ಮಹಲಿಂಗಪುರ

ಶಂಕ್ರೆಪ್ಪ ದೇಹದಾನ

ಶಂಕ್ರೆಪ್ಪ ದೇಹದಾನ
ದೇಹದಾನಿ ಶಂಕ್ರೆಪ್ಪ ಹನಗಂಡಿ ಭಾವಚಿತ್ರ

ಮಹಾಲಿಂಗಪುರ: ಪಟ್ಟಣದ ಕುಬಸದ ಗಲ್ಲಿ ನಿವಾಸಿ ಶಂಕ್ರೆಪ್ಪ ಮುರಿಗೆಪ್ಪ ಹನಗಂಡಿ (72) ಅವರು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಗೆ ಮರಣೋತ್ತರ ದೇಹದಾನದ ವಾಗ್ದಾನ ಮಾಡಿದ್ದಾರೆ. 

ಶ್ರಮಜೀವಿ ಶಂಕ್ರೆಪ್ಪ ಅವರಿಗೆ ಪತ್ನಿ, ಪುತ್ರಿ, ಮೂವರು ಪುತ್ರರು, ನಾಲ್ವರು ಮೊಮ್ಮಕ್ಕಳು ಇದ್ದಾರೆ. ಕಳೆದ ನಾಲ್ಕು ದಶಕಗಳಿಂದ ಆರಂಭಿಸಿದ ಪತ್ರಿಕಾ ವಿತರಣೆ ಕಾಯಕವನ್ನು ಇಳಿ ವಯಸ್ಸಿನಲ್ಲೂ ಮುಂದುವರೆಸಿದ್ದಾರೆ. ನಿತ್ಯ ನಸುಕಿನ ಜಾವ ಎದ್ದು ಪತ್ರಿಕಾ ವಿತರಣೆ ಕಾರ್ಯದಲ್ಲಿ ಜೀವ ಸವೆಸುತ್ತಿದ್ದಾರೆ. ಮಾಡುತ್ತಿದ್ದಾರೆ. ಇದೀಗ ಸತ್ತ ನಂತರವೂ ದೇಹ ಸವೆಸುವ ಉದ್ದೇಶದಿಂದ ದೇಹದಾನದ ವಾಗ್ದಾನ ಮಾಡಿದ್ದಾರೆ. 

ಸ್ವಪ್ರೇರಣೆಯಿಂದ ಭರ್ತಿ  ಮಾಡಿದ ಅರ್ಜಿಯನ್ನು ಮಹಾಲಿಂಗಪುರದ ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ ಅವರ ಮೂಲಕ ಬೆಳಗಾವಿಗೆ ರವಾನಿಸಿದ್ದರು. ಬೆಳಗಾವಿ ಆಸ್ಪತ್ರೆಯವರು ಶಂಕ್ರೆಪ್ಪ ಅವರಿಗೆ ಪ್ರಶಂಸಾ ಪತ್ರ ಹಾಗೂ ಗುರುತಿನ ಪತ್ರ ಕಳಿಸಿದ್ದಾರೆ.



ಸುದ್ದಿ ಓದಿ