ಬಳ್ಳಾರಿ

ಶ್ರೀರಾಮ ರಾಜು ಫೌಂಡೇಷನ್ ವತಿಯಿಂದ ರಕ್ತದಾನ ಶಿಬಿರ

ಶ್ರೀರಾಮ ರಾಜು ಫೌಂಡೇಷನ್ ವತಿಯಿಂದ ರಕ್ತದಾನ ಶಿಬಿರ

ಬಳ್ಳಾರಿ02: ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಕೆ ಆರ್ ಎಸ್ ಕಲ್ಯಾಣ ಮಂಟಪದಲ್ಲಿ ರಾಮ ರಾಜ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ನಂತರ  ರಕ್ತ ದಾನ ಮಾಡುವುದರಿಂದ ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತಿದೆ, ಮುಖ್ಯವಾಗಿ ಯುವ ಜನರು ರಕ್ತದಾನ ಮಾಡುವುದರ ಮೂಲಕ ಜೀವವನ್ನು ಉಳಿಸಲು ಸಹಕರಿಸಬೇಕೆಂದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಧರೀಣ ಎನ್ ಪ್ರತಾಪ್ ರೆಡ್ಡಿ ತಿಳಿಸಿದರು.  

ಅವರು ಇಂದು ನಗರದ ಸಂಗನಕಲ್ಲು ರಸ್ತೆಯಲ್ಲಿನ ಕೆ.ಆರ್‌.ಎಸ್ ಕಲ್ಯಾಣ ಮಂಟಪದಲ್ಲಿ ಮಹಾತ್ಮ ಗಾಂಧಿಯವರ 154ಜಯಂತಿಯ ಪ್ರಯುಕ್ತ ಶ್ರೀರಾಮರಾಜು ಫೌಂಡೇಷನ್ ಮತ್ತು ಸ್ವಾಮಿ ವಿವೇಕಾನಂದ ರಕ್ತ ನಿಧಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.  ರಕ್ತದಾನ ಮಾಡುವುದರಿಂದ ಆಗುವಂತಹ ಉಪಯೋಗಗಳು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು, ಶೇಕಡ 80 ರಷ್ಟು ಹೃದಯಾಘತವನ್ನು ತಡೆಯುವುದು, ರಕ್ತದಲ್ಲಿ ಕೊಬ್ಬು ಕರಗಲು ಸಹಕಾರಿಯಾಗುವುದು, ವಿವೇಚನಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುವುದು ರಕ್ತದಾನ ಮಾಡುವುದರಿಂದ ದೇಹದಲ್ಲಿ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ ಬದಲಾಗಿ ದೇಹವನ್ನು ಚೈತನ್ಯದಿಂದ ಇಡುತ್ತದೆ ಎಂದು ಶ್ರೀರಾಮರಾಜು ಫೌಂಡೇಷನ್ ನ ಶ್ರೀರಾಮರಾಜು ತಿಳಿಸಿ, ನಮ್ಮ ಪೌಂಡೇಷನ್ ವತಿಯಿಂದ ಕಳೆದ ಎರಡು ವರ್ಷಗಳಿಂದ ರಕ್ತದಾನ ಶಿಬಿರವನ್ನು ಏರಿ​‍್ಡಸುತ್ತಿದ್ದು ರಕ್ತದಾನಿಗಳು ಮತ್ತು ಯುವಕರ ಅತ್ಯಂತ ಉತ್ಸಾಹದಿಂದ ಸ್ವಯಂಪ್ರೇರಿತವಾಗಿ ಬಂದು ರಕ್ತದಾನವನ್ನು ಮಾಡಿದರು. ಇದರಲ್ಲಿ ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಸಂತಸದ ವಿಷಯ ಎಂದರು. 

 ಈ ರಕ್ತದಾನ ಶಿಬಿರಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಈ ಸಂದರ್ಭದಲ್ಲಿ  ಧನ್ಯವಾದಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ವನ್ನಾರೆಡ್ಡಿ ಬಿ ಡಿ ಹಳ್ಳಿ  , ಮಾಜಿ ಪಾಲಿಕೆ ಸದಸ್ಯ ಕೆ.ಎಸ್ ಅಶೋಕ್, ಹನುಮಂತ, ಗಾದಿಲಿಂಗಪ್ಪ ಉಪನ್ಯಾಸಕರು, ಮರಿಸ್ವಾಮಿ ಶಿಕ್ಷಕರು, ನಿಷ್ಠೆ ರುದ್ರ​‍್ಪ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು, ಹಾಗೂ   ಗುಡ್ಲು ರವಿ, ಗಡ್ಡಂ ತಿಮ್ಮಪ್ಪ, ಗೋವರ್ಧನ್ ಚಿತ್ತಾರ, ಡಿ ಲಕ್ಷ್ಮಿ ದೇವಿ ಲೇಬರ್ ಸೆಲ್ ಉಪಧ್ಯಕ್ಷರು, ಪಲ್ಲವಿ, ಗೀತಾ, ಹಲವಾರು ಸದಸ್ಯರು ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