ಚಿಕ್ಕೋಡಿ

ಅಬ್ಬರದ ಮಳೆಯಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಗಡಿ ಭಾಗದ ನದಿಗಳು: ನದಿ ಪಾತ್ರದ ದೇವಸ್ಥಾನಗಳು ಜಲಾವೃತ

ಅಬ್ಬರದ ಮಳೆಯಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಗಡಿ ಭಾಗದ ನದಿಗಳು: ನದಿ ಪಾತ್ರದ ದೇವಸ್ಥಾನಗಳು ಜಲಾವೃತ

ಚಿಕ್ಕೋಡಿ, ಆಗಸ್ಟ್ 6: ನೆರೆಯ ಮಹಾರಾಷ್ಟ್ರ ಕೊಂಕಣ ಭಾಗ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯಲಾರಂಭಿಸಿದೆ. ಹೀಗಾಗಿ ನದಿಗಳಿಗೆ ಅಪಾರ ಪ್ರಮಾಣ ನೀರು ಹರಿದು ಬರುವುದರಿಂದ ಕೃಷ್ಣಾ.ದೂಧಗಂಗಾ ಹಾಗೂ ವೇಧಗಂಗಾ ನದಿಗಳಿಗೆ ಸಂಭವನೀಯ ಪ್ರವಾಹ ಎದುರಾಗಿದೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ 1.2 ಲಕ್ಷ ಕ್ಯಸೆಕ್ ಹಾಗೂ ದೂಧಗಂಗಾ ಮತ್ತು ವೇಧಗಂಗಾ ನದಿಗಳಿಗೆ 29 ಸಾವಿರ ಕ್ಯುಸೆಕ್ ಒಟ್ಟು 1.31 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರಲಾರಂಭಿಸಿದೆ.

ಚಿಕ್ಕೋಡಿ ಉಪವಿಭಾಗದ ಕೆಳಹಂತದ  ಆರು ಸೇತುವೆಗಳು ಜಲಾವೃತ

ಚಿಕ್ಕೋಡಿ ಉಪವಿಭಾಗದ ಯಡೂರ - ಕಲ್ಲೋಳ, ಜತ್ರಾಟ-ಭೀವಶಿ, ಅಕ್ಕೋಳ-ಸಿದ್ದನಾಳ, ಭೋಜವಾಡಿ - ಕುನ್ನೂರ, ಕಾರದಗಾ-ಭೋಜ, ಹುನ್ನರಗಿ-ಭೋಜವಾಡಿ,  ಸೇತುವೆಗಳು ಜಲಾವೃತ ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮ ಬಳಿ ವೇದಗಂಗಾ ನದಿ ನೀರು ಹೊಲಗದ್ದೆಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಬೆಳೆದಿದ ಬೆಳೆ ಹಾನಿ ನಿಪ್ಪಾಣಿ ತಾಲೂಕಿನ ಸದಲಗಾ-ಬೊರಗಾಂವ ಜಲಾವೃತಗೊಂಡ ರಸ್ತೆಯಲ್ಲಿ ಕೊಚ್ಚಿ ಹೊಗುತಿದ್ದ ಬೈಕ ಸವಾರನ್ನು ಸ್ಥಳಿಯರಿಂದ ರಕ್ಷಣೆ ಮುಂಜಾಗ್ರತಾ ಕ್ರಮವಾಗಿ ಸೇತುವೆಗಳ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ ಮಾಡಿದ ತಾಲೂಕಾಡಳಿತ.

ಕೃಷ್ಣಾ ನದಿಗೆ ನೀರು ಹೆಚ್ಚಳ ಹಿನ್ನಲೆ ರಾತೋರಾತ್ರಿ ನದಿ ತೀರಕ್ಕೆ ಭೇಟಿ ನೀಡಿದ ತಾಲುಕಾಡಳಿತ ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವಿಂದ್ರ ಕರಲಿಂಗನ್ನವರ ಹಾಗೂ ತಾಲೂಕಾ ಅಧಿಕಾರಿಗಳು ಕೃಷ್ಣಾ ನದಿ ತೀರದ ಯಡೂರಕ್ಕೆ ಭೇಟಿ ನೀಡಿ ಪರಿಶೀಲನೆ ಪ್ರವಾಹ ಮುಂಜಾಗ್ರತ ಕ್ರಮವಾಗಿ ಆಗಮಿಸಿದ ಎನ್.ಡಿ.ಆರ್.ಎಪ್ ತಂಡದ ಜೊತೆ ಚರ್ಚೆ ನಡೆಸಿ, ಪ್ರವಾಹ ಮುಂಜಾಗೃತ ಕ್ರಮಕ್ಕೆ ರೆಡಿಯಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸುದ್ದಿ ಓದಿ