ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ: ನಂದೇಶ ಲಾತುರ
ಮಹಾಲಿಂಗಪುರ, 24 ; ಎಲ್ಲಾ ದಾನಗಳಿಗಿಂತ ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು.ರಕ್ತದಾನವು ಹಲವರ ಪ್ರಾಣ ಉಳಿಸಲು ನೆರವಾಗುತ್ತದೆ ಎಂದು ನಗರದ ಯುವ ಮುಖಂಡರಾದ ನಂದೇಶ ಲಾತುರ ಹೇಳಿದರು.
ನಗರದ ಮುಧೋಳ ರಸ್ತೆಯಲ್ಲಿ ಇರುವ ಡಾ.ವಿ.ಪಿ. ಕನಕರಡ್ಡಿ ಮೆಮೋರಿಯಲ್ ಬ್ಲಡ್ ಸೆಂಟರ್ (ರಕ್ತ ಸಂಗ್ರಾಹಲಯದಲ್ಲಿ) ಸ್ನೇಹಿತನ ಪತ್ನಿಗೆ ತುರ್ತುಸ್ಥಿತಿಯಲ್ಲಿ ರವಿವಾರ ಹಲವಾರು ಸ್ನೇಹಿತರು ಸೇರಿ ರಕ್ತದಾನ ಮಾಡಿ ಮಾತನಾಡಿದರು.
ನಂತರ ಸಿದ್ದು ಚೌಗಲಾ ಮಾತಾನಾಡಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮತ್ತು ನಮ್ಮ ನಗರದಲ್ಲಿ ಪ್ರತಿನಿತ್ಯ ಸಾವಿರಾರು ರೋಗಿಗಳಿಗೆ ರಕ್ತದ ಅವಶ್ಯಕತೆ ತುಂಬಾ ಇದೆ. ಆರೋಗ್ಯವಂತ ಪ್ರತಿಯೊಬ್ಬರು ಯಾವುದೇ ತಪ್ಪು ಕಲ್ಪನೆ ಇಟ್ಟುಕೊಳ್ಳದೆ.ರಕ್ತದಾನ ಮಾಡುವ ಮೂಲಕ ಇತರರ ಪ್ರಾಣ ಉಳಿಸಲು ಮುಂದಾಗಬೇಕು ಎಂದರು.
ಅಪಘಾತಕ್ಕೆ ತುತ್ತಾಗಿ ಗಾಯಗೊಂಡವರು ಹಾಗೂ ಇತರೆ ಅನಾರೋಗ್ಯ ಪೀಡಿತರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇದ್ದಾಗ ಅವರು ಪಡುವ ಸಂಕಷ್ಟ ಅಷ್ಟಿಷ್ಟಲ್ಲ.ಅಂತವರ ನೋವು,ಕಷ್ಟಗಳನ್ನು ನೋಡಿ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಹಲವರ ಜೀವ ಉಳಿಸಲು ಸಂಕಲ್ಪ ತೊಡಬೇಕು ಎಂದು ಮಚೆಂರ್ಟ್ ನೇವಿ ಅಧಿಕಾರಿಯಾದ ರಾಘವೇಂದ್ರ ಮಾಳಗಿ ಹೇಳಿದರು.
ಇದೇ ಸಂದರ್ಭದಲ್ಲಿ ರವೀಂದ್ರ ಉಳ್ಳಾಗಡ್ಡಿ, ರಾಯಪ್ಪ ಕಂಬಾರ ರಕ್ತದಾನ ಮಾಡಿದರು. ಟೆಕ್ನಿಕಲ್ ಮೇಲ್ವಿಚಾರಕರಾದ ಮಂಜುಳಾ ಕೋರಿ,ರವಿ ಹಂದಿಗುಂದ, ಮಲ್ಲಿಕಾರ್ಜುನ ಬಡಿಗೇರ, ಸಿದ್ದು ಗೋಕಾರ, ಅನಿಲ ಖವಾಸಿ,ಚೇತನ ಬಂಡಿವಡ್ಡರ,ದಾನೇಶ ಡೊಂಬರ, ಸೇರಿದಂತೆ ಇತರರಿದ್ದರು.