ಶಿಗ್ಗಾವ್

ರಾಜ್ಯ ಮಹಿಳಾ ಸಮಾವೇಶ ಮಾಡಲು ಬೊಮ್ಮಾಯಿ ಚಿಂತನೆಯಲ್ಲಿದ್ದಾರೆ : ಸಾತಣ್ಣವರ

ರಾಜ್ಯ ಮಹಿಳಾ ಸಮಾವೇಶ ಮಾಡಲು  ಬೊಮ್ಮಾಯಿ ಚಿಂತನೆಯಲ್ಲಿದ್ದಾರೆ : ಸಾತಣ್ಣವರ

ಶಿಗ್ಗಾವಿ 15 : ವಿವಿಧ ಸಂಘಗಳು ಸಾಲ ಪಡೆದು ಮರಳಿ ಕಟ್ಟುವ ಮೂಲಕ ಬ್ಯಾಂಕಿನ ಬೆಳವಣಿಗೆಗೆ ಸಹಕರಿಸಬೇಕು, ಪ್ರತಿ ಗ್ರಾಮಗಳಲ್ಲಿ ಮಹಿಳೆಯರು 25 ಮಹಿಳಾ ಸಂಘಗಳನ್ನು ರಚಿಸುವಂತವರಾಗಬೇಕು ಸಿಎಂ ಬೊಮ್ಮಾಯಿಯವರು ಒಂದು ರಾಜ್ಯ ಮಹಿಳಾ ಸಮಾವೇಶ ಮಾಡಲು ಚಿಂತನೆಯಲ್ಲಿದ್ದಾರೆ ಎಂದು ಕೆಸಿಸಿ ಬ್ಯಾಂಕ್ ನಿದರ್ೇಶಕ ಗಂಗಣ್ಣ ಸಾತಣ್ಣವರ ಹೇಳಿದರು.

ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ಕನರ್ಾಟಕ ರಾಜ್ಯ ಸಹಕಾರಿ ಮಹಾ ಮಂಡಳ ಬೆಂಗಳೂರ, ಜಿಲ್ಲಾ ಸಹಕಾರಿ ಯುನಿಯನ್ ಹಾವೇರಿ, ಸಹಕಾರ ಇಲಾಖೆ ಹಾವೇರಿ

ಕೆಸಿಸಿ ಬ್ಯಾಂಕ್ ಧಾರವಾಡ, ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಹಾಗೂ ತಾಲೂಕಿನ ಎಲ್ಲ ವಿಧದ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ 69 ನೇ ಸಹಕಾರಿ ಸಪ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಷ್ಟ್ರೀಕೃತ ಬ್ಯಾಂಕಗಳೊಂದಿಗೆ ನಮ್ಮ ಸಹಕಾರಿ ಶಾಖೆಗಳು ಪೈಪೋಟಿ ಮಾಡಬೇಕಿದ್ದು, ಈಗಾಗಲೇ 10.36 ಕೋಟಿ ಲಾಭ ಬಂದಿದೆ ಅದು ನಿಮ್ಮ ಸಹಕಾರದಿಂದ ಆಗಿದ್ದು ತಾಲೂಕಿನ ರೈತರಿಗೆ ಅನುಕೂಲವಾಗಲು ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ ಅಲ್ಲದೇ ಸಿಎಂ ತಾಯಿ ಗಂಗಮ್ಮ ಬೊಮ್ಮಾಯಿಯವರ ಸಂಸ್ಥೆಯಿಂದ ಪ್ರೋತ್ಸಾಹಧನವನ್ನು ನೀಡುವವರಿದ್ದಾರೆ ಅದನ್ನ ಸದುಪಯೋಗ ಪಡಿಸಿಕೊಳ್ಳಬೇಕು, ಒಂದು ಸಾವಿರ ಸಂಘಗಳನ್ನು ರಚಿಸಿ ಜಾಗೃತರಾಗಬೇಕೆಂದರು. 

