ಮಹಲಿಂಗಪುರ

ರಕ್ತದಾನದಿಂದ ಅನೇಕ ಜೀವಗಳನ್ನುಳಿಸಲು ಸಾಧ್ಯ: ಕುಂದಗೋಳ

ರಕ್ತದಾನದಿಂದ ಅನೇಕ ಜೀವಗಳನ್ನುಳಿಸಲು ಸಾಧ್ಯ:  ಕುಂದಗೋಳ

ಮಹಾಲಿಂಗಪುರ: ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ಹೆಚ್ಚೆಚ್ಚು ಯುವಕರು ರಕ್ತದಾನ ಮಾಡಬೇಕು. ಈ ಕಾಲದಲ್ಲಿ ಅಪಘಾತಗಳು ಹೆಚ್ಚುತ್ತಿವೆ ಆದ್ದರಿಂದ ತಮ್ಮ ರಕ್ತದಾನದಿಂದ ಅನೇಕ ಜೀವಗಳನ್ನುಳಿಸಲು ಸಾಧ್ಯವೆಂದು ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಎಸ್‌.ಐ.ಕುಂದಗೋಳ ಹೇಳಿದರು. 

ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಅಂಗ ಸಂಸ್ಥೆಗಳ ಹಾಗೂ ದೈಹಿಕ ಶಿಕ್ಷಣ, ಎನ್‌ಎಸ್‌ಎಸ್ ಹಾಗೂ ಯೂಥ್ ರೆಡ್ ಕ್ರಾಸ್ ವಿಂಗ್ ಆಶ್ರಯದಲ್ಲಿ ಕೆಎಲ್‌ಇ ಸಂಸ್ಥೆ ಬೆಳಗಾವಿಯ 106 ನೇಯ ಸಂಸ್ಥಾಪನಾ ದಿನಾಚರಣೆ ದಿನದ ನಿಮಿತ್ಯ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.ಸಂಸ್ಥಾಪನಾ ದಿನಾಚರಣೆ ನಿಮಿತ್ಯ 275 ಕ್ಕೂ ಅಧಿಕ ಅಂಗಸಂಸ್ಥೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ, ವಿದ್ಯಾರ್ಥಿಗಳನ್ನು ಮಾನಸಿಕ ಸದೃಢರಾಗಿಸಲು ಶಿಕ್ಷಕರಿಗೆ ತರಬೇತಿ ಅಲ್ಲದೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.  

ಈ ಶಿಬಿರದಲ್ಲಿ ಕೆಎಲ್‌ಇ ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು, ಉಪನ್ಯಾಸಕರು ರಕ್ತದಾನ ಮಾಡಿದರು. 

ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ವೈದ್ಯಾಧಿಕಾರಿ ಡಾ.ಸಂಜಯಕುಮಾರ ತೇಲಿ, ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಡಾ.ಬಿ.ಎಸ್‌.ಅಂಬಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕೋಳಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರೂಪಾ ಬನ್ನೂರ, ಐಟಿಐ ಕಾಲೇಜಿನ ಪ್ರಾಚಾರ್ಯ ಸಚಿನ ಅಂಗಡಿ, ದೈಹಿಕ ಶಿಕ್ಷಣ ನಿರ್ದೇಶಕ ವಿ.ಎಸ್‌.ಅಂಗಡಿ, ಎನ್‌ಎಸ್‌ಎಸ್ ಅಧಿಕಾರಿ ಎ.ಎಂ.ಉಗಾರೆ, ಯೂಥ್ ರೆಡ್‌ಕ್ರಾಸ್ ಅಧಿಕಾರಿ ಆರ್‌.ಎಸ್‌.ಪೂಜಾರಿ, ಶಿಕ್ಷಕ ರಮೇಶ ಬಾಬು ಹಲವರು ಇದ್ದರು. 

ಸುದ್ದಿ ಓದಿ