ಮಿಷನ್ ಆಸ್ಪತ್ರೆಯಲ್ಲಿ 16ರಂದು ರಕ್ತದಾನ ಶಿಬಿರ : ರಕ್ತದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗಿ
ಸಂಕೇಶ್ವರ : ರಕ್ತದಾನ ಮಾಡಿ ಇನ್ನೊಬ್ಬರಬ ಬಾಳಿಗೆ ಬೆಳಕಾಗಿ ಎಂಬ ವಾಕ್ಯದೊಂದಿಗೆ ಇಲ್ಲಿನ ಮಿಷನ್ ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಶ್ರೀಮತಿ. ಗೋದಾಬಾಯಿ ಜಿ. ಕರನಿಂಗ ಮೆಮೋರಿಯಲ್ ಫೌಂಡೇಶನ್ಮತ್ತು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಹಯೋಗದಲ್ಲಿ ಶನಿವಾರ ಆಗಸ್ಟ್ 16ರಂದು ಆಯೋಜಿಸಲಾಗಿದೆ.
ರಕ್ತದಾನ ಮಾಡಲು ಇಚ್ವಿಯಸುವ ದಾನಿಗಳು 18-55 ವರ್ಷದವರಿರಬೇಕು. 45 ಕೆ.ಜಿ. ಗಿಂತ ಮೇಲ್ಪಟ್ಟು ತೂಕವಿದ್ದವರು ರಕ್ತದಾನ ಮಾಡಬಹುದು. ರಕ್ತದಾನವು ಇನ್ನೊಬ್ಬರ ಬಾಳಿನ ಜೀವದಾನ ಆಗಬಹುದು ಈ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ಇಚ್ಚೆ ಉಳ್ಳವರು ಸಂಕೇಶ್ವರ ಮಿಷನ್ ಆಸ್ಪತ್ರೆ, ಹಳೆ ಪಿ ಬಿ ರಸ್ತೆ, ಸಂಕೇಶ್ವರ, ಹೆಚ್ಚಿನ ಮಾಹಿತಿಗಾಗಿ ಮೊ. 9810912456/ 9591461668 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.