ಕನರ್ಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿದರ್ೇಶಕ ಬಸವರಾಜ ಅರಬಗೊಂಡ ಮಾತನಾಡಿ ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ತನ್ನದೇ ಆದ ದೊಡ್ಡ ಸವಾಲಿದ್ದು ಆ ಸವಾಲನ್ನು ದೂರದೃಷ್ಟಿಯೋಳಗೆ ವಿಚಾರ ಮಾಡಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳು ಸರಕಾರಿ ಇಲಾಖೆಯನ್ನು ಪ್ರತ್ತೇಕವಾಗಿ ವಿಭಜಿಸಿ ಇಡಿ ದೇಶಾದ್ಯಂತ ಈ ಸರಕಾರಿ ವ್ಯವಸ್ಥೆಯನ್ನು ಬಲಪಡಿಸಬೇಕು, ಮೂಲಬೂತ ಸೌಲಭ್ಯಗಳನ್ನು ನಿಮರ್ಾಣ ಮಾಡಬೇಕು, ಜನತೆಗೆ ಸಹಕಾರಿ ರಂಗವನ್ನು ರಾಷ್ಟ್ರೀಕೃತ ಬ್ಯಾಂಕಿನ ಜೊತೆಗೆ ಪೈಪೋಟಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಬಹಳ ಯೋಚನೆಗಳನ್ನು ಮಾಡಿ ಪ್ರಧಾನಿ ಮೋದಿಯವರು ಸಹಕಾರಿ ಸಚಿವರನ್ನಾಗಿ ಅಮಿತ್ ಷಾ ಅವರನ್ನು ನೇಮಕ ಮಾಡಿದರು, ಅವರ ನೇಮಕವಾದ ನಂತರ ಸಹಕಾರಿ ರಂಗದ ಕ್ಷೇತ್ರ ಬಹಳಷ್ಟು ಬದಲಾವಣೆಯನ್ನು ಕಂಡಿದೆ ಎಂದರು.

ಸಹಕಾರಿ ಸಂಘದ ಲೆಕ್ಕ ಪರಿಶೋಧನಾ ಇಲಾಖೆಯ ನಿವೃತ್ತ ಉಪನಿದರ್ೇಶಕ ಪಿ ಪಿ ಗಾಯಕವಾಡ ಉಪನ್ಯಾಸ ನೀಡಿದರು, ಧಾರವಾಡ ಕೆಸಿಸಿ ಬ್ಯಾಂಕ್ನ ಅದ್ಯಕ್ಷ ಮಲ್ಲಿಕಾಜರ್ುನ ಹೊರಕೇರಿ, ಅದ್ಯಕ್ಷತೆ ವಹಿಸಿದ್ದ ಹಾವೇರಿ ಜಿಲ್ಲಾ ಯೂನಿಯನ್ನ ಅದ್ಯಕ್ಷ ಶಿವಾನಂದ ರಾಮಗೇರಿ ಮಾತನಾಡಿದರು, ಸಾನಿದ್ಯವನ್ನು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು, ಕಾರ್ಯಕ್ರಮದಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಬಸನಗೌಡ ಮೇಗಲಮನಿ, ಆಜ್ಮತ್ ಉಲ್ಲಾಖಾನ್, ಗಾಯತ್ರಿ ಕಕ್ಕಳಮೇಲಿ, ಎಸ್ ಜಿ ಶೇಖರ್, ರಮೇಶ ಬಗಲಿ, ಲಲಿತಾ ಹಿರೇಮಠ, ವೀರಣ್ಣ ಬಡ್ಡಿ, ಪ್ರಕಶ ಬಾರಕೇರ, ಶಿವಾನಂದ ಕಮಡೊಳ್ಳಿ, ಪರಮೇಶ್ವರಪ್ಪ, ಎನ್ ಸಿ ಪೂಜಾರ, ಶಿವಾನಂದ ನೀಲಗುಂದ, ರವಿ ಕಳ್ಳಿಮನಿ, ಎಸ್ ಎಸ್ ಹಿರೇಮಠ ಸೇರಿದಂತೆ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಅದ್ಯಕ್ಷರು, ದಸ್ಯರು ಸಿಬ್ಬಂದಿಗಳು ಇದ್ದರು. 

 

ಸುದ್ದಿ ಓದಿ