ರಕ್ತದೊತ್ತಡ ಹಾಗೂ ಮಧುಮೇಹ ರೋಗಿಗಳ ತಪಾಸಣೆ
ಹುಕ್ಕೇರಿ 22: ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಎಮ್.ಎಮ್.ನರಸನ್ನವರ ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಶುಕ್ರವಾರದಂದು ವಯೋವೃದ್ದರು ಹಾಗೂ ರಕ್ತದೊತ್ತಡ ಹಾಗೂ ಮಧುಮೇಹ ರೋಗಿಗಳ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ 100 ಕ್ಕೂ ಮಿಕ್ಕಿ ರೋಗಿಗಳ ತಪಾಸಣೆ ನಡೆಸಿ ಅವರಿಗೆ ಸೂಕ್ತ ಸಲಹೆ ನೀಡಲಾಯಿತು. ಸರಕಾರ ಬಡ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರಕಾರ ಬಿ.ಪಿ.ಎಲ್ ಕಾರ್ಡ ಹೊಂದಿದವರಿಗೆ 5 ಲಕ್ಷ ರೂ ಗಳ ವರೆಗೆ ಉಚಿತವಾಗಿ ಆಯುಷ್ಯಮಾನ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ. 6 ಫೆಭ್ರುವರಿಯಂದು ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಡಾ. ನರಸನ್ನವರ ಅವರು ಕರೆ ನೀಡಿದರು.
ಸಂತೋಷ ಪಾಟೀಲ, ಮಂಜುನಾಥ ಉಪ್ಪಾರ, ಸಚೀನ ಕೊಂಕಣಿ, ಪ್ರಮೀಳಾ ಹಿಪನ್ನಾಳಕರ ಇವರು ರಕ್ತದೊತ್ತಡ ಹಾಗೂ ಮಧುಮೇಹ ರೋಗಿಗಳ ಪರೀಕ್ಷೆ ನಡೆಸಿದರು.