದ ಕನಕದಾಸರ ನುಡಿಯು ಇವತ್ತಿನ ಸಂದರ್ಭಕ್ಕೂ ಪ್ರಸ್ತುತ ಇವತ್ತಿನ ಯುವ ಪೀಳಿಗೆಯನ್ನು ಜಾತಿ ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಆ ಹಿನ್ನೆಲೆಯಲ್ಲಿ ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಹಾಗೆಯೇ ನಮ್ಮ ನಾಡು ದೇಶದ ರಕ್ಷಣೆಯ ಸಂದರ್ಭ ಬಂದಾಗ ವೀರವನಿತೆ ಒನಕೆ ಓಬವ್ವ ಕೋಟೆಯ ರಕ್ಷಣೆಗಾಗಿ ಶತ್ರುಗಳನ್ನು ಹಿಮ್ಮೆಟಿಸಿ ಪ್ರಾಣ ಕೊಟ್ಟ ಗಟ್ಟಿಗಿತ್ತಿಯಾಗಿದ್ದರು ಒನಕೆ ಓಬವ್ವರ ಶೌರ್ಯ ಸಾಹಸಮಯ ಜೀವನವನ್ನು ಇವತ್ತಿನ ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಂಡರೆ ಎಂತಹ ಸಮಸ್ಯೆಗಳನ್ನು ಸಹ ಎದುರಿಸಬಲ್ಲಳು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಶಿವಾನಂದ ರಾಣೆ ಮಾತನಾಡಿದರು. ಕೃಷಿ ಸಹಾಯಕ ನಿರ್ದೇಶಕ ಸುರೇಶಬಾಬು ದೀಕ್ಷಿತ, ಕಂದಾಯ ನಿರೀಕ್ಷಕ ಐ.ಎಂ.ಪಾಟೀಲ, ದಲಿತ ಮುಖಂಡರಾದ ಕರೆಪ್ಪ ಕಟ್ಟಿಮನಿ, ಅಶೋಕ ಕಾಳೆ, ಪಕ್ಕಿರಪ್ಪ ಬನ್ನಿಮಟ್ಟಿ, ಶಿವಪುತ್ರಪ್ಪ ಚಲವಾದಿ, ಚಂದ್ರಶೇಖರ ಡೊಳ್ಳೆಶ್ವರ, ಸುರೇಶ ಹರಿಜನ, ಬಸವರಾಜ ಕುರಗೋಡಿ, ಹಾಗೂ ತಾಲೂಕ ಆಡಳಿತ ಸಿಬ್ಬಂದಿ ಸಾರ್ವಜನಿಕರು ಹಾಜರಿದ್ದರು.