ಸ್ವಾತಂತ್ರ್ಯ ಸಾಂಗ್ರಾಮದ ಪಂಥದ ನಾಯಕ ಭಗತ್ಸಿಂಗ್ ರವರ ಜನ್ಮದಿನಾಚರಣೆ
ಬಳ್ಳಾರಿ 28: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಕ್ರಾಂತಿಕಾರಿ ನೇತಾರ ಶಹೀದ್ ಭಗತ್ ಸಿಂಗ್ ರವರ 117ನೇ ಜನ್ಮದಿನದ ಅಂಗವಾಗಿ ಪೂಜಾ ನಸಿಂರ್ಗ್ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಭಾಷಣಕಾರರಾಗಿಒಖಅ (ಮೆಡಿಕಲ್ ಸರ್ವಿಸ್ ಸೆಂಟರ್)ನ ಜಿಲ್ಲಾ ಸಲಹೆಗಾರರಾದ ಡಾ. ಎನ್ ಪ್ರಮೋದ್ರವರು ಮಾತನಾಡುತ್ತಾ ರಾಜಿರಹಿತ ಪಂಥದ ಅಗ್ರಗಣ್ಯ ನಾಯಕ ಕ್ರಾಂತಿಕಾರಿ ನೇತಾರ ಭಗತ್ ಸಿಂಗ್ ಇದು ಕೇವಲ ಒಂದು ಹೆಸರಲ್ಲ ಅವರೊಬ್ಬ ಮಹಾನ್ ಚೇತನ, ಸ್ವಾತ್ರಂತ್ರ್ಯ ಹೋರಾಟದಲ್ಲಿ ಅವರ ರಾಜಿರಹಿತ ಪಾತ್ರ ಅತ್ಯಂತ ಮಹತ್ವವಾದದ್ದು ಭಗತ್ ಸಿಂಗ್ ರವರಿಗೆ ಬ್ರಿಟಿಷ್ರವರಿಂದ ಸ್ವಾತಂತ್ರ್ಯ ಸಿಗುವುದು ಅಷ್ಟೇ ಅಲ್ಲ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕು ಎನ್ನುವುದು ಅವರ ನಿಲುವು ಆಗಿತ್ತು.
ಭಗತ್ ಸಿಂಗ್ ಕನಸು ಇನ್ನೂ ನನಸಾಗಿಲ್ಲ ಹಸಿವು ,ಬಡತನ, ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲೆ ಪ್ರತಿ 11 ನಿಮಿಷಕ್ಕೊಂದು ಅಗೌರವಗಳು ಅತ್ಯಾಚಾರಗಳು ನಡೆಯುತ್ತಿರುವುದು ಅತ್ಯಂತ ಅಮಾನವೀಯವಾಗಿದೆ ಮಹಿಳೆಯರನ್ನು ಕೇವಲ ಒಂದು ಭೋಗದ ವಸ್ತು ಎಂದು ಬಿಂಬಿಸುವ ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಸಾಂಸ್ಕೃತಿಕ ಅಧಃಪತನ ವಾಗುತ್ತಿದೆ. ಮಹಿಳೆಯರನ್ನು ಗೌರವಿಸುವಂತಹ ಸಮಾಜ ನಮ್ಮದಾಗಬೇಕಿದೆ ಇಂತಹ ಸಂದರ್ಭದಲ್ಲಿ ಮಹಾನ್ ವ್ಯಕ್ತಿಗಳ ವಿಚಾರ ಅವಶ್ಯಕತೆ ಉನ್ನತ ನೀತಿ ನೈತಿಕತೆ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಇಂತಹ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ನಾವೆಲ್ಲರೂ ಧ್ವನಿ ಎತ್ತುವಂತಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲರು ಸಾಬೀರ್ ಬಾಷಾರವರು ಮಾತನಾಡುತ್ತಾ ಇಂತಹ ಮಹಾನ್ ವ್ಯಕ್ತಿಗಳ ವಿಚಾರಗಳು ನಮಗೆಲ್ಲಾ ಅವಶ್ಯಕ ಅವರ ಕನಸು ನನಸು ಮಾಡುವ ಆಶಯದೊಂದಿಗೆ ಮುನ್ನಡೆಯೋಣ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಎಸ್ ಎಸ್ ಜಿಲ್ಲಾಅಧ್ಯಕ್ಷರಾದ ಕೆ.ಎಂ ಈಶ್ವರಿ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳಾದ ಸೌಮ್ಯಜೆ, ಅಭಿಲಾಷ, ವಿದ್ಯಾವತಿ, ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.